ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೧೪ - ಬರುತ್ತವೆ. ಸೂರ್ಯನ ಕಾಂತಿಯನ್ನೂ ಚಂದ್ರನ ಕಾಂತಿಯನ್ನೂ ಪರಸ್ಪರ ಹೋಲಿಸಿದರೆ, ಸೂರ್ಯನ್ನು ಚಂದ್ರನ ೬,೦೦,೦೦೦ ಪಾಲಿನಷ್ಟು ಪ್ರಕಾಶವುಳ್ಳವ ನಾಗಿರುತ್ತಾನೆಂದು ಶಾಸ್ತ್ರಜ್ಞರು ಹೇಳುತ್ತಾರೆ. ಚಂದ್ರಬಿಂಬವನ್ನು ಎಷ್ಟು ಹೊತ್ತು ನೋಡಿದರೂ ಅದು ಒಂದೇ ಪ್ರಕಾರದ್ದಾಗಿ ಕಾಣುತ್ತದೆ. ಸೂರ್ಯನಾ ದರೋ ಯಾವಾಗಲೂ ದಗದಗನೆ ಉರಿಯುತ್ತ ಬಿಟ್ಟು ಬಿಟ್ಟು ಪ್ರಕಾಶಿಸುವಂತೆ ಕಾಣಿಸುವನು. ಅಂದರೆ ಸೂರ್ಯನು ಆಕಾಶದಲ್ಲಿ ರಾತ್ರಿಯಲ್ಲಿ ಮಿರುಗುತ್ತಿರುವ ನಕ್ಷತ್ರಗಳನ್ನು ಹೋಲುತ್ತಾನೆ. ಅವನು ನಮಗೆ ಇತರ ನಕ್ಷತ್ರಗಳಿಗಿಂತ ಬಹಳ ಸಮೀಪದಲ್ಲಿರುವ ದರಿಂದ ಬಹಳ ಪ್ರಕಾಶವುಳ್ಳವನಾಗಿ ಕಾಣುತ್ತಾನೆ, ಸೂರ್ಯನು ಭೂಮಿ ಯಿಂದ ೯೨೦,೦೦೦೦೦ ಮೈಲುಗಳ ದೂರದಲ್ಲಿರುತ್ತಾನೆ. ನಮಗೆ ತೀರ ಸಮೀ ಪದಲ್ಲಿರುವ ನಕ್ಷತ್ರದಿಂದ ಹೊರಟುಬರುವ ಬೆಳಕು ಸೃಷ್ಟಿಯನ್ನು ಮುಟ್ಟಬೇಕಾದರೆ ಮರು ವರ್ಷಕಾಲ ಬೇಕಾಗುವುದು. ಸೂರ್ಯನಿಂದ ಬರುವ ಬೆಳಕಿಗೆ ಭೂಮಿಯು. ನ್ನು ಸೇರುವದಕ್ಕೆ ೮ ಮಿನಿಟುಗಳು ಬೇಕು, ಆದ ರಿಂದ ತೀರ ಸಮೀಪದಲ್ಲಿರುವ ನ ಕತ್ರವು ಸೂರ್ಯನಿಗೂ ಭೂಮಿಗೂ ಇರುವ ದೂರದ ೨ ಲಕ್ಷಪಾಲಿನಷ್ಟು ದೂರ ದಲ್ಲಿದ್ದ ಹಾಗಾಯಿತು. ರಾತ್ರಿಯಲ್ಲಿ ದೀಪಗಳಂತೆ ಮಿರುಗುತ್ತಿರುವ ಅನೇಕ ನಕ್ಷತ್ರ ಗಳು ನಮ್ಮ ಸೂರ್ಯನಗಿಂತಲೂ ಹೆಚ್ಚು ಪ್ರಕಾಶವುಳ್ಳವುಗಳೆಂದು ತಿಳಿಯಬಹುದು. - (೨) ಚಂದ್ರನ ಬಿಂಬವು ಸೂರ್ಯನ ಹಾಗೆ ಜ್ವಲಿಸಿದೇ ಇರುವುದು ಮಾತ್ರ ವಲ್ಲದೆ, ಪ್ರತಿನಿತ್ಯವೂ ಒಂದೇ ಪ್ರಮಾಣವನ್ನು ಹೊಂದಿಲ್ಲವೆಂದು ಹಿಂದೆ ಹೇಳಲ್ಪಟ್ಟಿರುತ್ತದೆ. ಹೀಗೆ ಚಂದ್ರಬಿಂಬವು ದಿನ ದಿನಕ್ಕೂ ಹೆಚ್ಚು ವದಕ್ಕೆ “ ಅಥವಾ ಕಡಿಮೆಯಾಗುವದಕ್ಕೆ ಕಾರಣವೇನು ? ಚಂದ್ರನು ಸೂರ್ಯನ ಹಾಗೆ ಸ್ವತಃ ಜ್ವಲಿಸುವ ಗೋಲವಲ್ಲ, ಅವನು ಜ್ವಲಿಸುವ ಗೋಲವಾಗಿದ್ದಿದ್ದರೆ ಅವನ ಪ್ರಕಾಶದಲ್ಲಿ ದಿನದಿನಕ್ಕೂ ಹೆಚ್ಚು ಕಡಿಮೆ ಗಳುಂಟಾಗುತ್ತಿದ್ದಿಲ್ಲ. ಚಂದ್ರನು ತಿಂಗಳಿಗೊಂದುಸಾರೆ ಭೂಮಿಯ ಒಂದು ಪ್ರದಕ್ಷಣೆಯನ್ನು ಮಾಡುತ್ತಾ ಹುಣ್ಣಿವೆಯದಿನ ಸೂರ್ಯನು ಅಸ್ತಮಿಸಿದ ಕೂಡಲೆ ಪೂರ್ವದಿಕ್ಕಿನಲ್ಲಿ ಕಾಣಿಸುವನಷ್ಟೆ? ಸೂರ್ಯನ ಕಿರಣಗಳು ಅವನಿಗೆ ಎದುರಾಗಿ ರುವ ಭೂಮಿಯ ಒಂದು ಅರ್ಧಗೋಲದ ಮೇಲೆ ಮಾತ್ರ ಬೀಳುವವಲ್ಲದೆ,