ಪುಟ:ಸುವರ್ಣಸುಂದರಿ.djvu/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


V ಆದರೆ ಈ ಸುವರ್ಣಸ್ಪರ್ಶದಿಂದ ನಿನ್ನ ಮನಸ್ಸು ತೃಪ್ತಿಗೊಳ್ಳು ವುದೆ ?” ಎಂದನು ಅದಕ್ಕೆ ಸುವರ್ಣಶೇಖರನು, “ತೃಪ್ತಿಗೊಳ್ಳದೆ ಹೋಗುವುದು ಹೇಗೆ ) ಎಂದು ಪ್ರತ್ಯುತ್ತರ ಕೊಟ್ಟನು c ಹಾಗಾದರೆ ಅಂತಹ ಶಕ್ತಿಯೊಂದು ನಿನಗೆ ಬಂದರೆ ನೀನು ಬೇರೆ ದುಃಖಪಡುವುದಿಲ್ಲ ವಲ್ಲವೆ ? " ಎಂದು ಆ ಮಹಾತ್ಮನು ಪುನಃ ಕೇಳ., ಅಗಕ್ಕೆ ಸುವರ್ಣ ಶೇಖರನು « ಎಲೈ ಮಹಾತ್ಮನೆ, ಇದೇನು ಹೀಗೆ ಹೇಳುವೆ ಸುವರ್ಣ ಸ್ಪರ್ಶವು ಹೇಗೆತಾನೆ ನನಗ ವ್ಯಸನವನ್ನುಂಟುಮಾಡೀತು : ಇದು ಒಂದು ಇರುವ ಪಕ್ಷಕ್ಕೆ ನನಗೆ ಸಂಪೂರ್ಣ ಸುಖಸೂಂದು ವುದಕ್ಕೆ ಬೇರೇ ಯಾವುದೂ ಬೇಡ ?” ಎಂದು ಉತ್ತರ ಕೊಟ್ಟನು ಆಗ ಆ ಮಹಾಪುರುಷನು ಆತನನ್ನು ಕುರಿತು, “ ಹಾಗೋ, ಆದರ ನಿನ್ನ ಇಷ್ಟದಂತಾಗಲಿ ನಾಳೆಯ ದಿನ ಸೂರ್ಯೋದಯದ ಕಾಲಕ್ಕೆ ನಿನಗೆ ಸುವರ್ಣ ಸ್ಪರ್ಶದ ವರವು ಸಿದ್ಧಿಸುವುದು ?” ಎಂದು ಹೇಳಿ ಕಯ್ಯ ಳನ್ನು ತೂಗುತ್ತ ಅಂತರ್ಧಾನನಾದನು. ಹೀಗೆ ಆತನು ಅಂತರ್ಧಾನವಾ ಗುವ ಸಮಯದಲ್ಲಿ ಕೊರಡಿಯಲ್ಲಿ ವಿವರಿತವಾಗಿ ಬೆಳಕು ಹೆಜ್ಜೆ ನೋಡಲಾಗದೆ ಸುವರ್ಣ ಶೇಖರನು ಕಣ್ಣುಗಳನ್ನು ತಟಕ್ಕನೆ ಮುಚ್ಚಿಕೊಂಡನು ಪುನಃ ಕಣ್ಣನ್ನು ತೆರೆಯುವ ಹೊತ್ತಿಗೆ ತನ್ನ ಚಿನ್ನದ ರಾಶಿ ವಿನಾ ಬೇರೆಯೇನೂ ಕಾಣಲಿಲ್ಲ ಆದಿನರಾತ್ರಿ ಸುವರ್ಣಶೇಖರನು ನಿದ್ರೆ ಹೋದನೋ, ಎಚ್ಚ ತಿದ್ದನೋ ಗೊತ್ತಾಗಲಿಲ್ಲ ಮಗುವಿಗ ಮಾರನೆಯ ದಿವಸ ಏನಾ ದರೂ ಆಟದ ಸಾಮಾನನ್ನು ಕೊಡುತ್ತೇನೆಂದು ಹೇಳಿದರೆ ಅದು ಹೇಗೆ ರಾತ್ರಿಯಲ್ಲಾ ಅದರ ಗಾನದಲ್ಲಿ ಇರುವುದೋ ಹಾಗೆಯೇ ಸುವರ್ಣಶೇಖರನೂ ಆರಾತ್ರಿ ಇದ್ದನು ಹಾಗೂ ಹೀಗೂ ರಾತ್ರಿ ಕಳೆಯಿತು ಅರುಣೋದಯವಾಗುವ ಹೊತ್ತಿಗೆ ಸುವರ್ಣಶೇಖ ರನು ಎಚ್ಚತ್ತು ಹಾಸುಗೆಯ ಮೇಲೆ ಮಲಗಿದ್ದ ಹಾಗೆಯೇ