–೩೬-
ಮಳೆಯ ನೀರಿನ ಕಾರ್ಯವು
ಒಂದು ದೊಡ್ಡ ಮಳೆಯಾದ ಕೂಡಲೆ ಹೊರಗೆ ತಿರುಗಾಡಿದರೆ ದಾರಿಗಳಲ್ಲಿಯೂ ಬೈಲುಗಳಲ್ಲಿಯೂ ಅನೇಕ ಸಣ್ಣ ಸಣ್ಣ ಪ್ರವಾಹಗಳನ್ನು ನೋಡುತ್ತೇವೆ. ಈ ಪ್ರವಾಹಗಳ ನೀರು ಶುದ್ಧವಾಗಿರದೆ ಮಣ್ಣಿನಿಂದ ಕೂಡಿರುತ್ತದೆ. ಇದೇ ರೀತಿಯಲ್ಲಿ ಮಳೆಗಾಲದಲ್ಲಿ ದೊಡ್ಡ ನದಿಗಳ ಪ್ರವಾಹಗಳ ನೀರು ಸ್ವಚ್ಛವಾಗಿರದೆ ಮಣ್ಣಿನ ಬಣ್ಣದ್ದಾಗಿರುತ್ತದೆ. ಈ ಪ್ರವಾಹಗಳಲ್ಲಿ ಮಣ್ಣು ಎಲ್ಲಿಂದ ಬಂದಿರುತ್ತದೆ?
ಒಂದು ಪ್ರದೇಶದಲ್ಲಿ ಮಳೆಯ ಹನಿಗಳು ಬೀಳಲಾರಂಭಿಸಿದರೆ ಒಂದೊಂದು ಹನಿಯು ಬಿದ್ದಲ್ಲಿ ಮಣ್ಣಿನಲ್ಲಿ ಸಣ್ಣ ಸಣ್ಣ ತಗ್ಗುಗಳಾಗುತ್ತ ಹೋಗುತ್ತವೆ. ಅಂದರೆ ಮಳೆಯ ಹನಿಗಳಲ್ಲಿ ಮಣ್ಣಿನ ಕಣಗಳನ್ನು ಒಂದು ಕಡೆಗೆ ದೂಡಿ ತಗ್ಗು ಮಾಡುವ ಸಾಮರ್ಥ್ಯವಿರುತ್ತದೆ. ಮಳೆಯ ನೀರು ತಗ್ಗಾದ ಸ್ಥಳಗಳಿಗೆ ಹರಿಯುವಾಗ ಅಲ್ಲಲ್ಲಿರುವ ಮಣ್ಣನ್ನು ಮತ್ತು ಸಣ್ಣ ಕಲ್ಲುಗಳನ್ನು ಕೊಚ್ಚಿಕೊಂಡು ಹೋಗುತ್ತದೆ, ಮಳೆಯ ನೀರಿನ ಈ ಕಾರ್ಯವನ್ನು ಯಾಂತ್ರಿಕ ಕ್ರಿಯೆಯೆಂದು ಕರೆಯುತ್ತಾರೆ. ಮಳೆಯನೀರಿಗೆ ತಾಗುವ ಬಂಡೆಗಳನ್ನು ಈ ಕ್ರಿಯೆಯಿಂದಲೇ ಆ ನೀರು ಕ್ರಮ ಕ್ರಮವಾಗಿ ಸವಿಸುತ್ತ ಹೋಗುತ್ತದೆ. ಕೆಲವು ಬಂಡೆಗಳ ಮೇಲೆ ನೀರು ಹರಿಯುವಾಗ ಅವುಗಳ ಕಣಗಳನ್ನು ಕೂಡಿಸುವ ಅಂಟನ್ನು ಸಡಿಲು ಮಾಡು ಇದೆ. ಆದ್ದರಿಂದ ಆ ಬಂಡೆಗಳು ಸ್ವಲ್ಪ ಸ್ವಲ್ಪವಾಗಿ ಒಡೆದು ಪುಡಿಯಾಗಿ ಮಣ್ಣು ಅಥವಾ ಉಸುಬು ಆಗುತ್ತವೆ. ಈ ಪ್ರಕಾರ ಸೃಷ್ಟಿಯಲ್ಲಿರುವ ದೊಡ್ಡ ದೊಡ್ಡ ಬಂಡೆಗಳು ಮಳೆ ನೀರಿನ ಬಡೆತದಿಂದ ಕ್ರಮ ಕ್ರಮವಾಗಿ ಸವೆಯುತ್ತವೆ.
ಮಳೆಯ ನೀರು ಮತ್ತೊಂದು ರೀತಿಯಲ್ಲಿ ಶಿಲೆಗಳನ್ನು ಸವಿಸುತ್ತದೆ. ಮಳೆಯ ನೀರು ತಣಿದ ಉಗಿಯಾಗಿರುವದರಿಂದ ಶುದ್ಧವಾದ ನೀರಾಗಿರುತ್ತದೆ. ಆದರೆ ಅದು. ಹವೆಯಲ್ಲಿಳಿದು ಬರುವಾಗ ಸ್ವಲ್ಪ ಹವೆಯನ್ನು ಹೀರಿಕೊಳ್ಳುವದರಿಂದ ಹವೆಯಲ್ಲಿರುವ ಆಮ್ಲಜನಕ (ಆಕ್ಸಿಜನು), ಅಂಗಾರಾಮ್ಲ (ಕಾರ್ಬಾನಿಕ ಆಸಿಡಗ್ಯಾಸ) ಮೊದಲಾದ ಪದಾರ್ಥಗಳು ಆ ನೀರಿನಲ್ಲಿ ಬೆರೆತುಕೊಳ್ಳುತ್ತವೆ, ಮಳೆಯ ನೀರು ನೆಲದ ಮೇಲೆ ಬಿದ್ದ ಬಳಿಕ ಮಣ್ಣಿನಲ್ಲಿರುವ ಪದಾರ್ಥಗಳು ಅದರಲ್ಲಿ ಕೂಡುತ್ತವೆ ಮಣ್ಣಿನಲ್ಲಿ ಸಸ್ಯಗಳ ಬೇರುಗಳ ಮತ್ತು ಅನೇಕ ಸಣ್ಣ ಪ್ರಾಣಿಗಳ ಕೊಳೆಯುವ ರಾಗಗಳು ಸೇರಿರುವದರಿಂದ ಅದರಲ್ಲಿ ಅಂಗಾರಾಮ್ಮ ವಾಯುವಿರುತ್ತದೆ. ಈ ಪ್ರಕಾರ ಹನೆಯಿಂದಲೂ ಮಣ್ಣಿನಿಂದಲೂ ಅಂಗಾರಾಮ್ಮ ವಾಯುವನ್ನು ಸಂಗ್ರಹಿಸಿ