ಪುಟ:ಸುಶೀಲೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5 ಸು ಶಿ, ಲೆ ಸಿದ್ಧಾನಿ-ನಮ್ಮ ಮನೆಯಕೆ, ಎಸೂದ-ಎಂದೆ ? ಸಿದ್ಧಾನಿ: ೭ವಳೇನೋ ಉನ್ನಾರರೋಗಕ್ಕೆ ಗುರಿಯಾ -- ದೆ? ಯೆಂದೂ, ಅದರಿಂದಲೇ ತನ್ನನ್ನು ಬಾಯ್ದೆ ಬಂದ ಕಳುಹಿಸಿದಳೆಂದೂ, ಹೇಳಿದಳು. ಎನೋC-ಅದೆಂದೂ ನನಗೆ ತಿಳಿಯದು. ಸಿದ್ದಾ೩-ಹೆಂಗಸರು ಚಪಲೆಯರು; ಅವರ ಯಾವ ಮಾತನ್ನು ನಂಬಬಾರದು, ಒಂದಕ್ಕೆ ಸಾವಿರ ಕಯ್ಯಾಲುಗಳನ್ನಾದರೂ ಹುಟ್ಟಿಸಿ, ಊರಲ್ಲೆಲ್ಲಾ ಹಬ್ಬಿಸಬಲ್ಲರು, ಸಂಸಾರದ ಸ್ಥಿತಿ ಗತಿ ವಿಚಾರವು ಗುಟ್ಟಾಗಿರುವವರೆಗೂ ಚೆನ್ನಾಗಿರುವುದು. ಆ ಬಳಿಕ ರಸಹೀನವಾಗುವುದು, ಹೇಗೂ ಹೇಗಸರ ಮಾತನ್ನ ನಂಬಿ, ನಡೆವವರು ಬದುಕುವ ಸಂಭವವೇ ಇರುವುದಿಲ್ಲ. ವಿನೋದ-ಸ್ವಾಮಿ ! ನನ್ನ ಹೆಂಗಸಿನಲ್ಲಿಯೂ ಅಂತಹದೇನಾದರೂ ದೋಷವಿತಹುದೊ ? ಸಿದ್ಧಾನಿ-ನಾನೇನು ಬಲ್ಲೆನು ? ನಿನಾವಾಗಲೂ ಹೆರವರ ಮನೆಯ ಲ್ಲಿಯೇ ಬಿದ್ದಿರುವೆ ? ನಾನು ಯಾವಾಗಲೂ ಮನೆಯಲ್ಲಿಯೇ ಇದ್ದರೂ ನಮ್ಮ ಮನೆ ಹೆಂಗಸು, ನನ್ನ ಮುಂದೆಯೇ ನಡೆಯಿ ಸುವ ಕೆಲಸಗಳಿ೦ತಹವೆಂಬುದನ್ನು ನಾನೇ ತಿಳಿಯಲಾರೆನು. ಇನ್ನು ನಿನಗೆ ಹೇಳುವುದೇನು ? ವಿನೋದೆ--ನೀವು ಹಂಗಿಸಬಾರದು, ನಾನು ಯಾವುದಾದರೂ ಒಂದು ಉದ್ಯೋಗಕ್ಕೆ ಸೇರಬೇಕೆಂದಿರುವೆ, 'ಜಾಗ್ರತೆ ಭಕಾಗಿಯೇ ಸೇರುವು,