-೧೦-
ಬರುತ್ತ ಡಿಸಂಬರ ೨೧ರಲ್ಲಿ ಅತ್ಯಧಿಕ ದಕ್ಷಿಣ ದಿಕ್ಕಿಗೆ ಇಳಿದಂತೆ ಕಾಣಿಸ ವನು. ನಮ್ಮ ಪೂರ್ವಿಕರು ಕಲ್ಪಿಸಿರುವ ಉತ್ತರಾಯಣ, ದಕ್ಷಿಣಾಯಣ ಇವ ಸೂರ್ಯನ ಈ ಗತಿಭೇದಗಳನ್ನೇ ಸೂಚಿಸುತ್ತವೆ. ಸೂರ್ಯನು ಉತ್ತರದಲ್ಲಿ ನಿಲ್ಲುವ ಭಾಗಕ್ಕೆ ಸರಿಯಾಗಿ ಸೃಥ್ವಿಯ ಮೇಲಿರುವ ನೃತ್ಯವನ್ನು ಕರ್ಕಾಟಕ ವೃತ್ತವೆಂತಲೂ ಅವನು ದಕ್ಷಿಣದಲ್ಲಿ ನಿಲ್ಲುವ ಭಾಗಕ್ಕೆ ಸರಿಯಾಗಿರುವ ವೃತ್ತ ವನ್ನು ಮಕರವೃತ್ತವೆಂತಲೂ ಕರೆಯುವದು ರೂಢಿಯಾಗಿರುತ್ತದೆ.
ಈ ಎರಡು ವಲಯಗಳ ನಡುವೆ ವಾಸಮಾಡುವ ಜನಗಳಿಗೆ ಮಾತ್ರ ಸೂ ರ್ಯನು ವರ್ಷದ ಎರಡು ದಿನಗಳಲ್ಲಿ ತಲೆಯ ಮೇಲೆ ಸರಿಯಾಗಿರುವಂತೆ ಕಾಣುವವನು.*
ಸಲಾಕಿಯ ನೆರಳು ಹಿಂದಕ್ಕಾಗಲಿ ಮುಂದಕ್ಕಾಗಲಿ ಸರಿಯುವದನ್ನು ನೋಡಿ ಸೂರ್ಯನ ಮಾರ್ಗವು ದಿನದಿನಕ್ಕೂ ಸ್ವಲ್ಪ ಸ್ವಲ್ಪವಾಗಿ ವ್ಯತ್ಯಾಸವಾ ಗುವದೆಂದು ತಿಳಿದೆವು. ಹೀಗೆ ಇತರ ಸಾಧನಗಳ ಸಹಾಯದಿಂದ ತಿಳಿಯುವ ಸಂಗತಿಗಳನ್ನು ಸೂರ್ಯನ ಪ್ರತ್ಯೇಕ ನಿರೀಕ್ಷಣೆಯಿಂದಲೂ ತಿಳಿಯಬಹುದುದಾದ ಒಂದು ಬೈಲಿನಲ್ಲಿ ಯಾವದಾದರೂ ಒಂದು ಗಿಡ ಅಥವಾ ಒಂದು ಕಂಬವನ್ನು ಗೊತ್ತು ಮಾಡಿ ಅದರ ಹತ್ತಿರ ನಿಂತುಕೊಂಡು ಸೂರ್ಯನು ಪೂರ್ವಕ್ಷಿತಜ ದಲ್ಲಿ ಹುಟ್ಟುವ ಸ್ಥಾನವನ್ನು ನೋಡಬೇಕು, ನಾವು ನಿಲ್ಲುವ ಸ್ಥಳದಿಂದ ಪೂರ್ವ ಕ್ಷಿತಿಜದವರೆಗೂ ಒಂದು ಸರಳರೇಖೆಯನ್ನು ಕಲ್ಪಿಸಿಕೊಂಡು, ಸೂರ್ಯನು ಅವಕ್ಕೆ ಯಾವ ಭಾಗದಲ್ಲಿ ಎಷ್ಟು ಅಂತರದಲ್ಲಿ ಹುಟ್ಟುತ್ತಾನೆಂಬುವದನ್ನು ನೋಡಿ ತಿಳಯಬೇಕು. ಹೀಗೆ ವಾರಕ್ಕೊಂದುಸಾರೆ ಸೂರ್ಯೋದಯವನ್ನು ನೋಡುತ್ತ ಬಂದರೆ ಸೂರ್ಯನ ಗತಿಯಲ್ಲಿರುವ ವ್ಯತ್ಯಾಸವು ನಮಗೆ ತಿಳಿಯ ಬರುವುದು.
* ಸೂರ್ಯನು ಉತ್ತರಕ್ಕೆ ಬರುತ್ತಾ ಅವನಿಂದ ನನಗೆ ಹೆಚ್ಚು ಸೆಕೆಯು ಬರುವುದನ್ನು ಉಷ್ಣ ಮಾಪಕ ಯಂತ್ರದ ನಿರೀಕ್ಷಣೆಯಿಂದ ತಿಳಿಯಬಹುದು ಉಷ್ಣಮಾಪಕಯಂತ್ರದ ಉಪಯೋಗವು ಮುಂದೆ ಹವೆಯ ನಿರೀಕ್ಷಣದಲ್ಲಿ ಹೇಳಲ್ಪಡುವದು.
ಧಾರವಾಡದ ಅಕ್ಷಾಂಶದಲ್ಲಿ ಮೇ ತಿಂಗಳ ೩ನೇ ತಾರೀಖಿನಲ್ಲಿ ಆಗಸ್ಟ ೧೦ನೇ ತಾರೀಖ ೨ನಲ್ಲೂ ತಲೆಯಮೇಲೆ ಸರಿಯಾಗಿರುವಂತೆ ಕಾಣಿಸುತ್ತದೆ.