ತಂತ್ರ - ಪ್ರಾಣಭಯವಿಲ್ಲವೆಂದು ಈಗಲೇ ಪಂಡಿತರಿಂದ ತಿಳಿದು ಬಂದಿರುವೆನು, ಹೆದರಬೇಡ.
ಸುಶೀಲೆ - ಉದಾಸೀನದಿಂದ - ಸಾಯಬೇಕೆಂದೇ ಇರುವ ನನಗೆ ಪ್ರಾಣ ಭಯವೆಳ್ಳಷ್ಟೂ ಇಲ್ಲ.
ತಂತ್ರ - ಸುಶೀಲೆ, ಆಗ ನೀನು ನನ್ನ ಮಾತನ್ನು ಕೇಳಿದ್ದರೆ ಇಷ್ಟರ ತೊಂದರೆಗಳುಂಟಾಗುತ್ತಿರಲಿಲ್ಲ!! ಈ ರೋಗಕ್ಕೆ ನೀನು ತುತ್ತಾಗುತ್ತೆಯೂ ಇರಲಿಲ್ಲ. ನಿನ್ನ ಗಂಡನು, ಮರಣಭೀತಿಯಿಂದ ನರಳುತ್ತಿರುವುದಕ್ಕೂ ಅವಕಾಶವಿರುತ್ತಿರಲಿಲ್ಲ ||| ಅಂದೇ ನೀನು ನನ್ನೊಡನೆ ಬಂದಿದ್ದರೆ ಎಷ್ಟು ಸುಖವಾಗಿರಬಹುದಾಗಿತ್ತು, ಆ ಮರುದಿನವೆ ನಿನ್ನ ಗಂಡನು ಚಪಲೆಯನ್ನು ಕೊಂದನು. ಕೊಲೆಯನ್ನು ಮಾಡಿದುದಕ್ಕಾಗಿ ಕಾರಾಗಾರದಲ್ಲಿ ನರಳುತ್ತಿರುವನು. ಮರಣದಂಡನೆಯಾದರೂ ಆದೀತು! ಈಗಳಾದರೂ ನನ್ನ ಮಾತನ್ನು ಕೇಳು? ಬಾಳುವ ದಾರಿಯನ್ನು ತೋರುವೆನು.
ಸುಶೀಲೆ - ತಿರಸ್ಕಾರಭಾವದಿಂದ - ಮೂರ್ಖ! ಇಲ್ಲಿಗೇಕೆ ಬಂದೆ? ನಿಲ್ಲದೆ ಹೊರಟುಹೋಗು. ಇಹಸೌಖ್ಯವು ಸ್ಥಿರವಲ್ಲ. ನಶ್ವರಸುಖಕ್ಕಾಗಿ ಆಶೆಪಟ್ಟು ಪಾಮರನಾಗುವುದು ಮಾನವಧರ್ಮವಲ್ಲ. ಎಷ್ಟೇ ಕಷ್ಟ ನಷ್ಟಗಳುಂಟಾದರೂ ಕರ್ತವ್ಯವನ್ನು ಮೀರದೆ ನಡೆಯಿಸಿದರೆ ಶಾಶ್ವತವಾದ ಸರಸೌಖ್ಯವುಂಟಾಗುವುದು. ಕರ್ಮಕ್ಕೆ ತಕ್ಕ ಫಲಾನುಭವವು ಆರಿಗೂ ತಪ್ಪುವುದಿಲ್ಲವಾದುದರಿಂದ ನನ್ನ ಸ್ವಾಮಿ, ಕುತ್ಸಿತರ ಸಹವಾಸದಿಂದ ಮಾಡಿದ ಕರ್ಮಗಳಿಗೆ ಪ್ರಾಯಶ್ಚಿತ್ತವನ್ನು ಅನುಭವಿಸಿಯೇ ತೀರಬೇಕು. ನಾನು ಆತನ ಗತಿಯನ್ನು ಅನುವರ್ತಿಸದೆ ಸ್ವಧರ್ಮ,