ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪
ಸತೀಹಿತೈಷಿಣಿ

ತಂತ್ರ - ಸುಶೀಲೆ! ಇದೇನು? ಇಂದು ನಿನ್ನ ಮುಖವು ಇಷ್ಟು ಬಾಡಿ ಹೋಗಿರುವುದು?

ಸುಶೀಲೆ - ಅಂತಹದೇನೂ ಇಲ್ಲ.

ತಂತ್ರ - ನನಗೆ ಗೊತ್ತಿದೆ. ಸುಶೀಲೆ! ಬಲ್ಲೆನು. ಅದಕ್ಕೆಂದೇ ನಾನಿಲ್ಲಿಗೆ ಬಂದೆನು. ಇಂದು ನೀನು ಈವರೆಗೂ ಉಪವಾಸವೆಂಬುದನ್ನು ತಿಳಿದೇ ಇಲ್ಲಿಗೆ ನಾನು ಬರಬೇಕಾಯ್ತು.

ಸುಶೀಲೆ - ನಾನು ಉಪವಾಸದಿಂದ ಇದ್ದರೇನು? ಅದು ತಮ್ಮ ಆಗಮನಕ್ಕೆ ಹೇಗೆ ಹೇತುವಾದೀತು?

ತಂತ್ರ - ಅದೇ ಹೇತುವಲ್ಲದಿದ್ದರೂ, ನಾನು ನನ್ನ ಕರ್ತವ್ಯವನ್ನು ನೆರವೇರಿಸಲಿಕ್ಕೂ, ನಿನ್ನ ಗಂಡನ ನಡತೆಯನ್ನು ತಿಳಿಸಲಿಕ್ಕೂ ಬಂದೆನು. ಸುಶೀಲೆ! ಹೇಗೂ ನನ್ನ ಮನಸ್ಸಿಗೆ ಸಮಾಧಾನವಿಲ್ಲ.

ಸುಶೀಲೆ - ಅದೇಕೆ ?

ತಂತ್ರ - ದುರ್ವೃತ್ತಿ ಹೆಚ್ಚುತ್ತಿದೆ. ಯಾವಾಗಲೂ,.......................

ಸುಶೀಲೆ - ಅಷ್ಟಕ್ಕೇ ತಡೆದು. -'ಬಾವ | ಇನ್ನು ಸಾಕು! ಹೊತ್ತು ಮೀರುತ್ತಿದೆ. ನಿಮ್ಮ ಮನೆಯಲ್ಲಿ ಜನರು ಊಟಕ್ಕೆ ಕಾದಿರಬಹುದು. ಇನ್ನು ಹೊರಡಿರಿ. ಗಂಡಸರಾರೂ ಮನೆಯಲ್ಲಿಲ್ಲದ ವೇಳೆ - ಅದರಲ್ಲೂ ಇಷ್ಟು ಹೊತ್ತಿನಲ್ಲಿ ನೀವು ಬಂದುದೇ ಸರಿಯಲ್ಲ. ಅದು ಸಾಲದೆ ಇಂತಹ ಮಾತುಗಳನ್ನಾಡುವುದು ಸರ್ವತಾ ಸರಿಯಾಗಿ ಕಾಣುತ್ತಿಲ್ಲ. ಅವರು ಬಂದ ಬಳಿಕ ಅವರಲ್ಲಿಯೇ ಅವರ ದುರ್ಗುಣಗಳನ್ನು ತೋರಿಸಬಹುದು. ಈಗ ಯಾವುದೂ ಹೇಳತಕ್ಕುದಿಲ್ಲ.