ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
- ೩೧ -

ಮಳೆ ಬೀಳುವದಕ್ಕೆ ಆರಂಭಿ ಸಿದನಂತರ ಅದು ಬೀಳುವ ಕ್ರಮವನ್ನು ಹುಡುಗರು ನಿರೀಕ್ಷಿಸಬೇಕು, ಅದು ಪ್ರವಾಹವಾಗಿ ಸುರಿಯದೆ ಸಣ್ಣ ಸಣ್ಣ ಹನಿಗಳ ರೂಪದಿಂದ ನೆಲದ ಮೇಲೆ ಬೀಳುವದು, ನೀರು ತುಂಬಿರುವ ಒಂದು ಪಾತ್ರೆಯಲ್ಲಿ ಒಂದು ಕೋಲನ್ನು ಅದ್ದಿ ಹೊರಗೆ ತೆಗೆದರೆ, ಅದರ ತುದಿಯಿಂದ ನೀರಿನ ಬಿಂದುಗಳು ಕೆಳಗೆ ಬೀಳುವದನ್ನು ತೋರಿಸಬಹುದು. ಈ ಬಿಂದುಗಳು ದುಂಡಾಗಿರುತ್ತವೆ. ಮಳೆಯ ಹನಿಗಳು ಯಾವಾಗಲೂ ದುಂಡಾಗಿರುತ್ತವೆ. ಈ ಹನಿಗಳನ್ನು ಹಿಡಿದಿರುವ ಮೇಘಗಳು ನೆಲದಿಂದ ಎಷ್ಟು ಎತ್ತರದಲ್ಲಿರುವದನ್ನು ಹುಡುಗರು ನೋಡಬೇಕು. ಮೇಘಗಳು ಭೂಮಿಗೆ ಸಮೀಪವಾಗಿದ್ದರೆ ಮಳೆಯ ಹನಿಗಳು ಸಣ್ಣವಾಗಿರುತ್ತವೆ. ಈ ಹನಿಗಳು ಬಹಳ ಎತ್ತರದಿಂದ ಬೀಳುತ್ತಿದ್ದರೆ ಅವು ಪ್ರಮಾಣದಲ್ಲಿ ದೊಡ್ಡವಾಗಿರುತ್ತವೆ. ಮಳೆಯ ಹನಿಗಳು ಆರಂಭದಲ್ಲಿ ನೆಲದ ಮೇಲೆ ಬೀಳುವಾಗ ಅವು ಮಾಡುವ ಗುರ್ತುಗಳನ್ನು ಹುಡುಗರು ನೋಡಬೇಕು. ಒಂದೊಂದು ವೇಳೆಯಲ್ಲಿ ಅಂತರಿಕ್ಷದಲ್ಲಿ ಶೈತ್ಯವು ಹೆಚ್ಚಾಗಿರುವದರಿಂದ ನೀರಿನ ಹನಿಗಳು ಮೇಘಗಳಲ್ಲಿರುವಾಗಲೇ ತಂಪಾಗಿ ಅಥವಾ ಬೀಳುವಾಗ ತಂಪಾಗಿ ಘನರೂಪಕ್ಕೆ ಬಂದು ಸಣ್ಣ ಸಣ್ಣ ಕಲ್ಲುಗಳಾಗಿ ಕಂಡು ಬಂದು ಆನೆಕಲ್ಲು (ಆಣೆ ಕಲ್ಲು) ಗಳೆಂದು ಕರೆಯಲ್ಪಡುತ್ತವೆ.

ಮಳೆಯು ಯಾವಾಗಲೂ ಒಂದೇ ಪ್ರಕಾರವಾಗಿ ಬೀಳುವದಿಲ್ಲ. ಒಂದು ದಿನ ಮಳೆಯು ಸ್ವಲ್ಪ ಹೊತ್ತಿನಲ್ಲೇ ಬಹಳ ಹೆಚಾಗಿ ಬಿದ್ದು ಆಕಶವು ನಿರ್ಮಲ ವಾಗುವದು, ಒಂದು ದಿನ ಮಳೆಯು ಸ್ವಲ್ಪ ಸ್ವಲ್ಪವಾಗಿ ಬೀಳುತ್ತಾ ಆಕಾಶವು ಯಾವಾಗಲೂ ಮೇಘಗಳುಳ್ಳದ್ದಾಗಿರುವುದುಂಟು. ಒಂದು ಋತುವಿನಲ್ಲಿ ಮಳೆ ಯು ಆಕಸ್ಮಿಕವಾಗಿ ಅಂದರೆ ಯಾವದಾದರೂ ಒಂದು ದಿನ ಮಾತ್ರ ಬೀಳುತದೆ. ಒಂದು ಋತುವಿನಲ್ಲಿ ಅನೇಕ ದಿನಗಳು ಅಥವಾ ೨,೩ ತಿಂಗಳವರೆಗೂ ಬೀಳುವದರಿಂದ ಆ ಋತುವನ್ನು ವರ್ಷ ಋತು (ಮಳೆಗಾಲ)ಎಂದು ಕರೆಯುತ್ತೇವೆ.

ಮಳೆಯು ಸೃಷ್ಟಿಯ ಎಲ್ಲಾ ಭಾಗಗಳಲ್ಲಿ ಸಮನಾಗಿ ಆಗುವದಿಲ್ಲ. ಕೆಲವು ಪ್ರದೇಶಗಳಲ್ಲಿ ಮಳೆಯು ಬಹಳ ಹೆಚ್ಚಾಗಿ ಆಗುವದರಿಂದ ಅವು ಬಹಳ ತೇವವಾಗಿ ರುತ್ತವೆ. ಕೆಲವು ಪ್ರದೇಶಗಳಲ್ಲಿ ಮಳೆಯೇ ಬೀಳದಿರುವದರಿಂದ ಅಥವಾ ಬಹಳ ಸ್ವಲ್ಪವಾಗಿ ಬೀಳುವದರಿಂದ ಅವು ರುಕ್ಪ ಪ್ರದೇಶಗಳೆಂದುಕರೆಯಲ್ಪಡುತ್ತದೆ. ಒಂದು