ತಂತ್ರ - ಭಲೆ! ಸುಶೀಲೆ ಭಲೆ!! ಬಲು ಚೆನ್ನಾಗಿ ಹೇಳಿದೆ. ನಿನ್ನನ್ನು
ಬಿಟ್ಟು, ನಿನ್ನ ಗಂಡನೇ ನನಗೆ ಬೇಕಾದವನೋ? ಅವನಲ್ಲಿ
ನನಗೆ ನಿಜವಾದ ಅಭಿಮಾನವುಂಟೆಂದು ತಿಳಿದೆಯೋ? ನಿನ್ನ ತಂದೆ
ಅವನ ಆಸ್ತಿಗೆ ಮರುಳಾಗಿ ನ್ಯಾಯವಾಗಿಯೂ ನನಗೆ ಸಲ್ಲಬೇ
ಕಾಗಿದ್ದ ನಿನ್ನನ್ನು ಅವನಿಗೆ ಮದುವೆಮಾಡಿಕೊಟ್ಟ ಮಾತ್ರಕ್ಕೇ
ನನಗೆ ನಿನ್ನಲ್ಲಿರುವ ಅಭಿಮಾನವು ತಪ್ಪುದೆಂದಿರುವೆಯೋ?
ನೀನಿನ್ನೂ ಮುಗ್ಧೆ! ಆವುದನ್ನೂ ತಿಳಿದವಳಾಗಿಲ್ಲ, ನಿನ್ನ
ಗಂಡನಿಗೆ ನಿನ್ನಲ್ಲಿ ಸ್ವಲ್ಪವಾದರೂ ಪ್ರೇಮವಿರುವುದೆ?
ನೋಡು! ಐಶ್ವರ್ಯಕ್ಕೆ ಕೊರತೆಯಿಲ್ಲ. ಎಷ್ಟಿದ್ದರೂ ನಿನ್ನ ಮೈಮೇಲೆ
ಒಂದು ಪಾವು ಭಂಗಾರವನ್ನಾದರೂ ಹಾಕಿಲ್ಲ. ನಿನಗೆ ಸವಿ
ಯೂಟಕ್ಕಾದರೂ ಅವಕಾಶವಿರುವುದೋ ಹೇಗೆ
?............
ಈಗ ನೋಡು! ಇಷ್ಟು ಹೊತ್ತಾದರೂ ಇನ್ನೂ ಮನೆಗೆ
ಬಂದಿಲ್ಲ. ಅಲ್ಲಿ ತಾನು ಉಂಡು ನಲಿಯುತ್ತಿರುವನು. ಇಲ್ಲಿ
ನೀನು ಹಸಿದು ಸಾಯುತ್ತಿರುವೆ? ಹಣವನ್ನೆಲ್ಲಾ ಹಾಳುಮಾ
ಡುತ್ತಿರುವನು. ಸುಶೀಲೆ | ನಿನ್ನೀ ಸೌಂದರ್ಯ................
ಸುಶೀಲೆ - (ಕೋಪವನ್ನು ತಡೆಯಲಾರದೆ ತಲೆಯತ್ತಿ ದರ್ಪಿತಸ್ವರದಿಂ
ದ) "ಮಹಾಶಯ! ಕ್ಷಮಿಸಿರಿ! ನಿಮ್ಮ ಅತ್ಯುಕ್ತಿ ನನಗೆ
ಬೇಕಾಗಿಲ್ಲ. ತಮ್ಮ ಉಪದೇಶಕ್ಕಾಗಿ ಇದೆ ಇದೆ ನೂರಾರು
ವಂದನೆಗಳು! ಇನ್ನು ಹೊರಡಿರಿ!"
ತಂತ್ರ - (ಗರ್ವದಿಂದ ಪರಿಹಾಸವಾಗಿ ನಗುತ್ತೆ) - ಮುಗ್ಧೆ! ಅನ್ಯಾಯ
ವಾಗಿ ಕೆಟ್ಟು ಹೋಗುವೆ. ಈ ನವಯೌವನ ರೂಪಲಾವ
ಣ್ಯಾದಿಗಳನ್ನು ಈಗಲೇ ಸರಿಯಾದ ದಾರಿಯಲ್ಲಿ ವಿನಿಯೋಗಿಸು.
ನಿನ್ನ ಗಂಡನು ಅದರ ಬೆಲೆಯನ್ನು ತಿಳಿದವನಾಗಿಲ್ಲ! ಇನ್ನಾ
ದರೂ ನನ್ನ ಮಾತನ್ನು ಕೇಳಿ ನನ್ನೊಡನೆ ಹೊರಡು. ನಿನಗೆ