ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೪
ಸತೀಹಿತೈಷಿಣಿ

ವಿನೋ - ಉನ್ಮತ್ತನಂತೆ ವಿಕೃತಸ್ವರದಿಂದ - ಧೂರ್ತೆ! ನೀನೇ ನನ್ನ ಸುಖದ ದಾರಿಯಲ್ಲಿರುವ ಪ್ರಬಲ ಕಂಟಕೆ. ನಿನ್ನೀ ಕರ್ಮಕ್ಕೆ ತಕ್ಕ ಫಲವನ್ನು ಇಷ್ಟರಲ್ಲಿಯೇ ಹೊಂದದಿರಲಾರೆ | ತಿಳಿದೆಚ್ಚತ್ತಿರು." ಎಂದು ಧಿಕ್ಕರಿಸಿ, ಎಡಗಾಲಿಂದೊದ್ದು ನೂಕಿ ಬಾಗಿಲನ್ನು ತೆಗೆದುಕೊಂಡು ಹೊರಟುಹೋದನು.

ಅಬಲೆಯೂ, ಆರ್ತೆಯೂ, ಸತ್ಯಾಗ್ರಹಭೀತಿಸಂತಪ್ತೆಯೂ ಆದ ಸುಶೀಲೆ, ಏನನ್ನು ಮಾಡಬಲ್ಲಳು? ನೀರವವಾಗಿ ರೋದಿಸುತ್ತೆ ಅಲ್ಲಿಯೇ ಮೈ ಮರೆದು ಮಲಗಿದಳು. ಅವಳ ಆರ್ಗನ ಮನೋವ್ಯಾಕುಲವು ಎಷ್ಟು ಮಟ್ಟಿಗೆ ಇದ್ದುದೆಂಬುದನ್ನು ವರ್ಣಿಸಲು ನಿಜವಾಗಿಯೂ ನಮ್ಮ ಕ್ಷುದ್ರಲೇಖನಿಗೆ ಶಕ್ತಿಯಿಲ್ಲ.

ಸಹೃದಯಸೋದರೀ ಸೋದರರೇ!
ಭಾರತ ವರ್ಷದಲ್ಲಿ, ಎಷ್ಟು ಮನೆಗಳಲ್ಲಿ ಇಂತಹ ಸಂಸಾರಗಳಿಲ್ಲ? ಇದೇನು? ಮನೆಯೇ? ಸಂಸಾರವೆ? ನಿಷ್ಕಾರಣವಾಗಿ ಕೊಡಲ್ಪಡುವ ಕ್ರೂರದಂಡನೆಯಿಂದ ನಿಷ್ಕಪಟಿಯಾದ ಸಾಧ್ವಿಯ ಕಣ್ಗಳಿಂದ ಹರಿವ ಬೆನ್ನೀರು ಆವ ದೇಶವನ್ನು ಸುಟ್ಟು ಹಾಕಲೊಲ್ಲದು? ತನ್ನ ಸತಿಯ ನೈಜ ಮನೋಭಾವವನ್ನು ಚೆನ್ನಾಗಿ ತಿಳಿದೂ, ಸುಗುಣವತಿಯೆಂಬ ಅನುಭವವುಂಟಾಗಿದ್ದರೂ, ಅಂತಹ ನಾರೀಮಣಿಯನ್ನು ಸಂತೈಸದೆ, ಚಿಂತೆಗೀಡುಮಾಡುವಾತನು, ನಿಜವಾಗಿಯ ಕ್ಷುದ್ರ ಜೀವಿಗಳಾದ ನಾಯಿ-ನರಿಗಳಿಗೂ ಕಡೆಯಾದ ಲೋಕಕಂಟಕನೆನ್ನಿಸುವನಲ್ಲದೆ ಮಾನವನೆನ್ನಿಸುವನೆ? ಅಂತವನಿಂದ ದೇಶವು ಅಭಿವೃದ್ಧಿಗೆ ಬರುವುದೆಂಬ ಆಶೆ, ಎಳ್ಳಷ್ಟಾದರೂ ಇರುವುದೆ? ನಿರರ್ಥಕವಾದ ಅವನ ಜೀವಿತವು ಭೂಭಾರಭೂತವಲ್ಲದೆ ಮತ್ತೇನು?