ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೨೩ - ಕಡೆಗೆ ಬಾಗಿಕೊಂಡರೆ ಸೂರ್ಯನು ನನ್ನ ಕಡೆಗೆ ಬರುವಂತೆ ಕಾಣುವನು. ಹೀಗೆ ಸೂರ್ಯನು ಜೂನ ೨೧ ರಲ್ಲಿ ಅತ್ಯಧಿಕ ಉತ್ತರಕ್ಕೆ ಹೋಗಿ ಸೇರುವನು. ಅಂದರೆ ಪೃಥ್ವಿಯು ತನ್ನ ಉತ್ತರ ಮೇರುವನ್ನು ಅತ್ಯಧಿಕವಾಗಿ ಬಾಗಿಸುವದರಿಂದ ಸೂರ್ಯನು ತೀರ ಉತ್ತರಕ್ಕೆ ಹೋದಂತೆ ತೋರಿಬರುವನು. ಸೆಪ್ಟೆಂಬರ ೨೧ ರಲ್ಲಿ ಸೂರ್ಯನು ಪುನಃ ವಿಷುವದ್ರೇಖೆಯ ಮೇಲಿರುವಂತೆ ಕಂಡು ಬಂದು ಅನಂತರ ದಕ್ಷಿಣಕ್ಕೆ ತೆರಳುವನಷ್ಟೇ ಮಾರ್ಚ ೨೧ ರಿಂದ ಸೆಪ್ಟೆಂಬರ ೨೧ ರ ವರೆಗೆ ಭೂಮಿಯ ಉತ್ತರಾರ್ಧವು ಸೂರ್ಯನ ಕಡೆಗೆ ಬಾಗಿಕೊಂಡಿರುವದರಿಂದ ಅಲ್ಲಿ ಸೂರ್ಯನ ಕಿರಣಗಳು ನೆಟ್ಟಗೆ ( ಲಂಬವಾಗಿ) ಬಿದ್ದು ನನಗೆ ಬೇಸಿಗೆಯ ಕಾಲವು ಉಂಟಾಗುವದು. ಸೆಪ್ಟೆಂಬರದ ತರುವಾಯ ದಕ್ಷಿಣಧ್ರುವವು ಸೂರ್ಯನ ಕಡೆಗೆ ಬಾಗಿರುವದರಿಂದ ಆಗ ದಕ್ಷಿಣಾರ್ಧ ಗೋಲದಲ್ಲಿ ಬೇಸಿಗೆಯ ಉತ್ತ ರಾರ್ಧಗೋಲದಲ್ಲಿ ಚಳಿಗಾಲವೂ ತೋರುವವು. ಪೃಥ್ವಿಯು ಸುತ್ತುವಾಗ ಅದರ ಅಕ್ಷವು ಸರಿಯಾಗಿ ದಕ್ಷಿಣೋತ್ತರವಾಗಿ ರುವದಕ್ಕೆ ಬದಲಾಗಿ ಸೂರ್ಯನ ಸುತ್ತಲು ಅದು ಚಲಿಸುವ ಮಾರ್ಗದ ಕ್ಷೇತ್ರಕ್ಕೆ ( ಪಾತಳಿಗೆ) ಸ್ವಲ್ಪ ಬಾಗಿದ್ದು ಈ ಅಕ್ಷದ ಮೇರುಗಳು ಯಾವಾಗಲೂ ಒಂದೆ ಕಡೆಗೆ ತೋರಿಸುತ್ತಿದ್ದರೆ ಪೃಥ್ವಿಯ ಮೇಲೆ ಋತುಭೇದಗಳುಂಟಾಗುತ್ತವೆ, ಭೂಮಿಯ ಉತ್ತರ ಧ್ರುವವು ಯಾವಾಗಲೂ ಒಂದೇ ನಕ್ಷತ್ರದ ಕಡೆಗೆ ತಿರಿಗಿರುವ ದನ್ನು ನಾವು ನೋಡಬಹುದು. ಈ ನಕ್ಷತ್ರಕ್ಕೆ ಧ್ರುವನಕ್ಷತ್ರವೆಂಬ ಹೆಸರು ಬಂದಿರುತ್ತದೆ, ಪೃಥ್ವಿಯ ಅಕ್ಷವು ಅದರ ಮಾರ್ಗದ ಕ್ಷೇತ್ರಕ್ಕೆ ಬಾಗಿ ಒಂದೆ ದಿಕ್ಕನ್ನು ತೋರಿಸುತ್ತಿರುವದರಿಂದ ಅದರ ಉತ್ತರ ಅಥವಾ ದಕ್ಷಿಣ ಧ್ರುವವು ಕೆಲವು ಸ್ಥಾನಗಳಲ್ಲಿ ಸೂರ್ಯನ ಕಡೆಗೆ ಒಲಿದದ್ದಾಗಿಯೂ ಕೆಲವು ಸ್ಥಾನಗ ಇಲ್ಲಿ ಸೂರ್ಯನಿಂದ ದೂರವಾದದ್ದಾಗಿಯೂ ಇರುತ್ತದೆ. ಮಾರ್ಗದ ಎರಡು ಸ್ಥಾನಗಳಲ್ಲಿ ಮಾತ್ರ ಈ ಎರಡು ಮೇರುಗಳು ಸೂರ್ಯನಿಂದ ಸಮನಾದ ದೂರದಲ್ಲಿ ರುತ್ತವೆ. ಮಾರ್ಚ ೨೧ರಲ್ಲ ಸೆಪ್ಟೆ ಬರ ೨೧ ರಲ್ಲಣ ಸೃಥ್ವಿಯ ಎರಡೂ ಧ್ರುವಗಳು ಸೂರ್ಯನಿಂದ ಸಮನಾದ ದೂರದಲ್ಲಿದ್ದು ಭೂಮಿಯ ಎಲ್ಲಾ ಭಾಗ ಗಳಲ್ಲಿ ಅಹೋರಾತ್ರಿಗಳು ಸಮಪ್ರಮಾಣದ್ದಿರುತ್ತವೆ. ಜೂನ ೨೧ ರಲ್ಲಿ ಉತ್ತರೆ ಧ್ರುವವು ಸೂರ್ಯನಿಗೆ ಸವಿಾಪವಾಗಿರುವದರಿಂದ ಭೂಮಿಯ ಉತ್ತರ ಗೋಲಾ ರ್ಧದಲ್ಲಿ ಬೇಸಿಗೆಯು ದಕ್ಷಿಣ ಗೋಲಾರ್ಧದಲ್ಲಿ ಚಳಿಗಾಲವೆಂಬ ಭೇದಗಳುಂಟಾಗು