ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- ೧೮ -

ವನ್ನು ಹೋಲುತ್ತದೆ. ಇದರಲ್ಲಿ ೫ನಕ್ಷತ್ರಗಳಿರುತ್ತವೆ. ಸಪ್ತರ್ಷಿ, ಶರ್ಮಿಷ್ಠಾ ಈ ಪುಂಜಗಳು ಧ್ರುವನಕ್ಷತ್ರದ ಬೇರೆ ಬೇರೆ ಪಾರ್ಶ್ವಗಳಲ್ಲಿರುವದರಿಂದ ಈ ಎರಡು ಪುಂಜಗಳು ಏಕಕಾಲದಲ್ಲಿ ಕಾಣಿಸುವದಿಲ್ಲ.


ನಾಲ್ಕನೇ ಅಧ್ಯಾಯ.

ಪೃಥ್ವಿಯ ಚಲನೆಗಳೂ ಋತುಗಳೂ,

(೧)

ಅಂತರಿಕ್ಷದಲ್ಲಿ ಹಗಲಲ್ಲಿ ಸೂರ್ಯನು ಪೂರ್ವದಿಂದ ಪಶ್ಚಿಮಕ್ಕೆ ಹೋಗುನಂತೆ ಕಾಣುತ್ತಾನಷ್ಟೇ. ಹಾಗೆಯೇ ರಾತ್ರಿಯಲ್ಲಿ ಚಂದ್ರನೂ ನಕ್ಷತ್ರಗಳೂ ಗ್ರಹಗಳೂ ಪೂರ್ವದಿಂದ ಪಶ್ಚಿಮದ ಕಡೆಗೆ ಹೋಗುವದನ್ನು ನೋಡುತ್ತೇವೆ. ಹೀಗೆ ನಭೋಮಂಡಲದಲ್ಲಿ ಈ ವಸ್ತುಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವ ಹಾಗೆ ಕಾಣುವದಕ್ಕೆ ಕಾರಣವೇನು? ನಮಗೆ ಕಾಣುವ ಈ ನೋಟವು ಎರಡು ಕಾರಣ ಗಳಿಂದುಂಟಾಗಬಹುದು:-(ಅ) ನಾವು ವಾಸ ಮಾಡುವ ಭೂಮಿಯು ಸ್ಥಿರವಾಗಿದ್ದು ಸೂರ್ಯ, ಚಂದ್ರ ಮತ್ತು ಎಲ್ಲಾ ವಿಧವಾದ ಚಿಕೈಗಳು ಭೂಮಿಯ ಸುತ್ತಲು ಸುತ್ತುವದರಿಂದುಂಟಾಗಬಹುದು,(ಬ) ಭೂಮಿಯು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುವದರಿಂದುಂಟಾಗಬಹುದು. ಇವೆರಡರಲ್ಲಿ ಯಾವದು ಸಾಧ್ವವು?

ಭೂಮಿಯು ಸ್ಥಿರವಾಗಿದ್ದು ಅದರ ಸುತ್ತಲು ಸೂರ್ಯ, ಚಂದ್ರ, ನಕ್ಷತ್ರಗಳು ಗ್ರಹಗಳು ಇವು ಪೂರ್ವದಿಂದ ಪಶ್ಚಿಮಕ್ಕೆ ಸುತ್ತುತ್ತವೆಂಬ ಅಭಿಪ್ರಾಯವೇ ಬಹುಕಾಲದಿಂದಲೂ ರೂಢಿಯಾಗಿತ್ತು. ನಾವು ವಾಸ ಮಾಡುವ ಪೃಥ್ವಿಯು ಚಲಿಸದೆ ಈ ವಸ್ತುಗಳೇ ಚಲಿಸುತ್ತವೆ ಎಂದು ತಿಳಿಯುವದು ಸ್ವಾಭಾವಿಕ, ಆಕಾಶದಲ್ಲಿ ಕಾಣುವ ಸೂರ್ಯನೇ ಮೊದಲಾದ ವಸ್ತುಗಳು ಹೀಗೆ ಒಂದೊಂದು ದಿನದಲ್ಲಿ ಭೂಮಿಯ ಪ್ರದಕ್ಷಣೆಯನ್ನು ಮಾಡು