ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹುಣ್ಣಿಮೆಯ ತರುವಾಯ ಅನೇಕ ದಿನಗಳವರೆಗೆ ಸೂರ್ಯಾಸ್ತಮಾ ನದ ಹೊತ್ತಿನಲ್ಲಿ ಚಂದ್ರನು ಆಕಾಶ ದಲ್ಲೆಲ್ಲ ಕಾಣಿಸುವದಿಲ್ಲ. ಪುನಃ ಅವನನ್ನು ಆ ಹೊತ್ತಿನಲ್ಲಿ ಕಾಣಬೇಕೆಂದರೆ ಅಮಾವಾಸ್ಯೆಯವರೆಗೂ ಕಾಯಬೇಕು. ಅವನು ಮೊದಲು ಕಾಣಿಸುವಾಗ ಹಿಂದೆ ತಿಳಿಸಿದಂತೆ ಪಶ್ಚಿಮ ಕ್ಷಿತಿಜದ ಕೆಲವು ಅಂಶಗಳ ಮೇಲೆ ಮಾತ್ರ ಇರುವನು. ಅವನು ಪುನಃ ಅದೇ ಸ್ಥಳದಲ್ಲಿ ಕಾಣಿಸಬೇ ಕಾದರೆ ೧ ತಿಂಗಳಾಗುವದು. ಚಂದ್ರನ ಗತಿಯನ್ನು ಆಧಾರವಾಗಿಟ್ಟುಕೊಂಡು ಕಾಲವನ್ನು ನಿರ್ಣಯಿಸುವ ಕ್ರಮಕ್ಕೆ ಚಾಂದ್ರಮಾನ ಕ್ರಮವೆಂಬ ಹೆಸರು. ಹುಣ್ಣಿಮೆಯ ತರುವಾಯ ಅಮಾವಾಸ್ಯೆಯವರೆಗೂ ಚಂದ್ರನು ಪೂರ್ವ ಕ್ಷಿತಿ ಜದಲ್ಲೇ ಉದಯಿಸುವನಷ್ಟೇ: ಅವನು ಪ್ರತಿನಿತ್ಯವೂ ಅದೇಕಾಲದಲ್ಲಿಯೇ ಉದಯಿಸದೆ, ಹಿಂದಿನ ದಿನಕ್ಕಿಂತ ಸ್ವಲ್ಪ ಹೆಚ್ಚು ಹೊತ್ತು ಆದಮೇಲೆ ಉದಯಿ. ಸುತ್ತ ಬರುವನು. ಹೀಗೆ ರಾತ್ರಿಯಲ್ಲಿ ಬಹಳ ಹೊತ್ತಾದ ಮೇಲೆ ಉದಯಿಸುವ ಚಂದ್ರನನ್ನು ಸೂರ್ಯೋದಯವಾದಮೇಲೂ ಆಕಾಶದಲ್ಲಿ ನೋಡಬಹುದು. ಒಂದು ರಾತ್ರಿಯ ಚಂದ್ರೋದಯಕಾಲಕ್ಕೂ ಮರುದಿನದ ರಾತ್ರಿಯ ಚಂದ್ರೋದಯಕಾಲಕ್ಕೂ ಇರುವ ವ್ಯತ್ಯಾಸವನ್ನು ತಿಳಿಯಲು ಹುಣ್ಣಿಮೆಯಾದ ಮೇಲೆ ೫, ೬ ದಿನಗಳವರೆಗೆ ಚಂದ್ರೋದಯವು ಯಾವಾಗ ಆಗುವದನ್ನು ಅವರು ನೋಡುತ್ತ ಬರಬೇಕು. ಈ ನಿರೀಕ್ಷಣೆಯನ್ನು ಅವರು ಕ್ರಮವಾಗಿ ನಡಿಸಿದರೆ ಒಂದು ದಿನದ ಚಂದ್ರೋದಯದ ಕಾಲಕ್ಕೂ ಹಿಂದಿನ ದಿನದ ಅಥವಾ ಮರುದಿನದ ಚಂದ್ರೋದಯದ ಕಾಲಕ್ಕೂ ಸುಮಾರು ೫೦ ಮಿನಿಟುಗಳು ಹೆಚ್ಚು ಕಡಿಮೆಯಿರು ವದೆಂದು ತಿಳಿಯಬರುವುದು. ಸೂರ್ಯನಿಗೂ ಚಂದ್ರನಿಗೂ ಮತ್ತೊಂದು ವ್ಯತ್ಯಾಸವು ಇರುವದು. ಚಂದ್ರನ ಆಕಾರವು ದಿನದಿನಕ್ಕೂ ಹೆಚ್ಚು ಕಡಿಮೆಯಾಗುತ್ತಿರುತ್ತದೆ, ಅಮವಾಸ್ಯೆಯ ನಂತರ ಅವನ ಆಕಾರವು ಒಂದು ಸಣ್ಣ ವಕ್ರರೇಖೆಯಂತೆ ಕಾಣುವದು. ಅಲ್ಲಿಂದ ಮುಂದಕ್ಕೆ ಅವನು ಕ್ರಮ ಕ್ರಮವಾಗಿ ವೃದ್ಧಿಯನ್ನು ಹೊಂದುತ್ತ ೬, ೭ ದಿನಗ ಸು ನಾರು ೧೨೦ ಅ೦ಶಗಳ ಅ೦ ತರ ನಿರು ನದೆಂದು ತಿಳಿಯಬರುವದು ಅಂದರೆ ಪಶ್ಚಿಮ ಕ್ಷಿತಿಜ ದಿ೦ದ ಪೂರ್ವ ಕ್ಷಿತಿಜದ ವರೆಗೆ ಕಾಣುವ ಆಕಾಶದ ಭಾಗದಲ್ಲಿ ೧೮೦ ಅ೦ : ಗಳಿರುತ್ತವೆ. ಆಕಾಶ ದಲ್ಲಿ ಚಂದ್ರನು ಈ ಅಂತರವನ್ನು ಸುವ ಾರು ೧೫ ದಿನಗಳಲ್ಲಿ ಒಂದು ಪಕ್ಷದಲ್ಲಿ ) ಪೂರ್ಣವಾಗಿ ಹತ್ತುವದರಿಂದ ಅವನು ಪ್ರತಿನಿತ್ಯವೂ ೧೨ ಅಂಶಗಳಷ್ಟು ದೂರ ಹೋಗ ಬೇಕು)