ಚಪಲಿಯಂತವರ ಕುಹುಕಗಳು ಸ್ತ್ರೀಜಗತ್ತಿಗೇ ಅಪಕೀರ್ತಿಯನ್ನು ತರತಕ್ಕವುಗಳೆಂಬುದೂ ನಿರ್ಧರವಾಯ್ತು. ಅಲ್ಲದೆ ಸುಶೀಲೆ, ಮತ್ತು ಮಯೂರಿಯರಿಗೆ ಎಂತಹ ವಿಪತ್ತು ಪ್ರಾಪ್ನವಾಗಿದ್ದರೂ, ಎದೆಗೆಡೆದ ತಾಳ್ಮೆಯಿಂದ ಕಾರ್ಯವನ್ನು ನಿರ್ವಹಿಸಿದುದು ಉತ್ತಮಗುಣವನ್ನಿಸಿರುವದಲ್ಲದೆ, ಅವರ ಸದ್ವರ್ತನೆಯು, ಪ್ರಪಂಚಕ್ಕೇ ಪರವಾದರ್ಶ ಜೀವನವಾಗಿರುವುದೆಂದು ಹೇಳಲು ಸಂತೋಷಪಡುವೆನು." ಹೀಗೆ ಹೇಳಿ, ಮತ್ತೆ ತಂತ್ರನಾಥನನ್ನು ಕುರಿತು,-"ತಂತ್ರನಾಥ, ನಿನ್ನ ಮೇಲೆ ಮರು ಅಪರಾಧಗಳು ಆರೋಪಿತವಾಗಿವೆ. ಇದಕ್ಕೆ ನೀನೇನು ಹೇಳುವೆ ?"
ತಂತ್ರ--ಕೋಪದಿಂದ ದರ್ಪಿತಸ್ವರದಲ್ಲಿ "ನಾನು ಹೇಳಬೇಕಾದುದು ಇಷ್ಟೆ, ಈ ಕೂರನಾದ ವಿನೋದ, ನಿಷ್ಟುರೆಯಾರಿ ಸುಶೀಲೆ ಇವರಿಬ್ಬರನ್ನೂ ವಧೆಮಾದಲ್ಲದೆ ನನ್ನ ಮನಸ್ಸು ಶಾಂತಿಯನ್ನು ಹೊಂದುವಂತಿಲ್ಲ, ನನಗೆ ಮರಣದಂಡನೆ ವಿಧಿಸಲ್ಪಟ್ಟರೂ, ಈ ಕಾರ್ಯವನ್ನು ಮಾಡಿಯೇ ಮೃತಿಹೊಂದಬೇಕೆಂಬುದು ನನ್ನ ಸಂಕಲ್ಪ."
ಧರ್ಮಾವತಾರ--ಧಿಕ್ಕಾರಮಾಡಿ ನಕ್ಕು "ಈತನು, ಎಂದೆಂದಿಗೂ ನೀಚನೇಸರಿ. ಇವನಲ್ಲಿ ಇನ್ನು ಕನಿಕರಕ್ಕೆ ಅವಕಾಶವಿರುವುದಿಲ್ಲ, ಇಂತಹ ದ್ರೋಹಿಗಳಿಗೆ ಆಮರಣಾಂತವಾಗಿ ಕಾರಾಗಾರವಾಸವನ್ನು ವಿಧಿಸುವುದಕ್ಕಿಂತ ಮರಣದಂಡನೆಯೇ ಉತ್ತಮವಿಧಿ."
ತಂತ್ರನಾಥನಿಗೆ ಮರಣದಂಡನೆಯಿಂರು ಮತ್ತೊಮ್ಮೆ ಹೇಳಬೇಕಾದುದಿಲ್ಲವಷ್ಟೆ ? ಹೇಗೂ ಅಂದಿನಿಂದ ಕುಟಿಲ ಆನೃತ ಅತ್ಯಾಚಾರಗಳ ನಿಗ್ರಹದಿಂದ ಶಾಂತತೆಯೇ ನ್ಯಾಯಸ್ಥಾನದಲ್ಲಿ ಪೂರ್ಣಾಧಿಕಾರವನ್ನು ವಹಿಸಿ ಸರ್ವತ್ರ ಪ್ರಕಾಶಿಸಲಾರಂಭಿಸಿತು.