ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೪೨-



ಪಟ್ಟಿ. ನಂಬರ ೧.

ತಾರೀಖು ಗಾಳಿಯು ಬೀಸುವ ದಿಕ್ಕು ಗಾಳಿಯ ವೇಗ ಮೋಡಗಳ ಪ್ರಮಾಟಣ ಮತ್ತು ವಿಧ
೧. ೨೫-೭-೧೬ ನೈರುತ್ಯ ಮಂದಮಾರುತ
೨.
೩.

ಎಂಟನೇ ಅಧ್ಯಾಯ.

ಹವೆಯ ಉಷ ಮಾನ

[ಸೂಚನೆ-ಹವೆಯ ಚಲನೆಯಲ್ಲಿರುವ ವ್ಯತ್ಯಾಸಗಳನ್ನು ಕೆಲವು ದಿನಗಳು ನಿರೀಕ್ಷಿಸಿದನಂತರ ಹವೆಯಲ್ಲಿ ಎಷ್ಟು ಅಂಶಗಳ ಉಷ್ಣವಿರುತ್ತದೆಂಬುದನ್ನು ಗೊತ್ತು ಮಾಡಬೇಕು. ಹವೆಯ ಸೆಕೆಯನ್ನು ಅಳೆಯುವದಕ್ಕೆ ಅವಶ್ಯವಾದ ಯಂತ್ರಗಳನ್ನು ಒಂದೊಂದು ಶಾಲೆಯಲ್ಲ ತರಿಸಿಟ್ಟಿರಬೇಕು. ಈ ಅಧ್ಯಾಯದಲ್ಲಿ ಸೂಚಿಸಲ್ಪಡುವ ನಿರೀಕ್ಷಣೆಗಳಿಗೆ ಅವಶ್ಯವಾದ ಉಷ್ಣಮಾಪಕ ಯಂತ್ರಗಳು ಯಾವವೆಂದರೆ:-

(೧) ಸಾಧಾರಣ ಉಷ್ಣ ವಾಪಕಯಂತ್ರ, (೨) ಒಂದೊಂದು ದಿನದಲ್ಲ. ಹವಯ ಉಷ್ಣದ ಪರಮಾವಧಿ ಮತ್ತು ಕನಿಷ್ಟಾವಧಿ ಇವೆರಡನ್ನೂ ತೋರಿಸುವ ಉಷ್ಣಮಾಪಕ ಯಂತ್ರ]

ಬಿಸಲು ಬಹಳ ಹೆಚ್ಚಾಗಿರುವಾಗ ನಾವು ಮನೆಗಳಲ್ಲಿದ್ದರೂ ಸೆಕೆಯ ತಾಪವು ಹೆಚ್ಚಾಗಿರುವಂತೆ ತೋರುವದು. ಆಗ ಬೀಸುವ ಗಾಳಿಯು ನಮ್ಮ ಮೈಗೆ ಸೋಕಿದರೆ ಉಷ್ಣವಾಗಿರುವಂತೆ ಕಂಡುಬರುವದು. ಚಳಿಗಾಲದಲ್ಲಿ ಮನೆಯಿಂದ