ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- ೨೯ -

ಮುಚ್ಚಿಟ್ಟರೆ ತಣ್ಣಗಿರುವ ಪಾತ್ರೆಯ ಅಥವಾ ತಟ್ಟೆಯ ಅಡಿಯಲ್ಲಿ ನೀರಿನ ಹನಿಗಳು ಕೂಡಿಕೊಳ್ಳುವವು. ಒಂದು ಪಾತ್ರೆಯಲ್ಲಿ ನೀರು ಕುದಿಯುತ್ತಿರುವಾಗ ಒಂದು ಕಲ್ಲುಹಲಿಗೆಯನ್ನು (Slate ಸ್ಟೇಟ್) ತಂದು ಬಿಸಿಯಾದ ಹವೆಗೆ ಅಡ್ಡಾಗಿ ಹಿಡಿದರೆ ಕಲ್ಲುಹಲಿಗೆಯ ಮೇಲೆ ನೀರಿನ ಹನಿಗಳು ಹತ್ತಿಕೊಳ್ಳುತ್ತವೆ. ಈ ಉದಾಹರಣೆಗಳಿಂದ ಉಗಿಯು ಶೈತ್ಯದಿಂದ ವಾಯುರೂಪವನ್ನು ಬಿಟ್ಟು ದ್ರವರೂಪಕ್ಕೆ ಬರುವದೆಂದು ಸ್ಪಷ್ಟವಾಗುವದು. ದ್ರವರೂಪದಲ್ಲಿರುವ ನೀರಿಗೆ ಶೈತ್ಯ ವನ್ನು ಹೆಚ್ಚಾಗಿ ಒದಗಿಸಿದರೆ,ನೀರು ಘನರೂಪಕ್ಕೆ ಬಂದು ಹಿಮದ ಗಡ್ಡೆ (ಬರ್ಸ)ಯಾಗುವದು,ಅಂದರೆ ನೀರೆಂಬ ಒಂದು ವಸ್ತುವು ಶೀತೋಷ್ಣ ಪ್ರಮಾಣಗಳ ಹೆಚ್ಚು ಕಡಿಮೆಯಿಂದ ಘನ,ದ್ರವ,ವಾಯು ಎಂಬ ಮೂರು ಅವಸ್ಥೆಗಳನ್ನು ಹೊಂದುತ್ತದೆ.

ಮೇಲೆ ಹೇಳಿದ ನಿದರ್ಶನಗಳಲ್ಲಿ ತೋರಿಬರುವ ವ್ಯಾಪಾರಗಳೇ ಸೃಷ್ಟಿಯ ವಾತಾವರಣದಲ್ಲಿ ವಿಶೇಷವಾಗಿ ಸಾಗಿ ಮೋಡಗಳ ಉತ್ಪತ್ತಿಗೆ ಕಾರಣಗಳಾಗಿರುತ್ತವೆ. ಭೂಮಿಯ ಮೇಲಿರುವ ಸಮುದ್ರ,ನದಿ,ಸರೋವರ, ಕೆರೆ,ಮುಂತಾದ ಜಲಸ್ಥಾನಗಳಲ್ಲಿ ಸೂರ್ಯನ ಕಿರಣಗಳು ಬೀಳುವದರಿಂದ ಅವುಗಳೊಳಗಿನ ನೀರು ಉಷ್ಣದಿಂದ ಉಗಿಯಾಗಿ ಮೇಲಕ್ಕೇರಿ ಹವೆಯಲ್ಲಿ ಸೇರುತ್ತಿರು ಇದೆ. ಈ ವ್ಯಾಪಾರವು ಪ್ರತಿನಿತ್ಯವೂ ಸಾಗುವದರಿಂದ ವಾತಾವರಣದಲ್ಲಿ ಉಗಿಯು ಇದ್ದೇ ಇರು ಇದು ಇದು ನಮಗೆ ಕಾಣಿಸುವದಿಲ್ಲ. ಈ ಉಗಿಯು ಶೀತಲವಾದ ಗಾಳಿಯಿರುವ ಉನ್ನತ ಪ್ರದೇಶಗಳಿಗೆ ಹೋದಬಳಿಕ ಶೈತ್ಯದಿಂದ ತಂಪಾಗಿ ಮೊದಲಿನ ಸ್ಥಿತಿಯನ್ನು ಬಿಟ್ಟು ಅತಿ ಸೂಕ್ಷ್ಮವಾದ ನೀರಿನ ಅಣುಗಳ ರೂಪಕ್ಕೆ ಬಂದು ಹವೆಯಲ್ಲಿ ತೇಲಾಡುವದು. ಈ ನೀರಿನ ಅಣುಗಳ ಸಮೂಹಗಳೇ ಮೋಡಗಳೆನ್ನಿಸಿಕೊಳ್ಳುವವು. ಬಹಳ ಎತ್ತರದಲ್ಲಿರುವ ಬಿಳೇ ಮೋಡಗಳಲ್ಲಿ ನೀರು ಶೈತ್ಯದಿಂದ ಘನರೂಪಕ್ಕೆ ಬಂದು ಹಿಮದ ತುಂಡುಗಳಾಕಾರದಲ್ಲಿರುವದು.