ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- ೨೮ -

ದಿಲ್ಲವೆಂತಲೂ ಅವು ಆಗಾಗ್ಗೆ ಒಂದುರೂಪದಿಂದ ಮತ್ತೊಂದು ರೂಪಕ್ಕೆ ಬದಲಾ ಗುತ್ತಿರುತ್ತವೆಂತಲೂ ಹಿಂದೆ ಹೇಳಿರುತ್ತದೆ. ಒಂದು ಹೊತ್ತಿನಲ್ಲಿ ಕರೇ ಅಥವಾ ಬಿಳೇ ಬಣ್ಣದಿಂದ ಕಾಣುವ ಮೋಡವು ಸ್ವಲ್ಪು ಹೊತ್ತಾದ ಮೇಲೆ ಬೇರೇ ರೂಪವನ್ನು ಹೊಂದುವದರಿಂದ ಆಕಾಶದಲ್ಲಿ ಕಾಣುವ ಎಲ್ಲಾ ಪ್ರಕಾರದ ಮೋಡ ಗಳು ಒಂದೇ ವಸ್ತುವಿನ ರೂಪಾಂತರಗಳೇ ಹೊರತು ಪ್ರತ್ಯೇಕ ವಸ್ತುಗಳಲ್ಲವೆಂದು ಹೇಳುವದಕ್ಕೆ ಆಡ್ಡಿಯಿಲ್ಲ. ಇವೆಲ್ಲವೂ ನೀರಿನ ರೂಪಾಂತರಗಳೆಂದು ತಿಳಿಯಬಹು ದು, ಎತ್ತರವಾದ ಪ್ರದೇಶಗಳಲ್ಲಿ ಶೈತ್ಯವು ಹೆಚ್ಚಾಗಿರುವದರಿಂದ, ಅಲ್ಲಿ ಕಾಣುವ ಬಿಳೇ ಮೋಡಗಳಲ್ಲಿ ನೀರು ಹನಿಗಳ ರೂಪದಲ್ಲಿರುವದು ಸಾಧ್ಯವಲ್ಲ. ಆದ್ದರಿಂದ ನೀರಿನ ಅಣುಗಳು ಹಿಮದ ರೂಪಕ್ಕೆ ಬಂದು, ಬಿಳೇ ಕೂದಲುಗಳ ಅಥವಾ ತಗಡುಗಳ ಹಾಗೆ ಬೆಳ್ಳಗಾಗಿಯೂ ತೆಳುವಾಗಿಯೇ ತೇಲುತ್ತಿರುವುವು.

ಅಂತರಿಕ್ಷದಲ್ಲಿ ಮೋಡಗಳ ರೂಪದಲ್ಲಿ ಕಾಣಿಸುವ ನೀರು ಎಲ್ಲಿಂದ ಬರ ಇದೆ? ಅದಕ್ಕೆ ಈ ರೂಪಾಂತರವು ಹೇಗೆ ಉಂಟಾಗುತ್ತದೆ? ಈ ಎರಡೂ ವಿಷಯಗಳನ್ನು ತಿಳಿಯಲು ನಮಗೆ ಪ್ರತಿನಿತ್ಯವೂ ಅನುಭವಕ್ಕೆ ಬರುತ್ತಿರುವ ನೀರಿನ ಸಂಬಂಧವಾದ ಕೆಲವು ಸಂಗತಿಗಳನ್ನು ವಿಚಾರಮಾಡಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಬೆಂಕಿಯ ಮೇಲಿಟ್ಟು ಕಾಯಿಸಿದರೆ ಸ್ವಲ್ಪ ಹೊತ್ತಿನ ತರುವಾಯ ಆ ನೀರು ಉಗಿಯಾಗಿ ಹವೆಯಲ್ಲಿ ಸೇರಿ ಅದೃಶ್ಯವಾಗುವದು, ಈ ಪಾತ್ರೆಯನ್ನು ಬೆಂಕಿಯ ಮೇಲಿಡುವದಕ್ಕೆ ಬದಲಾಗಿ ಬಿಸಿಲಲ್ಲಿದ್ದರೂ ಅದೇ ರೀತಿಯಲ್ಲಿ ನೀರು ಹವೆಯಲ್ಲಿ ಸೇರಿಕೊಳ್ಳುವುದು, ಈ ಪಾತ್ರೆಯನ್ನು ನೆರಳಲ್ಲಿ ಟ್ಟರೂ ಅದರಲ್ಲಿರುವ ನೀರು ಸಾವಕಾಶವಾಗಿ ಕಡಿಮೆಯಾಗುತ್ತಾ ಬರುವದು. ಒದ್ದೆ ಬಟ್ಟೆಗಳನ್ನು ಹೊರಗೆ ಕಟ್ಟಿದ್ದರೆ ಅವುಗಳಲ್ಲಿರುವ ನೀರು ಉಗಿಯಾಗಿ ಅವು ಆರುವವು.

ಈ ಉದಾಹರಣೆಗಳೆಲ್ಲವೂ ನೀರು ಉಷದಿಂದ ದ್ರವರೂಪವನ್ನು ಬಿಟ್ಟು ಉಗಿಯ ರೂಪಕ್ಕೆ ಬರುತ್ತದೆಂಬುವದನ್ನು ತೋರಿಸುತ್ತವೆ. ಹೀಗೆ ಅಗೋಚರ ಸ್ಥಿತಿಯಲ್ಲಿರುವ ಉಗಿಯು ದೃಶ್ಯರೂಪಕ್ಕೆ ಬರುವಾಗ ಅದರಲ್ಲುಂಟಾಗುವ ವ್ಯತ್ಯಾಸಗಳನ್ನು ತಿಳಿಯಲು ನಮಗೆ ನಿತ್ಯವೂ ಕಾಣುವ ಮತ್ತೊಂದು ಸಂಗತಿಯನ್ನು ಲಕ್ಷಕ್ಕೆ ತಂದುಕೊಳ್ಳಬೇಕು. ಕುದಿಯುವ ನೀರು ತುಂಬಿರುವ ಒಂದು ಪಾತ್ರೆಯ ಮೇಲೆ ಮತ್ತೊಂದು ಪಾತ್ರೆಯನ್ನಾಗಲಿ ಅಥವಾ ಒಂದು ತಟ್ಟೆಯನ್ನಾಗಲಿ