ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೨೦ - ದ್ದವಾದ ದಿಕ್ಕಿನಲ್ಲಿ ಅವು ಚಲಿಸುವಂತೆ ಕಂಡು ಬರುವದು ಸ್ವಾಭಾವಿಕ. ನಳಿಕಾಯಂತ್ರದ ಸಹಾಯದಿಂದ ( Telescope-ಟೆಲೆಸ್ಕೋಪ್) ಆಕಾ ತದಲ್ಲಿ ಕಾಣುವ ಗ್ರಹಗಳನ್ನು ಸಾವಧಾನದಿಂದ ನೋಡಿದರೆ ಅವು ತಮ್ಮ ಮೈಸು ತಲು ಸುತ್ತುತ್ತಿರುವ ಗೋಲಗಳಾಗಿರುವವೆಂದು ತಿಳಿಯಬರುವದು ಸೂರ್ಯನ ಬಿಂಬವನ್ನು ಆಗಾಗ್ಗೆ ಪರೀಕ್ಷಿಸುತ್ತಿದ್ದರೆ ಅದರಲ್ಲಿರುವ ಕೆಲವು ಬಿಂದುಗಳ ಸ್ಥಾನವು ವ್ಯತ್ಯಾಸವಾಗುವಂತೆ ಕಾಣುವದು ನಾವು ಈ ಬಿಂದುಗಳನ್ನು ಕ್ರಮವಾಗಿ ನಿರೀಕ್ಷಿಸುತ್ತ ಬಂದರೆ ಅವು ಎಡಗಡೆಯಿಂದ ಬಲಗಡೆಗೆ ಸರಿದಂತೆ ಕಾಣುವವು. ಯಾವದಾದರೂ ಒಂದು ಬಿಂದು ಒಂದು ಸಾರೆ ಒಂದು ನಿಯಮಿತ ಸ್ಥಳದಲ್ಲಿ ಕಂಡು ಬಂದು ಪುನಃ ಅದೇ ಸ್ಥಳದಲ್ಲಿರುವಂತೆ ಕಾಣಬೇಕಾದರೆ ಸುಮಾರು ಒಂದು ತಿಂಗಳು ಹಿಡಿಯುವುದು. ಪೃಥ್ವಿಯು ಸಹ ಇದೇ ರೀತಿಯಲ್ಲಿ ಸುತ್ತುತ್ತಿರುವ ದೆಂದು ಎಣಿಸಬಹುದು. ಸೃಥ್ವಿಯು ಆಕಾರದಲ್ಲಿ ಪೂರ್ಣ ಗೋಲವಲ್ಲ. ಅದು ಕಿತ್ತಳೆ ಹಣ್ಣಿನ ಹಾಗೆ ಎರಡು ಭಾಗಗಳಲ್ಲಿ ಚಪ್ಪಟೆಯಾಗಿದ್ದು ಉಳಿದ ಭಾಗಗಳಲ್ಲಿ ಉಬ್ಬಿರು ವದು. ಸೃಥ್ವಿಯ ದಕ್ಷಿಣೋತ್ತರ ವ್ಯಾಸವು ಪೂರ್ವ ಪಶ್ಚಿಮ ವ್ಯಾಸಕ್ಕಿಂತ ೨೭ ಮೈಲುಗಳಷ್ಟು ಸಣ್ಣದಾಗಿರುವದೆಂದು ಕಂಡುಹಿಡಿಯಲ್ಪಟ್ಟಿರುತ್ತದೆ. ಹೀಗೆ ಪೃಥ್ವಿಯು ಚಪ್ಪಟೆಯಾಗಿರುವದಕ್ಕೆ ಇದರ ಚಲನೆಯೇ ಕಾರಣವೆಂದು ಶಾಸ್ತ್ರಜ್ಞ ರು ಹೇಳುತ್ತಾರೆ. ಇಷ್ಟು ಕಾರಣಗಳಿಂದ ನಾವು ವಾಸಮಾಡುವ ಭೂಮಿಯೇ ತನ್ನ ಅಕ್ಷದ ಮೇಲೆ ಸುತ್ತುತ್ತಿರುವದೆಂದು ಖಂಡಿತವಾಗಿ ತಿಳಿಯಬಹುದು. ಸೂರ್ಯನು ಒಂದೇ ಸ್ಥಳದಲ್ಲಿ ಸ್ಥಿರವಾಗಿದ್ದು ಅವನ ಕಿರಣಗಳು ಸದಾ ಭೂಮಿಯ ಮೇಲೆ ಬೀಳುತ್ತಿ ರುವವು. ಅವನಿಗೆ ಎದುರಾಗಿರುವ ಭೂಮಿಯ ಭಾಗದಲ್ಲಿ ಹಗಲೂ ಮತ್ತೊಂದು ಭಾಗದಲ್ಲಿ ರಾತ್ರಿಯ ಆಗಿರುವದು. ಹೀಗೆ ಸೃಷ್ಟಿಯೇ ಸುತ್ತುವದಾದರೆ ನನಗೆ ಏತಕ್ಕೆ ಈ ಚಲನೆಯು ಗೋಚರವಾಗುವದಿಲ್ಲ? ಸೂರ್ಯ, ನಕ್ಷತ್ರಗಳು ಇವು ಚಲಿಸುವಂತೆ ಕಾಣಲು ಕಾರಣವೇನು? ಇದಕ್ಕೆ ಎರಡು ನಿದರ್ಶನಗಳನ್ನು ಹೇಳ ಬಹುದು. ವೇಗವಾಗಿ ಹೋಗುತ್ತಿರುವ ಉಗಿಬಂಡಿಯಲ್ಲಿ ನಾವು ಪ್ರಯಾಣ ಮಾಡುವಾಗ ದಾರಿಯ ಪಾರ್ಶ್ವಗಳಲ್ಲಿರುವ ಮನೆಗಳೂ ಕಂಭಗಳೂ ಹಿಂದೆ ಹೋ ಗುವಂತೆ ಕಾಣುವವೇ ಹೊರತು ನಾವು ಕೂತಿರುವ ಬಂಡಿಯು ಮುಂದೆ ಹೋ ಗುವಂತೆ ತೋರುವದಿಲ್ಲ. ಇದರಂತೆಯೇ ಒಬ್ಬ ಪ್ರವಾಸಿಯು ಒಂದು ದೋಣಿ