ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೩೦ - ಆರನೇ ಅಧ್ಯಾಯ. ಮಳೆ ಸೂಚನೆ:- ಈ ವಿಷಯವನ್ನು ಮಳೆಗಾಲದಲ್ಲಿಟ್ಟು ಕೊಳ್ಳಬೇಕು ಆಕಾಶದಲ್ಲಿ ಮಳೆಯ ಸೂಚನೆಗಳು ಕಂಡು ಬಂದ ಕೂಡಲೆ ಹುಡುಗರು ಶಾಲೆ ಯ ಹೊರಗೆ ಬ೦ದು ಅ೦ ತರಿಕ್ಷದಲ್ಲಿ ಚಾಣುವ ವ್ಯತ್ಯಾಸಗಳನ್ನು ಲಕ್ಷಿಸಬೇಕು. ಮಳೆ ಬರುವದಕ್ಕೆ ಸ್ವಲ್ಪ ಹೊತ್ತು ಮೊದಲು ಆ 3 ತರಿಕ ವು ಹೇಗಿರುತ್ತದೆ, ಮಳೆ ಸುರಿಯುವಾಗ ಹೇಗೆ ಕಾಣುತ್ತದೆ, ಮಳೆಯು ಎಷ್ಟು ಎಕ್ಸ್ ರದಿಂದ ಬೀಳುವಂತೆ ಕಾಣುತ್ತದೆ, ಮಳೆಯು ನಿರಂತರವಾಗಿ ಸುರಿಯುವದೋ ಅಥವಾ ಬಿಟ್ಟು ಬಿಟ್ಟು ಸುರಿಯುವ ಮಳೆಯಾದ ನ೦ತರ ನೆಲದ ಸ್ಥಿತಿಯಲ್ಲಿ ಯಾವ ಹೆಚ್ಚು ಕಡಿಮೆಗಳಾಗು ಶ್ರನೆ, ಇವೇ ಮೊದಲಾದ ವಿಷಯಗಳನ್ನು ಹುಡುಗರು ನಿರೀಕ್ಷಿಸಬೇಕು.] ಹಿಂದಿನ ಅಧ್ಯಾಯದಿಂದ ಉಗಿಯು ಅಂತರಿಕ್ಷದಲ್ಲಿ ಅಗೋಚರ ಸ್ಥಿತಿಯಲ್ಲಿ ದ್ದು ತಂಪು ತಗಲಿದಾಗ ಮೋಡ ರೂಪಕ್ಕೆ ಬಂದು ನನಗೆ ಗೋಚರವಾಗುತ್ತ ದೆಂದು ತಿಳಿದೆವು. ಈ ತಂಪಾಗುವ ಕಾರ್ಯವು (ಘನೀಭವನ ವ್ಯಾಪಾರವು) ಮತ್ತಷ್ಟೂ ಹೆಚ್ಚಾದರೆ ಮೋಡಗಳಲ್ಲಿರುವ ಸಣ್ಣ ಸಣ್ಣ ನೀರಿನ ಕಣಗಳು ಒಟ್ಟು ಕೂಡಿ ದೊಡ್ಡ ದೊಡ್ಡ ಹನಿಗಳಾಗಿ ನೆಲದ ಮೇಲೆ ಬೀಳುವವು. ಹೀಗೆ ಮೋಡ ಗಳಿಂದ ನೀರಿನ ಹನಿಗಳು ಸುರಿಯುವದನ್ನೇ ನಾವು ಮಳೆಯೆಂದು ಕರೆಯುತ್ತೇವೆ. ಅಂದರೆ ಹವೆಯಲ್ಲಿ ಸೇರಿಕೊಂಡ ಉಗಿಯ ಘನೀಭವನದ ಎರಡನೇ ರೂಪಾಂತ ದವೇ ಮಳೆಯೆಂದು ಹೇಳಬಹುದು. ಮಳೆ ಬೀಳುವದಕ್ಕೆ ಮೊದಲು ಆಕಾಶದಲ್ಲಿ ಯಾವ ಯಾವ ಹೆಚ್ಚು ಕಡಿಮೆಗಳುಂಟಾಗುತ್ತವೆ ಎಂಬುದನ್ನು ಹುಡುಗರು ನಿರೀಕ್ಷಿಸಬೇಕು. ನಿರ್ಮಲವಾಗಿರುವ ಆಕಾಶದಲ್ಲಿ ಸ್ವಲ್ಪ ಸ್ವಲ್ಪವಾಗಿ ಮೋಡ ಗಳು ಕೂಡಿಕೊಂಡು ಅಂತರಿಕ್ಷದಲ್ಲಿರುವ ವಸ್ತುಗಳನ್ನು ಮರೆಯಿಸುವದನ್ನು ಅವರು ಲಕ್ಷಿಸಬೇಕು. ಮಳೆಯು ಸುರಿಯುವುದಕ್ಕೆ ಪ್ರಾರಂಭಿಸುವಾಗ ಆಕಾಶ ದಲ್ಲಿ ಕಪ್ಪು ಮೋಡಗಳು ಬಂದು ಕೂಡುವದನ್ನು ಅವರು ನೋಡಬೇಕು. ಅಂಥ ಮೋಡಗಳಿಂದಲೇ ಮಳೆಯು ಬರುತ್ತದೆ, ಈ ಮೋಡಗಳು ಯಾವ ದಿಕ್ಕಿನಿಂದ ಬಂದವು? ಯಾವ ಯಾವ ಋತುವಿನಲ್ಲಿ ಇವು ಯಾವ ಯಾವ ದಿಕ್ಕಿನಿಂದ ಬರು ತನೆ? ಈ ವಿಷಯಗಳನ್ನು ಅವರು ವಿಚಾರ ಮಾಡಬೇಕು.