ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

– ೩೭ -

ಕೊಳ್ಳುವ ಮಳೆಯ ನೀರು ನೆಲದ ಮೇಲೆ ಹರಿಯುವಾಗ ಶಿಲೆಯನ್ನು ಕೊರೆಯಲಾ ರಂಭಿಸುತ್ತದೆ. - ಮಳೆಯ ನೀರು ನೆಲದೊಳಗೆ ಇಳಿದ ಮೇಲೆ ಅದರಲ್ಲಿ ದೋಷವು ಮತ್ತಷ್ಟು ಹೆಚ್ಚುವದರಿಂದ ಅದು ಬಂಡೆಗಳನ್ನು ಪುಡಿಮಾಡುತ್ತದೆ. ಮಳೆಯ ನೀರಿನ ಈ ಕೆಲಸಕ್ಕೆ ರಸಾಯನವ್ಯಾಪಾರ ಅಥವಾ ರಾಸಾಯನಿಕ ಕ್ರಿಯೆಯೆಂಬ ಹೆಸರು ಬಂದಿರುತ್ತದೆ.


ಏಳನೇ ಅಧ್ಯಾಯ.

ಹವೆ, ಗಾಳಿ,

[ಶಿಕ್ಷಕರಿಗೆ ಸೂಚನೆ:- ಪ್ರಕೃತಿ ವಿಮರ್ಶೆಗೆ ಸೇರಿದ ವಿಷಯಗಳಲ್ಲಿ ಹನೆಯ ಸ್ಥಿತಿಗತಿಗೆ ಇನ್ನೂ ಆವುಗಳಲ್ಲಿ ಕಾಣುವ ವ್ಯತ್ಯಾಸಗಳನ್ನೂ ನಿರೀಕ್ಷಿಸುವದು ಹೆಚ್ಚು ಮಹತ್ವವುಳ್ಳದ್ದೆಂದು ಹೇಳಬೇಕು. ದಿನ ದಿನಕ್ಕೂ ಹವಾಮಾನಗಳಲ್ಲಿ ಗೋಚರವಾಗುವ ಹೆಚ ಕಡಿಮೆಗಳನ್ನು ಮಕ್ಕ ಇತಿ ನಿರೀಕ್ಷಿಸಿ ಅವುಗಳ ವಿಚಾರದಿ೦ದ ಒ೦ದೊ೦ದು ಋತುವಿನ ಹವೆಯ ಸ್ಥಿತಿಗೂ ಸ ರೈ ಮತ್ತು ಇತರ ಪ್ರಾಕೃತಿಕ ವಿಷಯಗಳ ಪರಿಸ್ಥಿತಿಗೂ ಇರುವ ಸಂಬಂಧವನ್ನು ತಿಳಿಯಬೇಕು.]

ಪೃಥ್ವಿಯ ಎಲ್ಲಾ ಕಡೆಗಳಲ್ಲಿ ಅಂತರಿಕ್ಷವು ವ್ಯಾಪಿಸಿದ್ದು ಅದು ಸ್ವಚ್ಛವಾದ ನೀಲವರ್ಣವುಳ್ಳದ್ದಾಗಿರುವದೆಂದು ತಿಳಿದೆವು. ನಾವು ಯಾವ ಪ್ರದೇಶಕ್ಕೆ ಹೋದರೂ ಅಂತರಿಕ್ಷದ ಹೊರತು ಬೇರೆ ಯಾವ ಪದಾರ್ಥವು ಗೋಚರವಾಗದೇ ಇರುವದರಿಂದ ನಮ್ಮ ಸುತ್ತಲು ಬರೇ ಆಕಾಶವಿರುವದೆಂದು ನಾವು ತಿಳಿಯುವದು ಸ್ವಾಭಾವಿಕ ಸ್ವಲ್ಪ ವಿಚಾರಮಾಡಿದರೆ ಪ್ರಥ್ವಿಯ ಸುತ್ತಲು ಅದೃಶ್ಯವಾದ ಮತ್ತು ವಾಸನೆಯಿಲ್ಲದ ಒಂದು ಪದಾರ್ಥವಿದ್ದು, ಮೀನುಗಳು ನೀರಿನಲ್ಲಿ ಸಂಚರಿಸುವಂತೆ ನಾವು ಅದರಲ್ಲಿ ಸಂಚರಿಸುತ್ತಿರುವೆನೆಂದು ವ್ಯಕ್ತವಾಗುವದು, ಈ ಪದಾರ್ಥವನ್ನು ನಾವು ಹವೆಯೆಂದು ಕರೆಯುತ್ತೇವೆ. ಇದು ಭೂಮಿಯ ಮೇಲೆ ಎಲ್ಲಾ ಕಡೆಗಳಲ್ಲಿ ಪ್ರಸರಿಸಿರುತ್ತದೆ. ನಾವು ಬರಿದಾಗಿರುವವೆಂದು ತಿಳಿದಿರುವ ಕೋಣೆಗಳಲ್ಲಿಯೂ ಲೋಹದ ಅಥವಾ ಮಣ್ಣಿನ ಪಾತ್ರೆಗಳಲ್ಲಿಯ ಹವೆಯು ತುಂಬಿಕೊಂಡಿರುತ್ತದೆ. ಒಂದು ಪಾತ್ರೆಯಲ್ಲಿ ನೀರನ್ನು ತುಂಬಿ ಅದರಲ್ಲಿ ಒಂದು ಕಾಜಿನ ಸೀಸೆ ಅಥವಾ ಬಟ್ಟಲನ್ನು ತಲೆಕೆಳಗಾಗಿಟ್ಟು, ನೀರಿನಲ್ಲಿ ಮುಳುಗಿಸಿದರೆ ಅದರಲ್ಲಿ ನೀರು ಏರುವದಿಲ್ಲ. ಸೀಸೆಯನ್ನು ಅಥವಾ ಬಟ್ಟಲನ್ನು ಸ್ವಲ್ಪ ಓರೆಮಾಡಿದರೆ, ನೀರು ಅದರಲ್ಲಿ ಪ್ರವೇಶಿಸಿ ನೀರೊಳಗಿಂದ ಮೇಲಕ್ಕೆ ಗುಳ್ಳೆಗಳು ಬರುವದನ್ನು ನೋಡಬಹುದು. ಈ ಗುಳ್ಳೆಗಳು ಬರುವದಕ್ಕೆ ಹವೆಯೇ ಕಾರಣವು. ನಾವು ಉಸುರಾಡಿಸುವಾಗ ಈ