16
ಲಾಡುಗಳಾದವು. ಒಡೆಯುವುದಕ್ಕೆ ಕೂಡ ಅವಕಾಶವಾಗಲಿಲ್ಲ ಹೀಗೆ ಆತನು ಎಲೆಯಲ್ಲಿದ್ದ ಯಾವಯಾವ ಪದಾರ್ಥವನ್ನು ಮುಟ್ಟಿದರೂ ಬಾಯಲ್ಲಿ ಹಾಕಿಕೊಂಡರೂ ಅದು ಕೂಡಲೆ ಚಿನ್ನವಾಗುತಲಿದ್ದುದರಿಂದ ಬಹು ಸಂಕಟಪಟ್ಟು ಅಯ್ಯೋ! ವಿಧಿಯೇ ನನ್ನನ್ನು ಇಂತಹ ದುಃಖಕ್ಕೆ ಗುರಿಮಾಡಿದೆಯಾ! ನಾನು ಬದುಕುವುದು ಹೇಗೆ? ಬದುಕಿದ್ದರಲ್ಲವೇ ಈ ಚಿನ್ನದಿಂದ ನನಗೆ ಪ್ರಯೋಜನ! ಆಹಾರವೇ ಇಲ್ಲದ ಮೇಲೆ ಪ್ರಾಣಮಾತ್ರವು ಜೀವಿಸುವುದು ಹೇಗೆ? ಚಿನ್ನದ ದೋಸೆಗಿಂತಲೂ ಹಿಟ್ಟಿನ ದೋಸೆಯ ಒಳ್ಳೆಯದಲ್ಲವೆ? ಈ ಚಿನ್ನದ ಲಡ್ಡುಗಳಿಂದ ಏನು ಪ್ರಯೋಜನ?" ಎಂದು ಚಿಂತಿಸಲಾರಂಭಿಸಿದನು.
ಸುವರ್ಣಸುಂದರಿ ತಂದೆಯ ಇದುರಿಗೆ ಕುಳಿತು ಭೋಜನವನ್ನು ಮಾಡುತ್ತಿದ್ದಳು. ಅವಳಿಗೆ ಯಾವ ವ್ಯತ್ಯಾಸವೂ ತೋರಲಿಲ್ಲ. ಎಂದಿನಂತೆ ಪದಾರ್ಥಗಳೆಲ್ಲವನ್ನೂ ಬೇಕಾದಷ್ಟು ತಿಂದಳು. ಸುವರ್ಣಶೇಖರನು ಕಡೆಗೆ ಪಲ್ಯಗಳನ್ನಾದರೂ ಬೇಗ ಬೇಗನ ನುಂಗಿಬಿಡಬ ಕೆಂದು, ಒಂದು ಸಣ್ಣ ಉರಳು ಗಡ್ಡೆಯನ್ನು ತೆಗೆದು ಬಾಯಲ್ಲಿ ಹಾಕಿಕೊಂಡನು. ಅದು ಕೂಡಲೆ ಚಿನ್ನವಾಗಿ ಬದಲಾಯಿಸಿದುದಲ್ಲದೆ ಬಹಳ ಬಿಸಿಯಾಗಿದ್ದುದರಿಂದ ಬಾಯನ್ನು ಸುಟ್ಟು ಬಿಟ್ಟಿತು. ಸುವರ್ಣಶೇಖರನು ನೋವನ್ನು ತಡೆಯಲಾರದೆ ಅರಚಿಕೊಳ್ಳುತ್ತಾ ಎಲೆಯನ್ನು ಬಿಟ್ಟು ಕೊರಡಿಯಲ್ಲೆಲ್ಲಾ ಕಯ್ಯಾಲುಗಳನ್ನು ಬಡಿಯುತ್ತ ಕುಣಿಯಲಾರಂಭಿಸಿದನು. ಇದನ್ನು ಸುವರ್ಣಸುಂದರಿ ನೋಡಿ ಗಾಬರಿಯಿಂದ ತಂದೆಯೇ, ಇದೇನು! ಹೀಗೆ ಮಾಡುವೆ, ಬಾಯಿ ಸುಟ್ಟು ಹೋಯಿತೇ? ಕಾರಣವೇನು? ಏಕೆ ಹೀಗೆ ಸಂಕಟ ಪಡುತ್ತೀಯೆ?" ಎಂದಳು. ಆಗ ಸುವರ್ಣಶೇಖರನು ಮಗಳನ್ನು ಕುರಿತು "ಎಲೈ ಕಂದ, ನಿನ್ನ ತಂದೆಯಗತಿ ಏನಾಗುವುದೋ, ಅವನು ಹೇಗೆ ಬದುಕುವನೋ,