ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೨೩

ನಾನು ನಂಬಿರಲಿಲ್ಲ. ಬಾಲ್ಯದಿಂದಲೂ, ತಾಯ್ತಂದೆಗಳ ಶಿಕ್ಷಣೆಯಿಂದ ಬೆಳೆದು ಈವರೆಗೂ ತಮ್ಮ ಅನುಗ್ರಹದಿಂದ ಎಷ್ಟೋ ಸುಖವನ್ನನುಭವಿಸಿರುವೆನು. ನಾನು ಅಂತಹ ಅಭಿಸಂಧಾನವನ್ನೇ ಮಾಡಬೇಕಾದುದಿಲ್ಲ! ನೀವೇ ನನ್ನ ಜೀವನಸರ್ವಸ್ವ | ಇತರರು ಆರೋಪಿಸುತ್ತಿರುವ ದೋಷಗಳು ಒಂದು ವೇಳೆ ತಮ್ಮಲ್ಲಿದ್ದರೂ, ಅದನ್ನು ನಾನು ನಿಜವಾಗಿರತಕ್ಕುವುಗಳೆಂದು ಭಾವಿಸಲಾರೆನು. ತಮ್ಮ ಕ್ಷೇಮಲಾಭವೊಂದಲ್ಲದೆ ಮತ್ತಾವುದೂ ನನಗೆ ಬೇಕಾಗಿಲ್ಲ. ಇನ್ನೇನನ್ನು ಹೇಳಲಿ? (ಸುಶೀಲೆಗೆ ಮುಂದೆ ಮಾತು ಹೊರಡದೆ ಕಣ್ಣುಗಳಲ್ಲಿ ನೀರು ತುಂಬಿತು. ಪತಿಯ ಮುಖವನ್ನು ನೋಡಿದಳು.)

ವಿನೊ - (ತಲೆದೂಗಿ ಪರಿಹಾಸದಿಂದ ನಗುತ್ತೆ) - 'ಮಾಯಾವಿನಿ! “ಅತಿವನಯಂ ಧೂರ್ತಲಕ್ಷಣಂ" ಎಂಬುದು ಸುಳ್ಳಲ್ಲ. ನಿನ್ನ ಆತ್ಮನು ಕಲುಷಿತನಾಗಿರುವನೆಂದು ನಿರ್ಧರವಾಗಿ ತಿಳಿದೆನು. ನೀನು ನನಗೆ ದ್ರೋಹವನ್ನಾಚರಿಸುತ್ತಿರುವೆಯೆಂಬುದನ್ನು ನನ್ನ ಪ್ರಿಯಜನರ ಬಾಯಿಂದ ಕೇಳಿ ತಿಳಿದೇ ಇಲ್ಲಿಗೆ ಬಂದಿರುವೆನು. ನನಗೆ ನಿನ್ನ ನಟನೆಯೊಂದೂ ರುಚಿಸುವಂತಿಲ್ಲ.' ಎಂದಾಡಿ ಭಯಂಕರವಾದ ಕೆಂಗಣ್ಣುಗಳಿಂದ ಒಮ್ಮೆ ಕೂರವಾಗಿ ಪತ್ನಿ ಯನ್ನು ನೋಡಿದನು.

ಸುಶೀಲೆ - ಉಕ್ಕಿ ಸುರಿಯುತ್ತಿದ್ದ ಕಣ್ಣೀರನ್ನು ತಡೆದು, ಗದ್ಗದಸ್ವರದಿಂದ - ಸ್ವಾಮಿನಾಥ! ನನ್ನ ಮಾತನ್ನು ನಂಬಲಾರದವರು, ತಮ್ಮನ್ನು ತಾವೇ ನಂಬಲಾರದವರು, ತಮ್ಮ ಈ ಬಗೆಯ ಸಂಶಯಕ್ಕೆ ನಾನು ಎಷ್ಟು ಮಾತ್ರಕ್ಕೂ ಪಕ್ಕಾಗತಕ್ಕವಳಲ್ಲವೆಂದು ದೃಢವಾಗಿ ತಿಳಿಯಿರಿ!" ಎಂದು ಹೇಳುತ್ತಿದ್ದಂತೆಯೇ ಪತಿಯ ಪದತಲದಲ್ಲಿ ಬಿದ್ದಳು.