ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೯೪ - ಇವೆ. ಉತ್ತರಾಯಣ ಮತ್ತು ದಕ್ಷಿಣಾಯಣವೆಂಬ ಸೂರ್ಯನ ಗತಿಗಳಿಗೆ ಪೃಥ್ವಿಯು ತನ್ನ ಅಕ್ಷವನ್ನು ಸ್ವಲ್ಪ ಓರೆಯಾಗಿಟ್ಟು ಕೊಂಡು ಸೂರ್ಯನ ಸುತ್ತಲು ಸುತ್ತುವದೇ ಕಾರಣವು. ಐದನೇ ಅಧ್ಯಾಯ. ಮೋಡಗಳು, [ಶಿಕ್ಷಕರಿಗೆ ಸೂಚನೆ:- ಈ ಪಾಠವನ್ನು ಸರಿಯಾಗಿ ನಡಿಸಬೇಕಾದರೆ ಆಕಾಶದಲ್ಲಿ ಮೇಘಗಳು ಹೆಚ್ಚಾಗಿರುವ ದಿನವನ್ನು ನೋಡಿ ಅಂತರಿಕ್ಷದ ನಿರೀಕ್ಷೆ ಣೆಯನ್ನಿಟ್ಟುಕೊಳ್ಳಬೇಕು, ಹುಡುಗರು ಆಗಾಗ್ಗೆ ಆಕಾಶದಲ್ಲಿ ಕಾಣುವ ಮೇಘ ಗಳನ್ನು ತಾವೇ ನೋಡುತ್ತ ಅವುಗಳಲ್ಲಿರುವ ಹೆಚ್ಚು ಕಡಿಮೆಗಳನ್ನು ತಿಳಿಯ ಬೇಕು, ಯಾವ ಋತುವಿನಲ್ಲಿ ಯಾವ ಬಗೆಯಾದ ಮೋಡಗಳು ಹೆಚ್ಚಾಗಿರು ತವೆ ಎಂಬುವದನ್ನು ಅವರು ಗೊತ್ತು ಮಾಡಬೇಕು.] ಮುಗಿಲಲ್ಲಿರುವ ವಸ್ತುಗಳನ್ನು ಮರೆಯಿಸುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ವಲ್ಪ ಅಥವಾ ಹೆಚ್ಚು ವೇಗದಿಂದ ಸಂಚರಿಸುವ ಹೊಗೆರೂಪದ ಮೋಡ ಗಳು (ಮೇಘಗಳು) ನಮಗೆ ಗೋಚರವಾಗುತ್ತವಷ್ಟೇ. ಕೆಲವು ದಿನಗಳಲ್ಲಿ ಆಕಾಶದಲ್ಲಿ ಮೋಡಗಳು ಹೆಚ್ಚಾಗಿಯೂ ಕೆಲವು ದಿನಗಳಲ್ಲಿ ಕಡಿಮೆಯಾಗಿಯೂ ಇರುತ್ತವೆ. ಒಂದೊಂದು ಸಾರೆ ಇವು ಆಕಾಶದ ಎಲ್ಲಾ ಕಡೆಗಳಲ್ಲಿ ಬಹಳ ದಟ್ಟ ವಾಗಿ ವ್ಯಾಪಿಸುವದರಿಂದ ಅಂತರಿಕ್ಷದಲ್ಲಿರುವ ಸೂರ್ಯನು ಸಹ ನಮಗೆ ಕಾಣಿ ಸುವದಿಲ್ಲ. ಒಂದೊಂದು ದಿನದಲ್ಲಿ ಮೋಡಗಳ ಪ್ರಮಾಣವು ಎಷ್ಟಿರುತ್ತದೆಂಬು ದನ್ನು ಗೊತ್ತು ಮಾಡುವದು ಮೊದಲನೇ ವಿಚಾರವು. - ಮೊಡಗಳ ವಿಧಗಳು :- ಆಕಾಶದಲ್ಲಿ ಮೋಡಗಳು ಬಗೆ ಬಗೆ ಯಾದ ಆಕಾರವುಳ್ಳವುಗಳಾಗಿ ನೋಟಕ್ಕೆ ಬಹಳ ಅಂದವಾಗಿರುತ್ತವೆ. ವಾತಾ ವರಣದ ಎತ್ತರವಾದ ಭಾಗಗಳಲ್ಲಿ ಗಾಳಿಯ ಚಲನೆಯಿಂದ ಇವು ಒಂದು ಸ್ಥಳ ದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಾ ಆಕಾರದಲ್ಲಿ ಅಡಿಗಡಿಗೆ ವ್ಯತ್ಯಾಸವಾಗು ತಿರುತ್ತವೆ. ಈ ಮೋಡಗಳಲ್ಲಿ ಕೆಲವು ಗುಂಪುಗುಂಪಾಗಿ ವಿಸ್ತರಿಸಿಕೊಂಡು ವ್ಯಾಪಿಸಿದ್ದು ಆಕಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ದುಂಡಾಗಿರುತ್ತವೆ. ಕೆಲವು