ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೯ - ನೆರಳು ಪೂರ್ವಕ ಉತ್ತರ ನಡುವೆ ಇರುವದು. ಅದು ಪೂರ್ವದಿಂದ ಎಷ್ಟು ಅಂಶಗಳು ಉತ್ತರಕ್ಕಿರುವದನ್ನು ನೋಡಿ ಬರೆಯಬೇಕು, ಮುಂದಿನ ಆದಿತ್ಯವಾರದ ದಿನ ಬೆಳಿಗ್ಗೆ ಮತ್ತು ಸಂಜೆಗೆ ಅದೇ ವೇಳೆಗಳಲ್ಲಿ ಸಲಾಕಿಯ ನೆರಳನ್ನು ನೋಡಿ ಅದು ಪೂರ್ವ ಪಶ್ಚಿಮದ ರೇಖೆಗೆ ಉತ್ತರಕ್ಕೆ ಎಷ್ಟು ಅಂಶಗಳಲ್ಲಿ ಬೀಳುತ್ತದೆಂಬುದನ್ನು ನೋಡಬೇಕು. ಪಟ್ಟ ನಂ ೨, ತಾರೀಖು . ನೆರಳಿನ ದಿಕ್ಕು ಮತ್ತು ಅ೦ಶ, ೧೪ -೧ -2 ೨೧ - 1) - (= ಉ ಅಂದರೆ ಸನದಿಂದ ಉತ್ತರಕ್ಕೆ) ಹೀಗೆ ಪ್ರತಿವಾರದಲ್ಲಿ ತಪ್ಪದೆ ನಿರೀಕ್ಷಣೆ ಮಾಡುತ್ತಾ ಬಂದರೆ ಡಿಸಂಬರ ೨೧ ತಾರೀಖಿನ ಅನಂತರ ಸೂರ್ಯನ ಮಾರ್ಗವು ಸ್ವಲ್ಪ ಸ್ವಲ್ಪವಾಗಿ ಉತ್ತರಕ್ಕೆ ಸರಿಯುವಂತೆ ಕಂಡುಬರುವುದು. ಹಗಲು ರಾತ್ರಿಗಳ ಪ್ರಮಾಣದಲ್ಲಿ ಕೂಡ ವ್ಯತ್ಯಾಸವು ಕಾಣುವದು. ಸೂರ್ಯನು ಉತ್ತರಕ್ಕೆ ಬಂದಂತೆ ನಮಗೆ ಹಗಲು ಬೆಳೆಯುತ್ತಾ ರಾತ್ರಿಯು ಕಡಿಮೆಯಾಗುವದು, ಮಧ್ಯಾನದಲ್ಲಿ ಬೀಳುವ ಸಲಾ. ಕಿಯ ಸಣ್ಣ ನೆರಳನ್ನು ನೋಡುತ್ತಾ ಬಂದರೆ, ಅದು ಬರಬರುತ್ತ ಬಹಳ ಸಣ್ಣದಾಗುವದಲ್ಲದೆ, ಒಂದು ದಿನ ಮಧ್ಯಾಹ್ನದಲ್ಲಿ ಆ ನೆರಳು ಯಾವ ದಿಕ್ಕಿ ನಲ್ಲಿಯೂ ಬೀಳದೇ ಹೋಗುವದು. ಆದಿನ ಸೂರ್ಯನ ಮಾರ್ಗವು ನಮ್ಮ ವರ್ತುದಲ ಪೂರ್ವ ಪಶ್ಚಿಮ ರೇಖೆಗೆ ಸರಿಯಾಗಿದ್ದು ಮಧ್ಯಾಹ್ನಕ್ಕೆ ಸೂ ರ್ಯನು ಸಲಾಕಿಯ ತುದಿಯ ಮೇಲೆ ಬರುವನು. ಹೀಗೆ ಸೂರ್ಯನ ಮಾರ್ಗವು ಉತ್ತರಕ್ಕೆ ಸರಿಯುತ್ತಾ ಜೂನ ೨೧ನೇ ತಾರಿಖಿನ ದಿನ ಸೂರ್ಯನು ಅತ್ಯಧಿಕ ಉತ್ಯ ರ ದಿಕ್ಕಿಗೆ ಸೇರಿದಂತೆ ಕಾಣಿಸುವನು ಅಲ್ಲಿಂದ ಮುಂದಕ್ಕೆ ಸೂರ್ಯನು ಉತ್ತೆ ರಕ್ಕೆ ಹೋಗದೆ ದಕ್ಷಿಣದ ಕಡೆಗೆ ತೆರಳುವನು. ಸ್ವಲ್ಪ ಸ್ವಲ್ಪವಾಗಿ ದಕ್ಷಿಣಕ್ಕೆ