ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ಅ೫ – ಹರಿದು ಸಣ್ಣ ಸಣ್ಣ ತುಂಡುಗಳಾಗಿ ಗಾಳಿಯ ಚಲನೆಯಿಂದ ಅಂತರಿಕ್ಷದಲ್ಲಿ ಬಹಳ ವೇಗದಿಂದ ಸಂಚರಿಸುತ್ತಿರುತ್ತವೆ. ಮಳೆ ಸುರಿಯುತ್ತಿರುವಾಗ ಮೋಡಗಳು ಬಹಳ ದಟ್ಟವಾಗಿ ವ್ಯಾಪಿಸುವದರಿಂದ ಆಕಾಶವು ಕರೇ ಬಣ್ಣವುಳ್ಳದ್ದಾಗಿರುವುದು ನಮಗೆ ಆಕಾಶದಲ್ಲಿ ಕಾಣುವ ಮುಖ್ಯ ವಾದಮೋಡಗಳ ವಿಧಗಳು ಯಾವವೆಂದರೆ (೧) ಮಳೆಯನ್ನು ಸುರಿಸುವ ಕರೇ ಮೋಡಗಳು (Nimbusನಿಂಬಸ):- ಇವು ಕರೇ ಬಣ್ಣವುಳ್ಳವುಗಳಾಗಿಯೂ ಬಹಳ ದಟ್ಟವಾ ಗಿಯೂ ಇರುತ್ತವೆ. ಇವುಗಳಿಗೆ ಒಂದು ನಿಯಮಿತವಾದ ಆಕಾರವಿಲ್ಲ. ಕೆಲವು ವೇಳೆಗಳಲ್ಲಿ ಇವು ಆಕಾಶದ ಎಲ್ಲಾ ಕಡೆಗಳಲ್ಲಿ ವ್ಯಾಪಿಸಿರುವದರಿಂದ ಆಕಾಶದ ನೀಲವರ್ಣವು ಸ್ವಲ್ಪವೂ ಕಾಣಿಸುವದಿಲ್ಲ. ಒಂದೊಂದು ಸಾರೆ ಇವು ಅಂತರಿಕ್ಷ ದ ಒಂದು ಭಾಗದಲ್ಲೇ ಬಹಳ ಹೆಚ್ಚಾಗಿದ್ದು ಇವುಗಳ ಅಂಚು ಛಿನ್ನವಿಚ್ಛಿನ್ನವಾ ಗಿರುವದು. ಎಲ್ಡ್ ಮೋಡಗಳಲ್ಲಿ ಇದೇ ಹೆಚ್ಚಿನ ಭಾರವುಳ್ಳವು. ಆದ್ದರಿಂದ ಇವು ಭೂಮಿಯಿಂದ ಸ್ವಲ್ಪ ಎತ್ತರದ ಮೇಲೆ ತೇಲಾಡುತ್ತಿದ್ದು ಇವುಗಳ ಮೇಲ್ಲಾ ಗದಲ್ಲಿ ಹಗುರವಾದ ಮೋಡಗಳು ಸಂಚರಿಸುವದನ್ನು ನಾವು ನೋಡಬಹುದು. ಇವು ನೆಲದಿಂದ ೩೦೦೦ ದಿಂದ ೬೦೦೦ ಪೂಟು (ಅಡಿಗಳ ಎತ್ತರದ ವರೆಗೆ ವ್ಯಾಪಿ ಸಿರುತ್ತವೆ. ಆಕಾಶದಲ್ಲಿ ಕರೇ ಮೋಡಗಳು ಕೂಡಿದವೆಂದರೆ ಮಳೆಯು ಬರುವ ದೆಂದು ತಿಳಿಯಬಹುದು. ಇವು ಮಳೆಗಾಲದಲ್ಲಿ ಹೆಚ್ಚಾಗಿ ಕಾಣುತ್ತವೆ. (೨) ಗುಂಪು ಗುಂಪಾದ ಬಿಳೇ ಮೋಡಗಳು (Cumulusಕ್ಯ ವಲಸ ):-ಸೂರ್ಯನು ಪ್ರಕಾಶಿಸುತ್ತಾ ಬಿಸಲು ಹೆಚ್ಚಾಗಿರುವಾಗ ಕೆಲವು ದಿನಗಳಲ್ಲಿ ಆಕಾಶದ ಬೇರೆ ಬೇರೆ ಭಾಗಗಳಲ್ಲಿ ಮೋಡಗಳು ಕಾಣುವ ವಷ್ಟೇ. ಇವು ವಿಶೇಷವಾಗಿ ಬಿಳೇ ಬಣ್ಣವುಳ್ಳವುಗಳಾಗಿ ಹತ್ತಿಯ (ಅರಳೆಯ) ರಾಶಿಗಳಂತೆ ಕಾಣಿಸುತ್ತವೆ. ಇವುಗಳ ಅಡಿಯ ಭಾಗವು ಮೇಲಾಗಕ್ಕಿಂತ ಸ್ವಲ್ಪ ಕಪ್ಪಾಗಿ ಕಾಣುವುದು. ಈ ಮೋಡಗಳು ನೆಲದಿಂದ ೪೫೦೦ ರಿಂದ ೬೦೦೦ ಅಡಿಗಳಿಗೂ ಹೆಚ್ಚಾದ ಎತ್ತರದಲ್ಲಿರುತ್ತವೆ. ಈ ಮೋಡಗಳು ಮಳೆಗಾ ಲದ ಆರಂಭದಲ್ಲೂ ಮಳೆಗಾಲ ಮುಗಿದ ಮೇಲೂ ಕಂಡುಬರುವವು. - (೩) ಗರಿಯ ಆಕಾರದ ಮೋಡಗಳು (Citius-ಸಿರಸ್): ಅನೇಕಾನೇಕವೇಳೆಗಳಲ್ಲಿ ಆಕಾಶದಲ್ಲಿ ಬಹಳ ಎತ್ತರದ ಮೇಲೆ ಬಿಳೇ ಬಣ್ಣದ