ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- ೧೭ -

ಣಿಕ ವ್ಯಕ್ತಿಯ ಹೆಸರನ್ನು ಕೊಟ್ಟಿರುತ್ತಾರೆ. ಇಂಥ ಭಾಗಗಳಿಗೆ ನಕ್ಷತ್ರಪುಂಜಗಳೆಂಬ (Constellations ಕಾಂಲೇಷನ್) ಹೆಸರು, ನಭೋಮಂಡಲದಲ್ಲಿ ಒಟ್ಟು ೮೪ ನಕ್ಷತ್ರಪುಂಜಗಳಿರುತ್ತವೆ, ಅವುಗಳಲ್ಲಿ ೧೨ ಪುಂಜಗಳು (ರಾಶಿಗಳು) ಕ್ರಾಂತಿವೃತ್ತದ ಸುತ್ತಲು ಅಂದರೆ ಸೂರ್ಯನ ನಭೋಮಂಡಲದೊಳಗಿನ ಮಾರ್ಗದ ಸುತ್ತಲು ಇರುತ್ತವೆ. ಉಳಿದವುಗಳಲ್ಲಿ ೨೮ ಈ ವೃತ್ತದ ಉತ್ತರಕ್ಕೂ ೪೪ ಇದರ ದಕ್ಷಿಣಕ್ಕೂ ಇರುತ್ತವೆ.

ಧ್ರುವನಕ್ಷತ್ರ (Pole Star - ಪೋಲಸ್ಟಾರ), ಪೃಥ್ವಿಯ ಉತ್ತರ ತುದಿಗೆ ಸರಿಯಾಗಿ ಒಂದು ನಕ್ಷತ್ರವು ಕಾಣುತ್ತದೆ. ಅದು ಪೃಥ್ವಿಯ ಒಂದು ಧ್ರುವದ ದಿಕ್ಕಿನಲ್ಲಿರುವದರಿಂದ ಅದಕ್ಕೆ ಧುವನಕ್ಷತ್ರವೆಂಬ ಹೆಸರು ಬಂದಿರುತ್ತದೆ. ಧ್ರುವ ನಕ್ಷತ್ರವೆಂದರೆ ಸ್ಥಿರವಾದ ನಕ್ಷತ್ರವು. ಈ ನಕ್ಷತ್ರವು ಉತ್ತರ ಗೋಲಾರ್ಧದ ಬೇರೆ ಬೇರೆ ಸ್ಥಳಗಳಲ್ಲಿ ಆಯಾ ಸ್ಥಳಗಳ ಅಕ್ಷಾಂಶದಷ್ಟು ಎತ್ತರದ ಮೇಲೆ ಕಾಣಿಸುತ್ತದೆ.

ಸಪ್ತರ್ಷಿ (Ursa major-ಅರ್ಸಾಮೇಜರ):-ಇದು ಉತ್ತರ ಧನದ ಸಮೀಪದಲ್ಲಿರುವ ಮುಖ್ಯ ನಕ್ಷತ್ರಪುಂಜವು, ಇದು ಆಕಾರದಲ್ಲಿ ರಂಟಿಯನ್ನು (ನೇಗಲು) ಹೋಲುತ್ತದೆ. ಇದರಲ್ಲಿ ೭ ನಕ್ಷತ್ರಗಳಿರುತ್ತವೆ. ಈ ಪುಂಜವು ಪೂರ್ವ ದಿಕ್ಕಿನಲ್ಲಿರುವಾಗ ಅದರ ಪಶ್ಚಿಮದ ಎರಡು ನಕ್ಷತ್ರಗಳನ್ನು ಕೂಡಿಸುವ ರೇಖೆಯನ್ನು ಬೆಳೆಸಿದರೆ ಆ ರೇಖೆಯಲ್ಲಿ ಧ್ರುವ ನಕ್ಷತ್ರವು ಯಾವಾಗಲೂ ಇರು ತದೆ, ಆದ್ದರಿಂದ ಅವುಗಳನ್ನು ಧ್ರುವದರ್ಶಕಗಳೆಂದು (Pointers-ಪಾಯಿಂ ಟರ್ಸ) ಕರೆಯುತ್ತಾರೆ. ಈ ಪುಂಜಕ್ಕೆ ಬೃಹದೃಕ್ಷ ಅಂದರೆ ದೊಡ್ಡ ಕರಡಿ (Great Bear ಗ್ರೇಟ ಬೇರ) ಎಂಬ ಹೆಸರು ಸಹ ರೂಢಿಯಲ್ಲಿರುತ್ತವೆ, ಮೇಲೆ ಹೇಳಿದ ಎರಡು ನಕ್ಷತ್ರಗಳು ಮತ್ತು ಅವುಗಳಿಗೆ ಪೂರ್ವದಲ್ಲಿರುವ ಎರಡು ನಕ್ಷತ್ರಗಳು ಇವು ಕರಡಿಯ ಕಾಲುಗಳು, ಈ ನಾಲ್ಕು ನಕ್ಷತ್ರಗಳ ಪೂರ್ವಕ್ಕಿರುವ ಮೂರು ನಕ್ಷತ್ರಗಳು ಕರಡಿಯ ಬಾಲವಾಗಿರುತ್ತವೆ.

ಶರ್ಮಿಷ್ಠಾ (Cassiopia-ಕ್ಯಾಸಿಯೊಪಿಯಾ) ಧ್ರುವನಕ್ಷತ್ರದ ಒಂದು ಮಗ್ಗಲಿಗೆ ಸರ್ಸ್ತಭವಂತಿ ಎರಡನೆಯ ಮಗ್ಗಲಿಗೆ ಶರ್ಮಿಷ್ಠಾ ಎಂಬ ನಕ್ಷತ್ರಪುಂಜವಿರುತ್ತದೆ. ಇದರ ಆಕಾರವು ಇಂಗ್ಲೀಷ್ ವರ್ಣಮಾಲೆಯ W ಅಕ್ಷರ