- ೧೯ -
ವದಾದರೆ, ಪೃಥ್ವಿಗಿಂತಪ್ರಮಾಣದಲ್ಲಿ ಬಹಳ ದೊಡ್ಡದಾದ ವಸ್ತುಗಳು ಅದರ ಸುತ್ತಲು ಸುತ್ತುತ್ತಾ ಅದರ ಆಕರ್ಷಣಶಕ್ತಿಗೆ ಒಳಪಟ್ಟಿರಬೇಕು, ಅಂತರಿಕ್ಷದಲ್ಲಿ ಕಾಣುವ ವಸ್ತುಗಳಲ್ಲಿ ನಮಗೆ ಸಮೀಪದಲ್ಲಿರುವ ಸೂರ್ಯನು ಭೂಮಿಯ ೧೭ ಲಕ ಪಾಲಿನಷ್ಟಿರುತ್ತಾನೆಂದು ತಿಳಿದು ಬಂದಿರುತ್ತದೆ. ಹೀಗೆ ದೊಡ್ಡ ಪದಾರ್ಥಗಳು ಸಣ್ಣ ಪದಾರ್ಥದ ಆಕರ್ಷಣೆಗೊಳಗಾಗಿ ಅದರ ಸುತ್ತಲು ಸುತ್ತುವುದು ಅಸಂಭವವು. ಸೂರ್ಯ, ನಕ್ಷತ್ರಗಳು, ಗ್ರಹಗಳು, ಇವೆಲ್ಲವೂ ಭೂಮಿಯ ಮೇಲೆ ವಾಸಮಾಡುವ ನನಗೆ ಬಹಳ ಸಣ್ಣ ಸಣ್ಣ ವಸ್ತುಗಳಾಗಿ ಕಾಣುತ್ತವೆ, ಅವು ನಮಗೆ ಬಹಳ ದೂರದಲ್ಲಿರುವದೇ ಈ ಕಲ್ಪನೆಗೆ ಕಾರಣವು. ಪದಾರ್ಥಗಳು ದೂರದೂರಕ್ಕೆ ಹೋಗುತ್ತಾ ಸಣ್ಣದಾಗಿ ಕಾಣುವದಕ್ಕೆ ನಿದರ್ಶನವಾಗಿ ಬಂದರದಿಂದ ಹೊರಡುವ ಒಂದು ಹಡಗವನ್ನು ಹೇಳಬಹುದು.
ನಮಗೆ ಕಾಣಿಸುವ ಹಾಗೆ ಅಂತರಿಕ್ಷದಲ್ಲಿರುವ ವಸ್ತುಗಳು ೨೪ ಘಂಟೆಗಳಲ್ಲಿ (ತಾಸುಗಳಲ್ಲಿ) ಪೃಧ್ವಿಯ ಒಂದು ಪ್ರದಕ್ಷಣೆಯನ್ನು ಮಾಡುವದಾದರೆ ಹೆಚ್ಚು ಹೆಚ್ಚು ದೂರದಲ್ಲಿರುವ ಚಿಕ್ಕೆಗಳು ಹೆಚ್ಚು ಹೆಚ್ಚು ವೇಗದಿಂದ ಪೃಥ್ವಿಯ ಸುತ್ತಲು ಸಂಚರಿಸಬೇಕು. ಸೂರ್ಯನು ಒಂದು ಘಂಟೆಗೆ ೨,೩೨,೫೦,೦೦೦ ಮೈಲಿನಷ್ಟು ವೇಗದಿಂದಲೂ ಅತಿಸಮೀಪದಲ್ಲಿರುವ ನಕ್ಷತ್ರವು ೪೮೦೦,೦೦,೦೦,೦೦,೦೦೦ ಮೈಲಿನಷ್ಟು ವೇಗದಿಂದಲೂ ಇವುಗಳಿಗಿಂತ ದೂರದಲ್ಲಿರುವ ಚಿಕ್ಕೆಗಳು ಮತ್ತಷ ಹೆಚ್ಚಿನ ವೇಗದಿಂದ ಚಲಿಸಬೇಕಾಗುವದು. ಪದಾರ್ಥಗಳಲ್ಲಿ ಇಂಥ ಅಪರಿಮಿತ ವೇಗಗಳ ಕಲ್ಪನೆಯು ಅಶಕ್ಯವು. ಅಂತರಿಕ್ಷದಲ್ಲಿ ಕಾಣುವ ವ್ಯಗಳು ಸೃಷ್ಟಿಯ ಸುತ್ತಲು ಪ್ರದಕ್ಷಣೆಯನ್ನು ಮಾಡುವದಕ್ಕೆ ಬದಲಾಗಿ ಸೃಷ್ಟಿಯೇ ತನ್ನ ಸುತ್ತಲೂ ಸುತ್ತಿದರೆ ಇಷ್ಟು ಅಪರಿಮಿತವಾದ ವೇಗದಿಂದ ಚಲಿಸಬೇಕಾಗುವದಿಲ್ಲ-
ಆಕಾಶದಲ್ಲಿ ಕಾಣುವ ಚಿಕ್ಕೆಗಳು ಪ್ರತಿನಿತ್ಯವೂ ಒಂದು ನಿಯಮಿತ ಮಾರ್ಗವನ್ನು ಹಿಡಿದು ತಮ್ಮಲ್ಲಿ ಪರಸ್ಪರ ಒಂದೇ ಅಂತರವನ್ನಿಟ್ಟುಕೊಂಡು ಭೂಪ್ರದಕ್ಷಣೆ ಯನ್ನು ಮಾಡುವಂತೆ ಕಾಣುವವಷ್ಟೇ. ಇವು ಚಲಿಸುವದೇ ನಿಶ್ಚಯವಾದರೆ, ಅಂತರಿಕ್ಷದ ಎಲ್ಲಾ ಕಡೆಗಳಲ್ಲಿ ವ್ಯಾಪಿಸಿ ಭೂಮಿಯಿಂದ ಬಹಳ ಹೆಚ್ಚಾದ ದೂರದಲ್ಲಿರುವ ಈ ವಸ್ತುಗಳ ಅಂತರಗಳಲ್ಲಿ ಸ್ವಲ್ಪವೂ ವ್ಯತ್ಯಾಸವಾಗದಂತೆ ಅವು ಒಂದಕ್ಕೊಂದು ಭದ್ರವಾಗಿ ಕಟ್ಟಲ್ಪಟ್ಟಿದ್ದ ಹೊರತು ಅವುಗಳ ಚಲನೆಯು ಸಾಧ್ಯವಲ್ಲ. ಅವು ಸಿರವಾಗಿದ್ದು ಸೃಷ್ಟಿಯೇಸುತ್ತಿದರೆ, ಪೃಥ್ವಿಯು ಚಲಿಸುವ ದಿಕ್ಕಿಗೆ ವಿರು