ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣವನ್ನು ಗೊತ್ತು ಮಾಡುವ ಕ್ರಮವನ್ನು ಹುಡುಗರು ಅವಶ್ಯವಾಗಿ ತಿಳಿಯಬೇಕು. ಮಳೆಯನ್ನು ಅಳೆಯುವದಕ್ಕೆ ಬೇಕಾ ದ ಸಾಧನವನ್ನೂ ನಾವು ಸುಲಭವಾಗಿ ಸಿದ್ಧ ಮಾಡಬಹುದು. ಇದಕ್ಕೆ ಅವ. ಶ್ಯವಾದ ಉಪಕರಣಗಳು ಯಾವವೆಂದರೆ:- (೧) ಅಕ್ಕಿ, ಜೋಳ ಮೊದಲಾದ ಧಾನ್ಯಗಳನ್ನು ಅಳೆಯುವದಕ್ಕೆ ಉಪಯೋಗಿಸುವ ಸೇರಿನ ಹಾಗೆ ಆಕಾರದಲ್ಲಿರುವ ಒಂದು ಲೋಹದ ಪಾತ್ರೆ; ಇದರ ವ್ಯಾಸವು ೫ ಅಂಗುಲ [ ಇಂ ಚು ) ವಿರಬೇಕು; ಇದರ ಎತ್ತರವು ಒಂದು ಅಡಿ ಇರಬಹುದು. (೨) ಬಾಯಿ ಯ ಹತ್ತರ ಇಷ್ಟೆ ವ್ಯಾಸವಿರುವ ಒಂದು ಹುಲ್ಲೊಳವೆ ( ಲಾಳಿಕೆ ). ಮೇಲೆ ಹೇಳಿ ದ ಪಾತ್ರೆಯನ್ನು ಹುಯೊಳವೆಯಿಂದ ಮುಚ್ಚಿ ಒಂದು ಬೈಲಿನಲ್ಲಿ ಮರಗಿಡಗಳಿಲ್ಲದ ಸ್ಥಳದಲ್ಲಿ ನೆಲದ ಮೇಲೆ ಇಡಬೇಕು. ಹುಲ್ಲೋಳವಿಯ ಬಾಯಿಯಲ್ಲಿ ಬೀಳುವ ಮಳೆಯ ಹನಿಗಳು ಪಾತ್ರೆಯಲ್ಲಿ ಕೂಡಿಕೊಳ್ಳುವುವು. ಪಾತ್ರೆಯಲ್ಲಿ ಬೀಳುವ ನೀರು ಉಗಿಯಾಗಿ ಹೋಗದಂತೆ ಏರ್ಪಡಿಸಬೇಕು. ಹುಯ್ಯೋಳವಿಯ ಬಾಯಿಯ ವ್ಯಾಸವೂ ಪಾತ್ರೆಯ ವ್ಯಾಸವೂ ಒಂದೇ ಇರುವದರಿಂದ ಪಾತ್ರೆಯಲ್ಲಿ ನೀರಿನ ಎತ್ತರವನ್ನು ಅಳೆದು ಹುಯ್ಯೋಳ ವಿಯಲ್ಲಿ ಎಷ್ಟು ಮಳೆಯಾಗಿರುವದನ್ನು ಗೊತ್ತು ಮಾಡಬಹುದು. ಮಳೆಯನ್ನು ಅಂಗುಲ (ಇಂಚು) ಪ್ರಮಾಣದಿಂದ ಅಳೆಯುವದು ರೂಢಿಯಾಗಿರುತ್ತದೆ. ಒಂದು ಪೂಟು ಕಟ್ಟಿಗೆಯನ್ನು ( Foot-trule ಫುಟುರೂಲ್ ) ಈ ಪಾತ್ರೆಯ ತಳದ ಮೇಲೆ ಲಂಬವಾಗಿ ನಿಲ್ಲಿಸಿ ಅದಕ್ಕೆ ಹತ್ತುವ ನೀರಿನಿಂದ ಮಳೆಯ ಪ್ರಮಾಣವನ್ನು ಗೊತ್ತು ಮಾಡಬಹುದು, ಮಳೆಯು ಬಹಳ ಸ್ವಲ್ಪವಾಗಿ ಈ ಪಾತ್ರೆಯಲ್ಲಿ ಕೂಡಿ ಕೊಳ್ಳುವ ನೀರಿನ ಎತ್ತರವನ್ನು ಪೂಟು ಕಟ್ಟಿಗೆಯಿಂದ ತಿಳಿಯುವದಾಗದಿದ್ದರೆ, ಅಂಥ ನೀರಿನ ಅಂಶವನ್ನು ಗೊತ್ತು ಮಾಡುವದಕ್ಕೆ ಬೇರೇ ಅಳೆಯುವ ಸಾಧನವು ಸಿಕ್ಕುವುದು, ಒಂದೊಂದುಸಾರೆ ಮಳೆಯಾದಾಗಲೂ ಅದರ ಪ್ರಮಾಣವನ್ನು ಗೊತ್ತು ಮಾಡಿ ಬರೆದಿಡಬೇಕು. ಹೀಗೆ ಆಯಾ ದಿನಗಳಲ್ಲಿ ಬೀಳುವ ಮಳೆಯ ಪ್ರಮಾಣವನ್ನು ಒಟ್ಟುಗೂಡಿಸಿ ಆಯಾ ತಿಂಗಳಲ್ಲಿ ಎಷ್ಟು ಮಳೆಯಾಯಿತು, ಒಂದು ವರ್ಷದಲ್ಲಿ ಎಷ್ಟು ಮಳೆಯಾಯಿತು ಎಂಬ ಸಂಗತಿಗಳನ್ನು ಗೊತ್ತು ಮಾಡ ಬೇಕು.