ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೪೧-

ಧಾರಣ ರೀತಿಯಲ್ಲಿ ತಿಳಿಯಬಹುದು.* ಒಂದು ವೇಳೆಯಲ್ಲಿ ಗಾಳಿಯು ಬಹಳ ನಿದಾನವಾಗಿ (ಸೌಮ್ಯದಿಂದ) ಬೀಸುವದು.ಇದನ್ನು ಮಂದಮಾರುತವೆಂದು ಹೇಳಬಹುದು. ಒಂದು ಕಾಲದಲ್ಲಿ ಗಾಳಿಯು ಹೆಚ್ಚಿನ ವೇಗದಿಂದ ಬೀಸುತ್ತಿದ್ದರೂ ನನಗೆ ಹಿತವಾಗಿರುವಂತೆ ತೋರುತ್ತಿರುವದು. ಅದರ ವೇಗವು ಬಹಳ ಹೆಚ್ಚಾದರೆ ಮರ ಗಿಡಗಳು ಅಲ್ಲಾಡುವವ. ನಮಗೂ ಸಂಚರಿಸಲಿಕ್ಕತೊಂದ ರೆಯಾಗುವದು. ಇಂಥ ಗಾಳಿಯನ್ನು ಬಿರುಗಾಳಿಯೆಂದು ಕರೆಯಬಹುದು. ಬಿರುಗಾಳಿ ವೇಗವು ಮತ್ತಷ್ಟು ಹೆಚ್ಚಿದರೆ,ಮರ ಗಿಡಗಳು ಬೇರು ಸಹಿತ ಕೀಳಲ್ಪಟ್ಟು ನೆಲದ ಮೇಲೆ ಬೀಳುವವು. ಈ ಗಾಳಿಯನ್ನು ಚಂಡಮಾರುತವೆಂದು ಹೇಳುವದಕ್ಕೆ ಅಡಿಯಿಲ್ಲ. ಒಂದೊಂದು ಸಾರೆ ಗಾಳಿಯು ಚಕ್ರಾಕಾರವಾಗಿ ಬೀಸುವದಷ್ಟೆ. ಇದನ್ನು ಸುಳಿಗಾಳಿ (ಸುಂಟರಗಾಳಿ) ಯೆಂದು ಕರೆಯುವ ರೂಢಿಯಿರುತ್ತದೆ.

ಹುಡುಗರು ಗಾಳಿಯ ವೇಗವನ್ನು ಗೊತ್ತು ಮಾಡಿದನಂತರ ಮೇಲೆ ತಿಳಿಸಿರುವಂತೆ ಗಾಳಿಯು ಸೌಮ್ಯ ಅಥವಾ ಮಂದಮಾರುತ ಇಲ್ಲವೆ ಬಿರುಗಾಳಿ ಎಂಬುವದನ್ನು ಬರೆದಿಡಬೇಕು.

ಹವೆಯ ನಿರೀಕ್ಷಣೆಯನ್ನು ಕ್ರಮವಾಗಿ ಮಾಡುತ್ತಿರುವಾಗ ಗಾಳಿಯ ಸಂಬಂಧವಾದ ವಿಷಯಗಳನ್ನು ಕೆಳಗೆ ಕಾಣಿಸುವ ಪಟ್ಟಿಯಲ್ಲಿರುವಂತೆ ಬರೆಯಬೇಕು ಈ ನಿರೀಕ್ಷಣೆಯನ್ನು ಮಾಡುವ ಕಾಲಕ್ಕೆ ಸರಿಯಾಗಿ ಹುಡುಗರಿಗೆ ಮೇಘಗಳ ವಿಚಾರವು ತಿಳಿದಿದ್ದರೆ ಆ ವಿಷಯವನ್ನು ಸಹ ಕೂಡಿಸಬಹುದು.


*ಗಾಳಿಯ ವೇಗವನ್ನು ಸೂಚಿಸುವ ಯಂತ್ರದ ಸಹಾಯದಿ೦ದ ಅದರ ವೇಗನ್ನು ಸರಿಯಾಗಿ ತಿಳಿಯಬಹುದು. ಗಾಳಿಯು ಶಾಂತವಾಗಿರುವಾಗ ಘಂಟೆಗೆ ಸುಮಾರು ೨ ಮೈಲುಗಳ ವೇಗದಿಂದ ಚಲಿಸುವದು. ಮಂದಮಾರುತದ ವೇಗವು ೫ ರಿ೦ದ ಆ ಮೈಲುಗಳ ವರೆಗೆ ಇರುತ್ತದೆ. ಸ್ವಲ್ಪ ಹೆಚ್ಚಿನ ವೇಗವುಳ್ಳ ಗಾಳಿಗೆ ಘ೦ಟೆಗೆ ಸುಮಾರು ೧೦ ರಿಂದ ೧೮ ಮೈಲುಗಳ ಹೆಚ್ಚಿನ ವೇಗವುಳ್ಳ ಗಾಳಿಗೆ ೨೦ರಿಂದ ೩೦ ಮೈಲುಗಳೂ ಇವು ಸಹಜವಾದ ವೇಗಗಳು ಸಂಪಿಗೆ ೩೫ ಮೈಲುಗಳಿಗಿಂತ ಹೆಚ್ಚಿನ ವೇಗವುಳ್ಳ ಗಾಳಿಯನ್ನೇ ಬಿರುಗಾಳಿಯನ್ನುತೇವೆ. ಗಾಳಿಯ ವೇಗವು ೪೦ ಮೈಲುಗಳಿಗಿಂತ ಹೆಚ್ಚಾದರೆ ಅನಾಹುತಗಳು ಸಂಭವಿಸುವವು