ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೨೬ - ಮೇಘಗಳ ಸಣ್ಣ ಸಣ್ಣ ತುಂಡುಗಳು ಅಲ್ಲಲ್ಲಿ ಹರಡಿಕೊಂಡಹಾಗೆ ಕಾಣುತ್ತವೆ. ಇವು ಆಕಾಗದಲ್ಲಿ ಪಕ್ಷಿಗಳ ಗರಿಗಳನ್ನು ಹೋಲುವದರಿಂದ ಇವುಗಳಿಗೆ ಗರಿಯ ಆಕಾರದ ಮೋಡಗಳೆಂದು ಕರೆಯುತ್ತಾರೆ. ಇವು ಸುಮಾರು ೨೭ ಸಾವಿರ ಅಡಿ. ಗಳಿಂದ ೫೦ ಸಾವಿರ ಅಡಿಗಳ ಎತ್ತರದವರೆಗೂ ವ್ಯಾಪಿಸಿರುವದುಂಟು. ಇಷ್ಟು ಎತ್ತರದಲ್ಲಿ ಶೈತ್ಯವು ಹೆಚ್ಚಾಗಿರುವದರಿಂದ ಈ ಮೋಡಗಳಲ್ಲಿ ನೀರಿನ ಅಣುಗಳು: ಹಿಮದ ರೂಪಕ್ಕೆ ಬಂದು ತಗಡುಗಳ ಹಾಗೆ ಬೆಳ್ಳಗಾಗಿಯೂ ತೆಳುವಾಗಿಯೂ ಇರುತ್ತವೆ. ಈ ಮೋಡಗಳು ಆಕಾಶದಲ್ಲಿ ಕಂಡುಬಂದರೆ ಮುಂದೆ ಬಿರುಗಾ ಳಿಯು ಬರುವದೆಂದು ಎಣಿಸಬಹುದು, (೪) ಪದರ ಪದರಗಳಾಗಿ (ತರಗಳ೦ತಿ) ರುವ ಮೋಡಗಳು (Stratus ಸ್ಟಾಟಸ ):-ಈ ಮೋಡಗಳು ಸೂರ್ಯೋದಯ ಮತ್ತು ಸೂರ್ಯಾ ಸಮಾನ ಈ ವೇಳೆಗಳಲ್ಲಿ ಭೂಮಿಯಿಂದ ಸ್ವಲ್ಪ ಎತ್ತರದಲ್ಲೇ, ಅಂದರೆ ಕ್ಷಿತಿಜಕ್ಕೆ ಸಮೀಪದಲ್ಲಿ ಕಾಣುತ್ತವೆ. ಇವು ಕಾಗದದ ಹಾಳೆಗಳಂತೆ ಒಂದರಮೇಲೊ೦ ದು ಕೂಡಿಸಿಟ್ಟ ಹಾಗೆ ಕಾಣಿಸುವದರಿಂದ ಇವುಗಳಿಗೆ ಪದರಪದರಗಳಾಗಿರುವ ಮೋಡಗಳೆಂಬ ಹೆಸರು ಸಲ್ಲುತ್ತದೆ. ಇವು ನೆಲದಿಂದ ಸುಮಾರು ೩೫೦೦ ಅಡಿಗಳ ಎತ್ತರದವರೆಗೆ ವ್ಯಾಪಿಸಿರುತ್ತವೆ. ಈ ನಾಲ್ಕು ಪ್ರಕಾರದ ಮೋಡಗಳಲ್ಲದೆ ಇವುಗಳಿಂದ ಸ್ವಲ್ಪ ಸ್ವಲ್ಪ ಭಿನ್ನ ಗಳಾದ ಮೋಡಗಳು ಆಕಾಶದಲ್ಲಿ ಕಂಡು ಬರುವುವು. ಹುಡುಗರು ಅಂತರಿಕ್ಷ ದಲ್ಲಿ ಕಾಣುವ ಮೋಡಗಳನ್ನು ಹಲವು ವೇಳೆಗಳಲ್ಲಿ ಸಾವಧಾನದಿಂದ ನೋಡಿ ಅವುಗಳ ಭೇದಗಳನ್ನು ತಿಳಿಯಬೇಕು. ಮೋಡಗಳ ಕ್ರಮವಾದ ನಿರೀಕ್ಷಣೆ ಯನ್ನು ನಡೆಸುವಾಗ ಒಂದೊಂದು ಸಾರೆಯೂ ಆಕಾಶದಲ್ಲಿ ಮೇಘಗಳು ಹೆಕಾ ಗಿ ಅಥವಾ ಕಡಿಮೆಯಾಗಿದ್ದು, ಇವು ಯಾವಪ್ರಕಾರದ್ದು ಎಂಬ ಅಂಶಗಳನ್ನು ಲಕ್ಷಿಸಿ ಮುಂದೆ ಸೂಚಿಸಿದಂತೆ ಬರೆದಿಡಬೇಕು,