ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೭ - ಸೂರ್ಯನ ಗತಿಯು ಯಾವ ಯಾವ ತಿಂಗಳಲ್ಲಿ ಯಾವ ಯಾವ ಪ್ರಕಾರ ಕಾಣಿ ಸುತ್ತದೆ? - ಡಿಸಂಬರ ತಿಂಗಳಲ್ಲಿ ಸೂರ್ಯನು ಪೂರ್ವಕ್ಷಿತಿಜದ ದಕ್ಷಿಣಮೂಲೆಯಲ್ಲಿ ಉದಯಿಸಿ ಆಕಾಶದ ಮಧ್ಯಕ್ಕೆ ಬಂದು ಪಶ್ಚಿಮಕ್ಷಿತಿಜದಲ್ಲಿ ದಕ್ಷಿಣಮೂಲೆ ಯಲ್ಲಿ ಅಸ್ತಮಿಸುವನು. ಜೂನ ತಿಂಗಳಲ್ಲಿ ಪೂರ್ವ ಕ್ಷಿತಿಜದ ಉತ್ತರಮೂಲೆ ಯಲ್ಲಿ ಹುಟ್ಟಿ, ಪಶ್ಚಿಮಕ್ಷಿತಿಜದ ಉತ್ತರಮೂಲೆಯಲ್ಲಿ ಮುಳುಗುವಂತೆ ಕಾಣತಿ ವನು, ನಾವು ಶಾಲೆಯ ಹೊರಗೆ ಬೈಲಿನಲ್ಲಿ ನಿಲ್ಲಿಸಿರುವ ಕಂಬದ ಅಥವಾ ಸಲಾಕಿ , ಯ ಸುತ್ತಲು ಒಂದು ವರ್ತುಲವನ್ನು ಬರೆದು ಅದರಲ್ಲಿ ದಿಕ್ಕುಗಳನ್ನೂ ಇವುಗಳಿಗೆ ನಡುವೆ ಅಂಶಗಳನ್ನೂ ಗುರ್ತುಮಾಡಬೇಕು. ದಕ್ಷಿಣೋತ್ತರ ರೇಖೆಯನ್ನು ಎರಡು ರೀತಿಗಳಲ್ಲಿ ಗೊತ್ತು ಮಾಡಬಹುದು. (೧) ಮಧ್ಯಾಹ್ನಕ್ಕೆ ಸರಿಯಾಗಿ ಸೂರ್ಯನು ಆಕಾಶದ ಮಧ್ಯಕ್ಕೆ ಬರುವನಷ್ಟೇ, ಆ ವೇಳೆಯಲ್ಲಿ ಕಂಬದ ನೆರಳು ಬಹಳ ಸಣ್ಣದಾಗಿರುವದು. ಮಧ್ಯಾಹ್ನಕ್ಕೆ ಸರಿಯಾಗಿ ಸಲಾಕಿಯ ನೆರಳು ಉತ್ತರದಕಾಗಲಿ* ದಕ್ಷಿಣರ್ದಾ! ನಲಿ ಬೀಳುವದು. ಈ ನೆರಳನ್ನು ನೋಡುತ್ತಿದ್ದು ಅದು ತೀರ ಸಣ್ಣದಾಗಿರುವಾಗ ಅದನ್ನು ಉತ್ತರಕ್ಕೂ ದಕ್ಷಿಣಕ್ಕೂ ಬೆಳಿಸಿದರೆ, ಈ ರೇಖೆಯು ಸರಿಯಾದ ದಕ್ಷಿ ಸೋತ್ತರ ರೇಖೆಯಾಗುವದು. ಇದಕ್ಕೆ ಅಡ್ಡವಾಗಿರುವ ( ಸಮಕೋನದಲ್ಲಿರುವ ) ರೇಖೆಯೇ ಪೂರ್ವ ಪಶ್ಚಿಮವು. (೨) ಮುಂಜಾನೆ ಸುಮಾರು ೯, ೧೦, ಘಂಟೆಯ ವೇಳೆಯಲ್ಲಿ ಸಲಾ ಕಿಯ ನೆರಳು ವರ್ತುಲದ ಪರಿಧಿಯನ್ನು ಮುಟ್ಟಬಹುದು. ಅದು ಎಲ್ಲಿ ಬೀಳುವ ದನ್ನು ಗುರ್ತು ಮಾಡಬೇಕು, ಮಧ್ಯಾಹ್ನದನಂತರ ಸಲಾಕಿಯ ನೆರಳು ವರ್ತು ಲದ ಪರಿಧಿಯನ್ನು ಯಾವಾಗ ಮುಟ್ಟುವದೋ ನೋಡಿ ಅದನ್ನು ಸಹ ವರ್ತುಲದಲ್ಲಿ ಗುರ್ತು ಮಾಡಬೇಕು. ಈ ಎರಡು ರೇಖೆಗಳಿಂದಾಗುವ ಕೋನವನ್ನು ಸಮವಾಗಿ ಭಾಗಿಸುವ ರೇಖೆಯೇ ದಕ್ಷಿಣೋತ್ತರ ರೇಖೆಯು. - ಸಲಾಕಿಯ ಸ ತಲು ದಿಕ್ಕುಗಳನ್ನೂ ಅಂಶಗಳನ್ನೂ ತೋರಿಸುವ ಗೆರೆಗಳನ್ನು ಬರೆದನಂತರ ಸಲಾಕಿಯ ನೆರಳನ್ನು ಕ್ರಮವಾಗಿ ನಿರೀಕ್ಷಿಸಲು ಪ್ರಾರಂಭಿಸ ಬಹು ದು, ಈ ನೆರಳಿನ ನಿರೀಕ್ಷಣೆಯನ್ನು ವಾರಕ್ಕೊಂದು ಸಾರೆಯಾದರೂ ಇಟ್ಟು ಕೊಳ್ಳ ಬೇಕು. ಬೆಳಿಗ್ಗೆ ೯ ಘಂಟೆ, ಮದ್ಯಾಹ್ನ ( ಅಂದರೆ ೧೨ ಘ೦ಟೆ ), ಅನಂತರ ೩