ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- ೧೩ -


ಳಾದ ಮೇಲೆ ಅರ್ಧಚಂದ್ರನಾಗಿ ಹುಣ್ಣಿಮೆಯ ರಾತ್ರಿ ಪೂರ್ಣಬಿಂಬವನ್ನು ಹೊಂದು ವನು- ಹುಣ್ಣಿಮೆಯ ಚಂದ್ರನ ಬಿಂಬವು ದಿನದಿನಕ್ಕೂ ಕುಂದುತ್ತಾ ಅಮಾವಾ ಸ್ಯೆಯ ದಿನ ಚಂದ್ರನ ಬಿಂಬವು ಪೂರ್ಣವಾಗಿ ಕಾಣದೇ ಹೋಗುವದು.

(೧) ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಮಾಡುವ ನಿರೀಕ್ಷಣೆ

ತಾರೀಖು ಸೂರ್ಯಾಸ್ತಮಾನವಾದಾಗ ಚಂದ್ರನು ಆಕಾಶದಲ್ಲಿ ಎಲ್ಲಿದ್ದನು. ಚಂದ್ರನ ಬಿಂಬ.

(೨) ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ನಿರೀಕ್ಷಣೆ.

ತಾರೀಖು ಚಂದ್ರೋದಯ ಕಾಲ. ಚಂದ್ರನ ಬಿಂಬ.

ಮೂರನೇ ಅಧ್ಯಾಯ.

'ಸೂರ್ಯನಿಗೂ ಚಂದ್ರನಿಗೂ ಮತ್ತು ಗ್ರಹಗಳಿಗೂ
ನಕ್ಷತ್ರಗಳಿಗೂ ಇರುವ ವ್ಯತ್ಯಾಸವು

ಸೂರ್ಯನು ಆಕಾಶದಲ್ಲಿ ಪ್ರಕಾಶಿಸುತ್ತಿರುವಾಗ ಅವನ ಬಿಂಬವು ಜ್ವಲಿಸುತ್ತಾ ಅದನ್ನು ನೋಡುವದಕ್ಕಸಾಧ್ಯವಾಗುವದಷ್ಟೇ, ಚಂದ್ರನ ಬಿಂಬವು ಸೌಮ್ಯವಾದ ಕಾಂತಿಯುಳ್ಳದ್ದಾಗಿ ಅದರ ಕಿರಣಗಳು ತಂಪಾಗಿರುವಂತೆ ತೋರಿ