ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೧೫ – ಉಭೂಮಿಯ ಹಿಂಭಾಗದಲ್ಲಿರುವ ಚಂದ್ರಬಿಂಬದ ಮೇಲೂ ಬಿದ್ದು ಪ್ರತಿಫಲಿಸುತ್ತವೆ. oಿಗೆ ಸೂರ್ಯ, ಚಂದ್ರ, ಇವರು ಭೂಮಿಯ ಬೇರೆ ಬೇರೆ ಪಾರ್ಶ್ವಗಳಲ್ಲಿರುವಾಗ ಸೂರ್ಯನಿಂದ ದೂರದಲ್ಲಿರುವ ಭೂಮಿಯ ಭಾಗದಲ್ಲಿ ಸೂರ್ಯನಿಂದ ಪ್ರಕಾಶಿತ ವಾದ ಚಂದ್ರಬಿಂಬವು ಪೂರ್ಣಚಂದ್ರನಾಗಿ ಕಾಣಿಸಿ ಹುಣ್ಣಿಮೆಯೆನ್ನಿಸುವದು. ಹುಣ್ಣಿಮೆಯ ಮುಂದಕ್ಕೆ ಚಂದ್ರನು ಕ್ರಮಕ್ರಮವಾಗಿ ಮುಂದಕ್ಕೆ ಬರುತ್ತಾ ಸೂರ್ಯನ ಕಡೆಗೆ ಬರುವದರಿಂದ ಸೂರ್ಯನಿಂದ ಪ್ರಕಾಶಿತವಾದ ಭಾಗವು ದಿನ ದಿನಕ್ಕೂ ಕಡಿಮೆಯಾಗುತ್ತಾ ಬರುವದು. ಅಮಾವಾಸ್ಯೆಯ ದಿನ ಚಂದ್ರನೂ ಸೂರ್ಯನೂ ಭೂಮಿಯು ಒಂದೇ ಪಾರ್ಶ್ವದಲ್ಲಿರುವದರಿಂದ, ಸೂರ್ಯನಿಗೆ ವಿನು ಖವಾದ ಭೂವಿಎಯ ಭಾಗದಲ್ಲಿ ಚಂದ್ರನು ಕಾಣಿಸುವದೇ ಇಲ್ಲ. ಅಮಾವಾ ಸ್ಯೆಯನಂತರ ಚಂದ್ರನು ಸೂರ್ಯನ ಕಡೆಯಿಂದ ಸ್ವಲ್ಪ ಸ್ವಲ್ಪವಾಗಿ ಪೂರ್ವ ವಿಕ್ಕಿನ ಕಡೆಗೆ ಸರಿಯುವನಷ್ಟೇ. ಹೀಗೆ ಚಂದ್ರನು ಭೂಮಿಯ ಬೇರೆ ಪಾರ್ಶ್ವಕ್ಕೆ ಬರುವಾಗ ಮೊದಲು ಅವನ ಬಿಂಬವು ಒಂದು ವಕ್ರರೇಖೆಯಾಗಿ ಕಂಡು ದಿನದಿನಕ್ಕೂ ವೃದ್ಧಿಯಾಗುತ್ತಾ ಹುಣ್ಣಿಮೆಯ ರಾತ್ರಿ ಪೂರ್ಣ ಬಿಂಬವಾಗಿ ಕಾಣುವದು. * ನಕ್ಷತ್ರಗಳೂ ಗ್ರಹಗಳೂ, ರಾತ್ರಿಯಲ್ಲಿ ಆಕಾಶದಲ್ಲಿ ಅನೇಕ ಚಿಕ್ಕೆಗಳು ಪ್ರಕಾಶಿಸುತ್ತವಈ ಹಿರೆಕ್ಕೆಗಳನ್ನು ಸಾವಧಾನದಿಂದ ನೋಡಿದರೆ ಅವೆಲ್ಲವೂ ಒಂದೇ ವಿಧವಾದ ಪ್ರಕಾ ಶವನ್ನು ಹೊಂದಿಲ್ಲವೆಂದು ತಿಳಿಯಬಹುದು. ಅವುಗಳಲ್ಲಿ ಹೆಚ್ಚು ಪಾಲಿನವು ವಿರು. ಮಿರುಗುತ್ತ ಬಿಟ್ಟು ಬಿಟ್ಟು ಪ್ರಕಾಶಿಸುತ್ತವೆ. ಅವು ದೊಡ್ಡವಾಗಿರಲಿ ಸಣ್ಣವಾಗಿ ರಲಿ ಈ ಸ್ವಭಾವವನ್ನೇ ಹೊಂದಿರುತ್ತವೆ. ಅಂತರಿಕ್ಷದಲ್ಲಿ ಕಾಣುವ ಕೆಲವು ಚಿಕ್ಕೆ ಗಳು ಈ ವಿಧವಾಗಿ ಹೊಳೆಯದೆ ಚಂದ್ರನ ಹಾಗೆ ಸ್ಥಿರವಾದ ಬೆಳಕಿನಿಂದ ಪ್ರಕಾ

  • ಚ೦ದ್ರ ಮ ಭೂಮಿಯ ಹಿಂಭಾಗದಲ್ಲಿರುವಾಗ ಸೂರ್ಯನ ಕಿರಣಗಳು ಚಂದ್ರನ ಮೇಲೆ ಪೀಳುವದು ಸಾಧ್ಯವೇ ಎಂದು ಕೇಳ ಬಹುದು ಭೂಮಿಗೂ ಚ೦ದ್ರನಿಗೂ ಇರುವ ದೂರವ ಸರಾಸರಿ ೨೪ ೦0೦೦ ಮೈಲುಗಳೆ೦ದು ತಿಳಿಯಬ೦ದಿರುತ್ತದೆ. ಸೂರ್ಯನಿಗೂ ಭೂಮಿಗೂ ಇರುವ *ಇದರ ವು ಇದರ ೪೦೦ ಪಾಲಿನಷ್ಟು ಇರುವದರಿಂದ ಭೂಮಿ ಯ ಮೇಲೂ ಚಂದ್ರನ ಮೇಲೂ ಫಿ ಇಳುವ ಸೂರ್ಯನ ಎಲ್ಲಾ ಕಿರಣಗಳು ಸಮಾಂತರವಾದವುಗಳೆಂದು ಹೇಳಲು ಅಡ್ಡಿಯಿಲ್ಲ