ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಂದ್ರ ಹಿಂದಿನ ಅಧ್ಯಾಯದಲ್ಲಿ ಚಂದ್ರನೂ ಸೂರ್ಯನ ಹಾಗೆ ಆಕಾಶದಲ್ಲಿ ಪೂರ್ವದಿಕ್ಕಿನ ಕಡೆಯಿಂದ ಪಶ್ಚಿಮದಿಕ್ಕಿಗೆ ಪ್ರಯಾಣ ಮಾಡುತ್ತಾನೆಂದು ತಿಳಿ ದೆವು. ಆದರೆ ಇವರಿಬ್ಬರ ಗತಿಗಳಲ್ಲಿ ಹಾಗೆಯೇ ಸ್ವರೂಪದಲ್ಲಿಯೂ ಹೋಲಿಕೆಗಳಿಗಿಂತ ವ್ಯತ್ಯಾಸಗಳೇ ಹೆಚ್ಚಾಗಿರುತ್ತವೆ. ಸೂರ್ಯನನ್ನು ಹಗ ಲಲ್ಲಿ ಯಾವ ಹೊತ್ತಿನಲ್ಲಾದರೂ ಆಕಾಶದಲ್ಲಿ ನೋಡಬಹುದು. ಹೀಗೆ ಚಂದ್ರ ನನ್ನು ರಾತ್ರಿಯಲ್ಲಿ ಯಾವ ಹೊತ್ತಿನಲ್ಲಾದರೂ ನೋಡಬೇಕೆಂದರೆ ಅದು ಸಾಧ್ಯ ವಲ್ಲ. ಚಂದ್ರನು ಪ್ರತಿರಾತ್ರಿಯ ಎಲ್ಲಾ ವೇಳೆಗಳಲ್ಲಿ ಕಾಣಿಸುವದಿಲ್ಲ. ಚಂದ್ರ ನು ಒಂದು ದಿನ ರಾತ್ರಿ ಆಕಾಶದಲ್ಲಿ ಸುಮಾರು ಒಂದು ಘಂಟೆಯ ಕಾಲವೂ ಒಂದು ದಿನ ಎರಡು ಘಂಟೆಗಳ ಕಾಲವೂ, ಒಂದು ದಿನ ಮೂರು ಘಂಟೆಗಳ ಕಾಲವೂ, ಹೀಗೆ ಪ್ರಕಾಶಿಸುವನೇ ಹೊರತು ಪ್ರತಿರಾತ್ರಿಯ ಎಲ್ಲಾ ವೇಳೆಗಳಲ್ಲಿ ಗೋಚರನಾಗುವದಿಲ್ಲ. ನಾವು ಚಂದ್ರನ ನಿರೀಕ್ಷಣೆಯಲ್ಲಿ ಮೊದಲು ತಿಳಿಯಬೇಕಾದ ಸಂಗತಿಗಳು ಯಾವ ವೆಂದರೆ:- ಅವನು ಯಾವ ಯಾವ ರಾತ್ರಿಯಲ್ಲಿ ಎಷ್ಟು ಹೊತ್ತು ಆಕಾಶದಲ್ಲಿ ಕಾಣಿಸುವನು. ಚಂದ್ರನು ಸೂರ್ಯನ ಹಾಗೆ ಪ್ರತಿನಿತ್ಯವೂ ಪೂರ್ವಕ್ಷಿತಿಜದಲ್ಲಿ ಹುಟ್ಟುವದಿಲ್ಲ. ಅಮಾವಾಸ್ಯೆಯ ರಾತ್ರಿ ಚಂದ್ರನು ಸ್ವಲ್ಪವೂ ಕಾಣಿಸುವದಿಲ್ಲವಷ್ಟೇಅಮಾವಾಸ್ಯೆಯ ಮರುದಿನ ಸೂರ್ಯನು ಮುಳುಗುವ ಹೊತ್ತಿನಲ್ಲಿ ಚಂದ್ರನು ಪಶ್ಚಿಮ ಕ್ಷಿತಿಜದ ಸ್ವಲ್ಪ ಮೇಲೆ ಕಾಣಿಸಿದವನಾಗಿ ದಿನದಿನಕ್ಕೂ ಪೂರ್ವ ದಿಕ್ಕಿನ ಕಡೆಗೆ ಮುಂದರಿಸುವಂತೆ ಕಂಡುಬರುವನು. ಹೀಗೆ ಕ್ರಮ ಕ್ರಮವಾಗಿ ಪೂರ್ವಕ್ಕೆ ಹೋಗುತ್ತ ಹುಣ್ಣಿಮೆಯ ದಿನ ಪೂರ್ವ ದಿಕ್ಕಿನಲ್ಲಿ ಉದಯಿಸುವನು. ಹುಡುಗರು ಒಂದೊಂದು ದಿನವೂ ಸೂರ್ಯಾಸ್ತಮಾನವಾದಾಗ ( ಅಥವಾ ಬೇರೆ ಅನುಕೂಲ ನಾದ ನಿಯಮಿತ ಹೊತ್ತಿನಲ್ಲಿ ) ಚಂದ್ರನು ಆಕಾಶದಲ್ಲಿ ಪಶ್ಚಿಮ ಕ್ಷಿತಿಜದಿಂದ ಎಷ್ಟು ಎತ್ತರದಲ್ಲಿದ್ದನೆಂಬುವದನ್ನು ಗೊತ್ತು ಮಾಡಿ ಅದನ್ನು ಬರೆಯಬೇಕು. ಒಂದು ದಿನಕ್ಕೂ ಮರುದಿನಕ್ಕೂ ಚಂದ್ರನ ಸ್ಥಾನದಲ್ಲಿರುವ ಅಂತರವನ್ನು ತಿಳಿಯು ಬೇಕು. *

  • ಈ ನಿರೀಕ್ಷಣೆಯನ್ನು ಪ್ರತಿನಿತ್ಯವೂ ಯಾವದಾದರೂ ಒಂದು ನಿಯಮಿತ ವೇಳೆಯಲ್ಲಿ ಮಾಡುತ್ತ ಬಂದರೆ ಚಂದ್ರನ ಒಂದುದಿಸದ ಇರುವ ಸ್ಥಾನ ಮರುದಿನದ ಸ್ಥಾನಕ್ಕೆ