ವಿಷಯಕ್ಕೆ ಹೋಗು

ಪುಟ:ಸುವರ್ಣಸುಂದರಿ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

10

ಸುತ್ತುಮುತ್ತಲೂ ಕಯ್ಗಳನ್ನು ಚಾಚಿದನು. ಮಹಾತ್ಮನ ಮಾತಿನ ಮೇರೆಗೆ ತನಗೆ ಸುವರ್ಣಸ್ಪರ್ಶವು ಇನ್ನೂ ಪ್ರಾಪ್ತವಾಗಿದೆಯೋ, ಇಲ್ಲವೋ ನೋಡಬೇಕೆಂಬ ಆತುರವು ಸುವರ್ಣಶೇಖರನಿಗೆ ಅಧಿಕವಾಗಿದ್ದಿತು. ಆದುದರಿಂದಲೇ ಆತನು ಮಂಚದ ಮಗ್ಗುಲಲ್ಲಿರುವ ಕುರ್ಚಿಯನ್ನೂ, ಮೇಜನ್ನೂ, ಇತರ ಪದಾರ್ಧಗಳನ್ನೂ ಮುಟ್ಟಿ ನೋಡಿದನು. ಮುಟ್ಟಿದ ಕೂಡಲೆ ಒಂದು ಪದಾರ್ಥವಾದರೂ ಸುವರ್ಣವಾಗಿ ಬೇರೆ ಬದಲಾಯಿಸಲಿಲ್ಲ. ಇದರಿಂದ ಅವನಿಗೆ ಏನೂ ತೋರದೆ ತಾನು ಕಂಡುದೆಲ್ಲಾ ಸ್ವಪ್ನವೋ, ಏನೋ ಎಂದು ಕೊಂಡು ತನ್ನನ್ನು ಅಪಹಾಸ್ಯ ಮಾಡುವುದಕ್ಕೆ ಆ ಮಹಾಪುರುಷನು ಒಂದುವೇಳೆ ಬಂದಿರಬಹುದೆಂದು ಭಾವಿಸಿಕೊಂಡನು.

ಮೂರನೆಯ ಪ್ರಕರಣ.

ಇನ್ನೂ ಚೆನ್ನಾಗಿ ಬೆಳಗಾಗಲಿಲ್ಲ. ಸುವರ್ಣಶೇಖರನು ಆಶಾ ಭಗ್ನನಾಗಿ ಹಾಸುಗೆಯ ಮೇಲೆ ಮಲಗಿದ್ದಾನೆ. ಚಿಂತೆಯೆಂಬುದು ನಿಮಿಷನಿಮಿಷಕ್ಕೆ ಹೆಚ್ಚುತ್ತಿದೆ. ಹೀಗೆಯೇ ಕೆಲವು ಕಾಲ ಕಳೆದುದಾಯಿತು. ಇನ್ನೇನು ಬೆಳಕು ಹರಿಯಿತು. ಸೂರ್ಯರಶ್ಮಿಗಳು ಬೀಳುತ್ತಿವೆ. ಸುವರ್ಣಶೇಖರನು ಮಲಗಿರುವ ಕೂಠಡಿಯೊಳಕ್ಕೂ ಕಿಟಕಿ ಯಿಂದ ಸೂರದ ಕಿರಣವೊಂದು ಬಿದ್ದಿದೆ. ಇದೇನು? ಓಹೋ! ಸುವರ್ಣಶೇಖರನ ಹಾಸುಗೆ, ಹೊದ್ದಿಕೆ, ಎಲ್ಲವೂ ಸುವರ್ಣಮಯವಾಗಿವೆ! ಇದನು ಕಂಡ ಸುವರ್ಣಶೇಖರನಿಗೆ ಉಂಟಾದ ಆನಂದವನ್ನು ಹೇಳತೀರದು. ಬಟ್ಟೆಯ ಒಂದೊಂದು ಎಳೆಯೂ ಚಿನ್ನವಾಗಿದೆ! ಆಹಾ! ಸುವರ್ಣಸ್ಪರ್ಶವೇ: ಸೂರ್ಯನ ರಶ್ಮಿಯು ಬೀಳುತ್ತಲೇ ಮಹಾತ್ಮನ ಅನುಗ್ರಹವು ಸಿದ್ದಿಸಿತಲ್ಲಾ!

ಹೀಗೆ ಹಾಸುಗೆ ಹೊದ್ದಿಕೆಗಳೆಲ್ಲವೂ ಸುವರ್ಣಮಯವಾದ ಕೂಡಲೆ ಸುವರ್ಣಶೇಖರು ಸಂಭ್ರಮದಿಂದ ದಿಗ್ಗನೆದ್ದು ಕೊಠಡಿ