ಈ ಪುಟವನ್ನು ಪ್ರಕಟಿಸಲಾಗಿದೆ
- ೧೩ -
ಳಾದ ಮೇಲೆ ಅರ್ಧಚಂದ್ರನಾಗಿ ಹುಣ್ಣಿಮೆಯ ರಾತ್ರಿ ಪೂರ್ಣಬಿಂಬವನ್ನು ಹೊಂದು ವನು- ಹುಣ್ಣಿಮೆಯ ಚಂದ್ರನ ಬಿಂಬವು ದಿನದಿನಕ್ಕೂ ಕುಂದುತ್ತಾ ಅಮಾವಾ ಸ್ಯೆಯ ದಿನ ಚಂದ್ರನ ಬಿಂಬವು ಪೂರ್ಣವಾಗಿ ಕಾಣದೇ ಹೋಗುವದು.
(೧) ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಮಾಡುವ ನಿರೀಕ್ಷಣೆ
ತಾರೀಖು | ಸೂರ್ಯಾಸ್ತಮಾನವಾದಾಗ ಚಂದ್ರನು ಆಕಾಶದಲ್ಲಿ ಎಲ್ಲಿದ್ದನು. | ಚಂದ್ರನ ಬಿಂಬ. |
---|---|---|
(೨) ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ನಿರೀಕ್ಷಣೆ.
ತಾರೀಖು | ಚಂದ್ರೋದಯ ಕಾಲ. | ಚಂದ್ರನ ಬಿಂಬ. |
---|---|---|
ಮೂರನೇ ಅಧ್ಯಾಯ.
'ಸೂರ್ಯನಿಗೂ ಚಂದ್ರನಿಗೂ ಮತ್ತು ಗ್ರಹಗಳಿಗೂ
ನಕ್ಷತ್ರಗಳಿಗೂ ಇರುವ ವ್ಯತ್ಯಾಸವು
ಸೂರ್ಯನು ಆಕಾಶದಲ್ಲಿ ಪ್ರಕಾಶಿಸುತ್ತಿರುವಾಗ ಅವನ ಬಿಂಬವು ಜ್ವಲಿಸುತ್ತಾ ಅದನ್ನು ನೋಡುವದಕ್ಕಸಾಧ್ಯವಾಗುವದಷ್ಟೇ, ಚಂದ್ರನ ಬಿಂಬವು ಸೌಮ್ಯವಾದ ಕಾಂತಿಯುಳ್ಳದ್ದಾಗಿ ಅದರ ಕಿರಣಗಳು ತಂಪಾಗಿರುವಂತೆ ತೋರಿ