ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒಂದು ಬೈಲಿಗೆ ಹೋದರೆ, ಅಲ್ಲಿ ಗಾಳಿ ಬೀಸದಿದ್ದರೂ ಚಳಿಯೆನ್ನಿ ಸುವುದು. ಅಲ್ಲಿಂದ ತಿರಿಗಿ ಮನೆಗೆ ಬಂದರೆ ಚಳಿಯು ಸ್ವಲ್ಪ ಕಡಿಮೆಯಾಗುವದು ಬೇಸಿಗೆಯಲ್ಲಿ ಸೆಕೆಯು ಹೆಚ್ಚಾಗಿರುವದಕ್ಕೂ ಚಳಿಗಾಲದಲ್ಲಿ ಚಳಿಯು ಹೆಚ್ಚಾಗಿರುವದಕ್ಕೂ ನಮ್ಮ ಸುತ್ತಲು ವ್ಯಾಪಿಸಿರುವ ಹವೆಯಲ್ಲಿ ಉಷ್ಣವು ಹೆಚ್ಚು ಕಡಿಮೆಯಾಗುವದೇ ಕಾರಣವು. ಈ ಪ್ರಾಂತದಲ್ಲಿ ಬೇಸಿಗೆಯ ತಾಪವು ಅಧಿಕವಾಗಿರುವಾಗ ಕೆಲ ವರು ಮಹಾಬಲೇಶ್ವರ, ನೀಲಗಿರಿ ಮೊದಲಾದ ಎತ್ತರವಾದ ಪ್ರದೇಶಗಳಿಗೆ ಹೋ ಗುತ್ತಾರಷ್ಟೇ. ಆ ಪ್ರದೇಶಗಳ ಹವೆಯಲ್ಲಿ ಉಷ್ಣವು ನಮ್ಮ ಊರುಗಳ ಹವೆಯ ಇರುವದಕ್ಕಿಂತ ಕಡಿಮೆಯಾಗಿರುವದೇ ಇದಕ್ಕೆ ಕಾರಣವು. ನಾವು ಒಂದು ಪ್ರದೇಶದ ಶ್ರೀ ತೋಷ್ಟಗಳನ್ನು ಕುರಿತು ಮಾತನಾಡುವಾಗ ಆ ಪ್ರದೇಶದ ಹವೆಯ ಉತ್ಥದ ಹೆಚ್ಚು ಕಡಿಮೆಗಳನ್ನೇ ವಿಚಾರಮಾಡುತ್ತೇನೆ. - ಹವೆಯಲ್ಲಿ ಒಂದೊಂದು ಸಾರೆ ಉಷ್ಣವು ಹೆಚ್ಚಾಗಿರುವದೆಂತಲೂ ಒಂದೊಂ ದು ಸಾರೆ ಕಡಿಮೆಯಾಗಿರುವದೆಂತಲೂ ಜನರು ತಮಗೆ ತೋರಿಬಂದಂತೆ ಹೇಳು ತಾರಷ್ಟೇ. ಒಂದೇ ಊರಿನಲ್ಲಿರುವ ಇಬ್ಬರು ಹವೆಯ ಉಷ್ಣವನ್ನು ಕುರಿತು ಮಾತನಾಡುವಾಗ ಅದೇ ಸ್ಥಳದಲ್ಲಿ ಅದೇ ವೇಳೆಯಲ್ಲಿ ಹವೆಯಲ್ಲಿರುವ ಉಷ್ಣವನ್ನು ಒಬ್ಬನು ಹೆಜ್ಜೆಂತಲೂ ಮತ್ತೊಬ್ಬನು ಕಡಿಮೆಯೆಂತಲೂ ಹೇಳುವದಂಟು, ಮಹಾ ಬಲೇಶ್ವರದಿಂದ ಒಬ್ಬ ಪ್ರವಾಸಿಯು ಬಿಜಾಪುರದಿಂದ ಮತ್ತೊಬ್ಬ ಪ್ರವಾಸಿಯ ಪುಣೆ ಪಟ್ಟಣಕ್ಕೆ ಒಂದೇ ದಿನ ಬಂದರೆ, ಮಹಾಬಲೇಶ್ವರದಿಂದ ಬಂದವನು ಪುಣೆ ಯಲ್ಲಿ ಸೆಕೆಯು ಹೆಚ್ಚೆಂತಲೂ ಬಿಜಾಪುರದಿಂದ ಬಂದವನು ಪುಣೆಯಲ್ಲಿ ಚಳಿಯು ಹೆಚ್ಚೆಂತಲೂ ಹೇಳುವದು ಸಹಜ. ಹೀಗೆ ಒಂದು ಪ್ರದೇಶದ ಹವೆಯ ಉಷ್ಣ ಮಾನವು ಒಬ್ಬೊಬ್ಬರಿಗೆ ಒಂದೊಂದು ವಿಧವಾಗಿರುವಂತೆ ತೋರಿಬರುವದ ರಿಂದ ಅವರವರು ಹೇಳುವದರಲ್ಲಿ ಭರವಸವಿಡಲಾಗುವದಿಲ್ಲ. ನಾವು ಹವೆಯ ಶಿತೋಷ್ಣಗಳನ್ನು ಸ್ಪರ್ಶಜ್ಞಾನದಿಂದ ಗೊತ್ತು ಮಾಡುವ ದರಲ್ಲಿ ತಪ್ಪಾಗುವ ಸಂಭವವಿರುವದೆನ್ನುವದಕ್ಕೆ ಒಂದು ಪ್ರಯೋಗವನ್ನು ಮಾಡ ಬಹುದು, ಮರು ಪಾತ್ರೆಗಳನ್ನು ತಂದು ಒಂದರಲ್ಲಿ ಕುದಿಯುವ ನೀರನ್ನೂ ಎರಡನೇದರಲ್ಲಿ ಸ್ವಲ್ಪ ಬಿಸಿಯಾದ ನೀರನ್ನೂ ಮೂರನೇದರಲ್ಲಿ ತಣ್ಣೀರನ್ನೂ ತುಂಬ ಬೇಕು. ಯಾವನಾದರೂ ಒಬ್ಬನು ಒಂದು ಕೈಯನ್ನು ಕುದಿಯುವ ನೀರಿನ ಪಾತ್ರೆ ಯ ಮೇಲೂ ಮತ್ತೊಂದು ಕೈಯನ್ನು ತಣ್ಣೀರಿನ ಪಾತ್ರೆಯ ಮೇಲೂ ಇಟ್ಟು