ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೨೭ - ಪಟ್ಟ ನಂಬರ ೫. ಮೋಡಗಳ ನಿರೀಕ್ಷಣೆ ತಾರೀಖು ಮೇಘಗಳ ಪ್ರಮಾಣ ಮೇಘಗಳ ಪ್ರಕಾರ ೩ -೪-೯೧೭ ಹೆಚ್ಚು ಗು೦ಪುಗು೦ಪಾಗಿರುವ ಮೋಡಗಳು ೬-೪- ೯ ಕಡಿಮೆ - ಗರಿಯಂತಿರುವ ಮೋಡಗಳು ಅಂತರಿಕ್ಷದಲ್ಲಿ ಕಾಣುವ ಮೋಡಗಳು ಯಾವಾಗಲೂ ಒಂದೆ ಪ್ರಕಾರದಾ ಗಿರುವದಿಲ್ಲ ಮತ್ತು ಒಂದೇ ಸ್ಥಳದಲ್ಲಿ ಇರುವದಿಲ್ಲ. ಬೆಳಿಗ್ಗೆ ಸೂರ್ಯೋದಯದ ಕಾಲದಲ್ಲಿ ಕ್ಷಿತಿಜದಲ್ಲಿ ಪದರಪದರಗಳಾಗಿ ಕಂಡ ಬರುವ ಮೋಡಗಳು ಮಧ್ಯಾ ಹಕ್ಕೆ ಆಕಾಶದ ಮಧ್ಯಕ್ಕೆ ಬಂದು ಗುಂಪು ಗುಂಪಾಗಿ ಸೇರುವದನ್ನು ನಾವು ನೋ ಡಬಹುದು ಹೀಗೆ ಮೋಡಗಳ ಆಕಾರ ಪ್ರಕಾರಗಳೂ ಅವುಗಳ ಸ್ಥಳಗಳ ಆಗಾಗ್ಗೆ ವ್ಯತ್ಯಾಸವಾಗುವದಕ್ಕೆ ಕಾರಣವೇನೆಂದು ವಿಚಾರಮಾಡಿದರೆ, ಗಾಳಿಯು ಚಲನೆಯೇ ಮೋಡಗಳ ಸ್ಥಿತಿಗಳಲ್ಲಿ ಹೆಚ್ಚುಕಡಿಮೆಗಳನ್ನುಂಟುಮಾಡುತ್ತದೆಂದು ಕಂಡುಬರುವದು. ಗಾಳಿಯು ರಭಸದಿಂದ ಬೀಸುವ ವೇಳೆಗಳಲ್ಲಿ ಅಂತರಿಕ್ಷದಲ್ಲಿ ಮೋಡಗಳು ಬಹಳ ವೇಗವಾಗಿ ಸಂಚರಿಸುತ್ತಾ ಒಂದನ್ನೊಂದು ಅಪ್ಪಿಕೊಂಡು ಹೋಗುವಂತೆ ನನಗೆ ತೋರಿ ಬರುವವು, ಒಂದು ಮೋಡವು ಮತ್ತೊಂದು ಮೋ ಡದ ಹತ್ತರಕ್ಕೆ ಬಂದು ಅವೆರಡೂ ಕೂಡಿಕೊಂಡು ಒಂದಾಗಿ ಅವುಗಳಿಗೆ ಮೊದ ಲಿದ ಆಕಾರಗಳು ಹೋಗಿ ಬೇರೆ ಆಕಾರವು ಬರುವದನ್ನು ನಾವು ನೋಡಬಹುದು. ಮೋಡಗಳ ವಸ್ತುರಚನೆ ಮತ್ತು ಉತ್ಪತ್ತಿ ಕ್ರಮ:- ಅಂತರಿಕ ದಲ್ಲಿ ತೇಲಾಡುತ್ತ ಬಗೆಬಗೆಯಾದ ಆಕಾರಗಳುಳ್ಳ ಮೋಡಗಳು ಯಾವ ವಸ್ತು, ಗಳಿಂದ ಆಗಿರುತ್ತವೆ? ನೆಲದಿಂದ ಸ್ವಲ್ಪ ಎತ್ತರದಲ್ಲಿ ಕಾಣುವ ಕಪ್ಪು ಮೋಡ ಗಳಿಂದ ಮಳೆಯು ಸುರಿಯುವದರಿಂದ ಮೋಡಗಳಲ್ಲಿ ನೀರಿನ ಹನಿಗಳು ತುಂಬಿರು ತ್ಯವೆಂದು ಹೇಳಬಹುದು. ಮೋಡಗಳು ಯಾವಾಗಲೂ ಒಂದೇ ಪ್ರಕಾರದಿರುವ