ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೦
ಸತೀಹಿತೈಷಿಣಿ

ತಂತ್ರ - ಅಮ್ಮಾ! ನಾನು ಹೇಳಿದೆನೆಂದು ಬಾಯಿಬಿಟ್ಟೀರಿ. ನಮ್ಮೀ ಅಭಿಸಂಧಿ ಹೊರಬಿತ್ತೆಂದರೆ, ನನ್ನ ಮತ್ತು ನಿಮ್ಮ ಇಬ್ಬರ ತಲೆಗಳೂ ಹೋದವು! ಎಚ್ಚರಿಕೆ! - ಎಂದು ಹೇಳಿ ಹೊರಟು ಹೋದನು.

(ಸುಹೃದರೇ! ಏನೆನ್ನುವಿರಿ? ವಿನೋದನನ್ನು ದೂರುವಿರೊ? ತಂತ್ರನಾಥನನ್ನು ದೂರುವಿರೊ? ಕುತ್ಸಿತಕಾರ್ಯದಲ್ಲಿ ಬಿದ್ದರೂ, ಸಾಧ್ವಿಯಾದ ಪರಸ್ತ್ರೀಯಲ್ಲಿ ಕಲಂಕವನ್ನು ಹೊರೆಯಿಸುವನಲ್ಲದ ವಿನೋದನೇ ತಂತ್ರನಾಥನಿಗೂ ಮೇಲೆಂದಿರಲ್ಲವೇ? ಹಾಗೆಯೇ ಹೇಳಿರಿ.)