ಈ ಪುಟವನ್ನು ಪ್ರಕಟಿಸಲಾಗಿದೆ
॥ಶ್ರೀ॥
॥ಶ್ರೀರಾಮತ್ಕರಣಮ್॥
ಸುಶೀಲ
ಸಮಸ್ತ ಜನನೀಂವನ್ಹೇ ಚೈತನ್ಯಸ್ತನ್ಯದಾಯಿನೀಮ್ ।
ಶ್ರೀಯುಸೀ॰ ಶ್ರೀನಿವಾಸಯ್ಯ ಕರುಣಾಮಿವರೂಮ್॥೬॥
ಪ್ರಥಮ ಪರಿಚ್ಛೇದ
(ಏಷಬೀಜ)
ಸಂಧ್ಯಾಕಾಲವು ಸಮಾಪಿಸಿದ್ದುದು, ಭಗವಂತನಾದ ಭಾಸ್ಕರನು ಸಂಧ್ಯಾಲಿಂಗನದಲ್ಲಿ ಆತುರಗೊಂಡಿದ್ದಂತೆ ಭಾಸವಾಗುತ್ತಿದ್ದುದು, ಪಶು ಪಕ್ಷಿಸಮಹಗಳು ನಿಜನಿವಾಸಗಳಿಗೆ ಭಿಮುಖವಾಗಿ, ಸ್ವಬಂಧುಗಳನ್ನು ಕುರಿತು ಕರಗುತ್ತಿದ್ದವು, ಆದರೂ ಎನೋದನು ಇನ್ನೂ ಮನೆಗೆ ಬಂದಿಲ್ಲ, ಪತಿಯ ಅಗಮನಕ್ಷೆಯಿಂದಿ ಸಾದ್ವೀಮನಿಯಾದ ಸುಶೀಲೆ, ಇನ್ನೂ ನಿರಾಹಾರೆ!
ವಿನೋದನು ಮಲಯಪುರದಲ್ಲಿ, ವಿದ್ಯಾವಂತನಾದ ಶ್ರೀಮಂತ ಯುವಕನು, ವಿದ್ಯಾವೈಭವಗಳಿಗೆ ತಕ್ಕಂತಹ ಅಧಿಕಾರವು ತನಗೆ ದೊರೆಯಲಿಲ್ಲವಾದುದರಿಂದ, ಸರ್ಕಾರದ ಉದ್ಯೋಗವಾವುದಕ್ಕೂ ಈತನು ಸೇರಿರಲಿಲ್ಲ. ಮನೆಯಲ್ಲಿ ಸತಿಪತಿಯರಲ್ಲದೆ ಮತ್ತಾರು ಇರಲಿಲ್ಲ, ಆದರೆ ಸುಶೀಲೆಯ ಸಹಾಯಕ್ಕಾಗಿ ಚೀಟಿಯೊಬ್ಬಳೂ, ಇಬ್ಬರು ಆಳುಗಳೂ ಇದ್ದರು. ಇವರೂ ಈ ವೇಳೆಯಲ್ಲಿ ತಮ್ಮ ತಮ್ಮ