ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
[9
ಸುಶೀಲೆ
೬೫

ವಿನ್ನೊಂದೆಡೆಯಲ್ಲಿಯೂ, ಅಸೂಯೆ ಮುನ್ನೊಂದೆಡೆಯಲ್ಲಿಯೂ, ಹೇಗೂ ನಾಲ್ಕು ಕಡೆಯಲ್ಲಿಯೂ ಜ್ವಾಲೆಯಂತೆ ಸುತ್ತಿ ತಪಿಸುತ್ತಿದ್ದುವು. ಕಾಮ ಮೋಹಿತನಾದ ತಂತ್ರನಾಥನು ಮುಂದಿಣಾಲೋಚನೆಯಿಲ್ಲದೆ, ಸುಶೀಲೆಯ ಕೊರಲನ್ನು ಎಡಗಯ್ಯಿ೦ದೆ ಬಿಗಿಯಾಗಿ ಹಿಡಿದು, ಬಲಗಯ್ಯನ್ನು ಮೇಲಕ್ಕೆತ್ತಿ ಎದೆಯ ಮೇಲೆ ಗುದ್ದಲು, ಸರಿಯಾಗಿ ಹಿಡಿದನು. ಅದರೆ ಆಪದ್ಬಂಧುವಾದ ಮಯೂರಿ, ಅಷ್ಟರಲ್ಲಿಯೇ ಬಂದುಗರಿಂದ ದೂರದಲ್ಲಿಯೇ ತಂತ್ರನಾಥನ ಪ್ರಯತ್ನವನ್ನು ನೋಡಿ ಅವಸರದಿಂದ ಓಡಿಹೋಗಿ ಸುಶೀಲೆಯ ತಾಯ್ತಂದೆಯರನ್ನು ಕರೆತಂದು ತೋರಿಸಿ, ಹಿಂದಿನಿಂದ ಬಂದು ತಂತ್ರನಾಥನನ್ನು ಹಿಡಿದೆಳೆದು ಕೆಳಗೆ ಕೆಡಹಿದಳು.

ಸುಶೀಲೆಯ ತಂದೆಯಾದ ಸುಜ್ಞಾನಶರ್ಮನು, ಕೆಳಗೆ ಬಿದ್ದಿದ್ದ ತಂತ್ರನಾಥನನ್ನು ನೋಡಿ, ಕರ್ಕಶಸ್ವರದಿಂದ,- ಕೃತಘ್ನ ! ಪಾಷಂಡ|! ಘಾತಕ ! ನಿನ್ನೀ ದುರ್ಜೀವಿತಕ್ಕೆ ಧಿಕ್ಕಾರ ! ನಿನ್ನ ಮಾನವ ಜನ್ಮಧಾರಣೆಗೆ ಧಿಕ್ಕಾರ !! ಧಿಕ್‌ ! ಧಿಕ್‌ |! ವಿದ್ರೋಹಿ ! ನಿನಗಿರೊ ಸಹಸ್ರಶಃ ಧಿಕ್' ! ನಿನ್ನಿ, ಘೋರಕೃತ್ಯಕ್ಕೆ ಪ್ರಾಯಶ್ಚಿತ್ತವನ್ನು ಹೊಂದು | ಎಂದು ಹೇಳುತ್ತೆ ತಂತ್ರನಾಥನ ಕಯ್ಕಾಲುಗಳನ್ನು ಕಟ್ಟಿ ಕೆಡಹಿದನು.

ಸುಶೀಲೆಯ ತಾಯಿ, -ಅಳಿಯನ ಅವಸ್ಥೆಗೆ ರೋಷ- ಕ್ಲೇಶದಿಂದ ಕಣ್ಣೀರು ಸುರಿಸುತ್ತೆ ನಿಟ್ಟುಸಿರಿಟ್ಟು-“ನಿರ್ಭಾಗ್ಯ, ನಿನ್ನೀ ದುರ್ನಡತೆಗಾಗಿ ನನಗೆಷ್ಟು ದುಃಖವೆಂಬುದನ್ನು ಬಲ್ಲೆಯಾ? ನನ್ನ ಮಗಳು ಬದುಕಿದ್ದರೆ ನಿನ್ನೀ ದುರಾಚಾರಕ್ಕಾಗಿ ಎಷ್ಟು ದುಃಖಿಸುತ್ತಿದ್ದಳೊ! ಸ್ವಲ್ಪ ಭಾವಿಸಿನೋಡು ! ಅವಳು ಅಳಿದು ಪುಣ್ಯವತಿಯೆನಿಸಿದ್ದಳಲ್ಲವೆ? ಪಾಪಿ| ನನ್ನ ಭಾಗ್ಯದೇವತೆಯಾದ ಸುಶೀಲೆಯ ಈ ವಿಪತ್ತಿಗೆ ನೀನಲ್ಲವೆ, ಕಾರಣಭೂತನೂ, ಕಾರ್ಯಕಾರಿಯೂ ಆದವನು? ನಿನಗಿ