-೪೪-
ಒಂದು ಕ್ಷಣದನಂತರ ಎರಡೂ ಕೈಗಳನ್ನು ಸ್ವಲ್ಪ ಬಿಸಿಯಾಗಿರುವ ನೀರಿನಲ್ಲಿಡಬೇಕು. ಕುದಿಯುವ ನೀರಿನ ಪಾತ್ರೆಯನ್ನು ಮುಟ್ಟಿದ್ದ ಕೈಗೆ ಈ ನೀರು ತಂಪಾಗಿರುವಂತೆಯೂ ತಣ್ಣೀರಿನ ಪಾತ್ರೆಯನ್ನು ಮುಟ್ಟಿದ್ದ ಕೈಗೆ ಇದು ಬಿಸಿಯಾಗಿರುವಂತೆಯೂ ತೋರುವದು. ಆದ್ದರಿಂದ ಪದಾರ್ಥಗಳಲ್ಲಿರುವ ಉಷ್ಣವನ್ನು ಸರಿಯಾಗಿ ಅಳೆಯುವದಕ್ಕೆ ಒಂದು ಸಾಧನವು ಅವಶ್ಯವೆಂದು ಹೇಳಬೇಕಾದುದಿಲ್ಲ. ಈ ಸಾಧನವನ್ನೇ ಉಷ್ಣಮಾಪಕಯಂತ್ರವೆಂದು ಕರೆಯುತ್ತಾರೆ.*
ಉಷ್ಣಮಾಪಕಯಂತ್ರದಿಂದ ಹವೆಯ ಉಷ್ಣವನ್ನು ಅಳೆಯುವದನ್ನು ತಿಳಿಯುದಕ್ಕೆ ಮೊದಲು ಈ ಯಂತ್ರದ ರಚನೆಯನ್ನು ತಿಳಿಯಬೇಕು. ಒಂದು ಸಾಧಾರಣ ಉಷ್ಣ ಮಾಪಕಯಂತ್ರವನ್ನು ತಂದು ಅದನ್ನು ಪರೀಕ್ಷಿಸಬಹುದು. ಇಂಥ ಯಂತ್ರದಲ್ಲಿರುವ ಭಾಗಗಳು ಯಾವವೆಂದರೆ:-(೧) ಕಟ್ಟಿಗೆಯ (ಮರದ) ಪಟ್ಟಿ ಅಥವಾ ಕಟ್ಟು (೨) ಈ ಕಟ್ಟಿಗೆಯ ಪಟ್ಟಿಗೆ ಕೂಡಿಸಿದ ಗಾಜಿನ ಕೊಳಿವೆ; ಈ ಕೊಳಿವೆಯ ವ್ಯಾಸವು ಬಹಳ ಸಣ್ಣದಾಗಿದ್ದು ಅದರ ಬುಡದಲ್ಲಿ ಒಂದು ಗೋಲವಿರುತ್ತದೆ. ಈ ಗೋಲದಲ್ಲಿ ಕೊಳಿವೆಯ ಸ್ವಲ್ಪ ಭಾಗದಲ್ಲಿ ಪಾರಜವು (ಪಾದರಸವು) ತುಂಬಿದ್ದು ಕೊಳಿವೆಯ ಬಾಯಿ ಮುಚ್ಚಿರುತ್ತದೆ. ಈ ಕೊಳಿವೆಯ ಎರಡೂ ಪಾರ್ಶ್ವಗಳಲ್ಲಿ ಪಟ್ಟಿಯ ಮೇಲೆ ಸಮಾಂತರಗಳಲ್ಲಿ ಅಂಕೆಗಳನ್ನು ಗುರ್ತು ಮಾಡಿರುತ್ತಾರೆ. ಈ ಅಂಕೆಗಳು ಉದ್ದದ ಡಿಗ್ರಿಗಳನ್ನು(ಅಂಶಗಳನ್ನು) ತಿಳಿಸುತ್ತವೆ.
ಉಷ್ಣಮಾಪಕ ಯಂತ್ರಗಳ ಮೇಲೆ ಎಣಿಕೆಗಳನ್ನು ಗುರ್ತು ಮಾಡುವದರಲ್ಲಿ ಎರಡು ಪದ್ಧತಿಗಳು ರೂಢಿಯಲ್ಲಿರುತ್ತವೆ. ಇವುಗಳಲ್ಲಿ ಒಂದಕ್ಕೆ ಫಾರನಹೈಟ ಪದ್ದತಿಯಂತಲೂ ಮತ್ತೊಂದಕ್ಕೆ ಸೆಂಟಿಗ್ರೇಡ್ ಪದ್ದತಿಯಂತಲೂ ಹೆಸರು. ಬ್ರಿಟಿಷರ ರಾಜ್ಯದಲ್ಲಿ ವಿಶೇಷವಾಗಿ ಮೊದಲನೇದನ್ನು ಅನುಸರಿಸುತ್ತಾರೆ. ಯುರೋಪ ಖಂಡದ ಇತರ ರಾಜ್ಯಗಳಲ್ಲಿ ಎರಡನೇದು ಹೆಚ್ಚಾಗಿ ರೂಢಿಯಲ್ಲಿರುತ್ತದೆ. ಒಂದು ಪಾತ್ರೆಯಲ್ಲಿ ಹಿಮದ ಗಡ್ಡೆಯನ್ನು (ಭರ್ಪವನ್ನು) ಕೂಡಿಸಿ ಅದರಲ್ಲಿ ಉಷ್ಣಮಾಪಕ ಯಂತ್ರವನ್ನು ಇಟ್ಟರೆ, ಯಂತ್ರದಲ್ಲಿರುವ ಸಾರಜವು ಇಳಿದು ಒಂದು ಮಟ್ಟಿಗೆ ಬಂದು ಸ್ಥಿರವಾಗಿ ನಿಲ್ಲುವದು ಆ ಸ್ಥಳಕ್ಕೆ ಸರಿಯಾಗಿ ಪಟ್ಟಿಯ ಮೇಲೆ ಒಂದು
*ಯಂತ್ರಗಳ ಬೆಲೆಯು ಹೆಚ್ಚಾಗಿಲ್ಲದೇ ಇರುವದರಿಂದ ಪ್ರತಿಯೊಂದು ಶಾಲೆಯಲ್ಲಿ ಒಂದು ಯ೦ತ್ರವಾದರೂ ಇರಬೇಕು.