ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

– ೬ ಳನ್ನು ಎಣಿಸುವದಕ್ಕಾಗುವದಿಲ್ಲ.* ನಕ್ಷತ್ರಗಳು ಹಗಲಲ್ಲಿಯೂ ಮುಗಿಲಲ್ಲಿರುತ್ತವೆ ಆದರೆ ಹಗಲಲ್ಲಿ ಸೂರ್ಯನ ಪ್ರಕಾಶವು ಬಹಳ ಹೆಚ್ಚಗಿರುವದರಿಂದ ಇವು ನಮಗೆ ಕಾಣಿಸುವದಿಲ್ಲ. ಸಂಜೆಗೆ ಪೂರ್ವದಿಕ್ಕಿನಲ್ಲಿ ಕಾಣುವ ಕೆಲವು ತಾರಕೆಗಳನ್ನು ನೋಡಿ ಗೊತ್ತು ಮಾಡಿ ಅವುಗಳನ್ನು ರಾತ್ರಿಯ ಬೇರೆ ಬೇರೆ ವೇಳೆಗಳಲ್ಲಿ ನಿರೀಕ್ಷಣೆಮಾಡಿ ನೋಡಬೇಕು. ರಾತ್ರಿಯು ಬೆಳೆದಂತೆ ಅವು ಕ್ರಮಕ್ರಮವಾಗಿ ಮುಗಿಲಿನ ಮಧ್ಯಕ್ಕೆ ಬಂದು ಪಶ್ಚಿಮದಿಕ್ಕಿನಲ್ಲಿ ಮುಳುಗುತ್ತವೆ. ಅಂದರೆ ನಕ್ಷತ್ರಗಳು ಸಹ ಸೂರ್ಯನ ಹಾಗೆ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಂತೆ ಕಾಣುತ್ತವೆ. ಎರಡನೇ ಅಧ್ಯಾಯ. ಸೂರ್ಯ, ಚಂದ್ರ, [ಸೂಚನೆ ಛಾಯಾ ನಿರೀಕ್ಷಣೆಗೆ ನೆಟ್ಟ ಕ೦ಬದ ಸೂತ್ತಲು ಒ೦ದು ವರ್ತುಲವನ್ನು ತೆಗೆದು ಅದರಲ್ಲಿ ದಿಕ್ಕು ಗಳ ನ ಅ೦ಶಗಳನ್ನೂ ಗುರ್ತು ಮಾಡಬೇಕು. ಇದೇನಿರೀಕ್ಷಣೆ ಯನ್ನು ಸ್ವಲ್ಪ ಸೂಕ್ಷ್ಮರೀತಿಯಲ್ಲಿ ನಡಿ ಸಬೇಕಾದರೆ `ಅಂಗುಲ (ಇ೦ಚು) ದಪ್ಪ ೨ ಅಡಿ (ಪೂ 3) ಎತ್ತರವಿರುವ ಒಂದು ಕಬ್ಬಿಣದ ಸಲಾಕಿಯನ್ನು ಒಂದು ಕಟ್ಟೆಯ ಅಥವಾ ಸಲಿಗೆಯು ಮೇಲೆ ನಿಲ್ಲಿಸಿ ಅದರ ಸುತ್ತಲು ದಿಕ್ಕುಗಳನ್ನೂ ಅ೦ಶಗಳನ್ನೂ ಗುರ್ತು ಮಾಡಬೇಕು, ನಿರೀಕ್ಷಣ ಯನ್ನು ವಾರಕ್ಕೆ ಎರಡು ಸಾರೆ ನಡಿಸಿದರೆ ಸಾಕು | ಹಿಂದಿನ ಪಾಠದಲ್ಲಿ ಸೂರ್ಯನು ಬೆಳಿಗ್ಗೆ ಪೂರ್ವ ಕ್ಷಿತಿಜದಲ್ಲಿ ಹುಟ್ಟಿ ಸಲ ಜೆಗೆ ಪಶ್ಚಿಮಕ್ಷಿತಿಜದಲ್ಲಿ ಮುಳುಗುತ್ತಾನೆಂದು ತಿಳಿದೆವು. ಪೂರ್ವ ದಿಕ್ಕಿ ನಲ್ಲಿ ಸೂರ್ಯನು ಉದಯಿಸುವ ಸ್ಥಾನವನ್ನೂ ಹಾಗೆಯೆ ಅವನು ಪಶ್ಚಿಮದಿಕ್ಕಿ ನೆಲ್ಲಿ ಅಸ್ತಮಿಸುವ ಸ್ಥಾನವನ್ನೂ ೬ಗಾಗ್ಗೆ ನೋಡುತ್ತಿದ್ದರೆ, ಅವನು ವರ್ಷ ವೆಲ್ಲಾ ಒಂದೇ ಸ್ಥಾನದಲ್ಲಿ ( ಬಿಂದುವಿನಲ್ಲಿ ) ಉದಯಿಸುವದೂ ಅಥವಾ ಅಸ್ತ ಸುವದೂ ಇಲ್ಲವೆಂದು ನಮಗೆ ತಿಳಿಯಬರುವದು. ಒಂದು ಪ್ರದೇಶದಲ್ಲಿ ಸೂರ್ಯನ ಕಿರಣಗಳು ಜೂನ್ ತಿಂಗಳಲ್ಲಿ ಬೆಳಿಗ್ಗೆ ಅಥವಾ ಸಂಜೆಯ ಮುಂದೆ ಬರುವ ದಕ್ಕೂ ದಿಸಂಬರ ತಿಂಗಳಲ್ಲಿ ಬೆಳಿಗ್ಗೆ ಅಥವಾ ಸಂಜೆಯ ಮುಂದೆ ಬರುವದಕ್ಕೂ ವ್ಯತ್ಯಾಸವಿದ್ದೇ ಇರುವದು. ಇಂಡಿಯಾ ದೇಶದ ದಕ್ಷಿಣ ಭಾಗದಲ್ಲಿರುವ ಜನರಿಗೆ

  1. ಬರೆ ಕಣ್ಣಿಗೆ ೫೦ 30 ನಕ್ಷತ್ರಗಳು ಗೋಚರವಾಗುತ್ತವೆ, ದುರ್ಬಿಣಿಯ ( Telescope Kಲಿ ಗೋಪ) ಸಹಾಯದಿಂದ ಸುಮಾರು ೧೦ ಕೋಟಿ ನಕ್ಷತ್ರಗಳು ಕಾಣುವವು,