ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

– ೪೫ – ಗುರ್ತು ಮಾಡಿ ಅದನ್ನು ನೀರು ಹೆಪ್ಪುಗಟ್ಟುವ (ಘನೀಭವವಾಗುವ) ಬಿಂದು ಎಂದು ಸೂಚಿಸಿರುತ್ತದೆ. ಇದೇ ಉಷ್ಣ ಮಾಪಕಯಂತ್ರವನ್ನು ಕುದಿಯುವ ನೀರಿನಲ್ಲಿಟ್ಟರೆ ಪಾರಜವು ಮೇಲಕ್ಕೇರಿ ಒಂದು ಮೆಟ್ಟಿನಲ್ಲಿ ಸ್ಥಿರವಾಗಿ ನಿಲ್ಲುವುದು; ಈ ಸ್ಥಳಕ್ಕೆ ಸರಿಯಾಗಿ ಪಟ್ಟೆಯಮೇಲೆ ಒಂದು ಗುರ್ತು ಮಾಡಿ ಅದನ್ನು ನೀರು ಕುದಿಯುವ ಬಿಂದು ಎಂದು ಸೂಚಿಸಿರುತ್ತದೆ. ಈ ಎರಡು ಬಿಂದುಗಳ ನಡುವೆ ಸಮನಾಂತರಗ ಳಲ್ಲಿ ಅಂಕೆಗಳನ್ನು ಹಾಕಿರುತ್ತಾರೆ. ಫಾರನ್‌ಹೈಟ ಪದ್ದತಿಯಲ್ಲಿ ನೀರು ಹೆಪ್ಪು ಗಟ್ಟುವ ಬಿಂದುವಿನಲ್ಲಿ ೩೨ ನ್ಯೂ ನೀರು ಕುದಿಯುವ ಬಿಂದುವಿನಲ್ಲಿ ೨೧೨ ನ್ನೂ, ಹಾಕಿರುತ್ತಾರೆ ಅಂದರೆ ಈ ಎರಡು ಬಿಂದುಗಳ ನಡುವೆ ೧೮೦ ಡಿಗ್ರಿಗಳಿರುತ್ತವೆ. ಸೆಂಟಿಗ್ರೇಡ್ ಪದ ತಿಯಲ್ಲಿ ನೀರು ಹೆಪ್ಪುಗಟ್ಟುವ ಬಿಂದುವಿನಲ್ಲಿ ಪೂಜಿಯನ್ನೂ (9) ನೀರು ಕುದಿಯುವ ಬಿಂದುವಿನಲ್ಲಿ ೧೦೦ರನ್ನೂ ಹಾಕಿರುತ್ತಾರೆ. ಈ ವಿಧದ ಅಂಕೆ ಗಳಲ್ಲಿ ೧೦೦ ಸಮಭಾಗಗಳಿರುತ್ತವೆ. ಪದಾರ್ಥಗಳಿಗೆ ಉಷ್ಣವನ್ನು ದೊರಕಿಸಿದರೆ ಅವು ವಿಸ್ತಾರವಾಗುವವಷ್ಟೇ ಉಷ್ಣವು ಕಡಿಮೆಯಾದರೆ ಅವು ಆಕುಂಚನವನ್ನು ಹೊಂದುತ್ತವೆ. ಇದೇ ಪ್ರಕಾರ ಪಾರಜವು ಉಷ್ಣದಿಂದ ವಿಸ್ತಾರವಾಗಿ ತಂಪಿನಿಂದ ಆಕುಂಚಿತವಾಗುತ್ತದೆ. ಉಷ್ಣ ವನ್ನು ಅಳೆಯುವದಕ್ಕೆ ಪಾರಜವನ್ನು ಉಪಯೋಗಿಸುವದರಲ್ಲಿ ಅನುಕೂಲವು ಹೆಚ್ಚು. ಇದು ಉಷ್ಣದಿಂದ ನೀರಿನಷ್ಟು ಬೇಗ ವಾಯುರೂಪವನ್ನು ಹೊಂದುವ ದಿಲ್ಲ; ನೀರಿನಷ್ಟು ಬೇಗ ಘನರೂಪಕ್ಕೂ ಬರುವದಿಲ್ಲ. ಪಾರಜವು ನೀರಿಗಿಂತ ಬಹಳ ತೀವ್ರ ಕಾಯುತ್ತದೆ ಮತ್ತು ಬಹಳ ತೀವ್ರ ಆರುತ್ತದೆ. ಒಂದು ಉಷಾ ಪಕಯಂತ್ರದ ಗೋಲವನ್ನು ಕೈಯಿಂದ ಸ್ವಲ್ಪಹೊತ್ತು ಹಿಡಿದರೆ ಅದರೊಳಗಿನ ಪಾರಜವು ಮೇಲಕ್ಕೇರುವದನ್ನು ನೋಡಬಹುದು, ಹವೆಯು ನಮ್ಮ ಸುತ್ತಲು ಎಲ್ಲಾ ಪ್ರದೇಶಗಳಲ್ಲಿ ವ್ಯಾಪಿಸಿರುತ್ತದಷ್ಟೇ ಉಷ ಮಾಪಕಯಂತ್ರವನ್ನು ಒಂದು ಕೋಣೆಯಲ್ಲಿ ಗೋಡೆಗೆ ತಗಲುಹಾಕಿದರೆ, ಅಲ್ಲಿರುವ ಹವೆಯ ಉಷ್ಣವನ್ನು ತಿಳಿಯಬಹುದು. ಮನೆಯ ಹೊರಗಿನ ಕಟ್ಟ ಯಲ್ಲಿ (ಹಜಾರದಲ್ಲಿ ಹಾಕಿದ್ದರೆ ಅಲ್ಲಿಯ ಸೆಕೆಯನ್ನು ಅಳೆಯಬಹುದು. ಈ ಯಂತ್ರವನ್ನು ಬಿಸಲಲ್ಲಿಟ್ಟರೆ ಪಾರಜವು ಬಹಳ ತೀವ್ರ ಕಾದು ಮೇಲಕ್ಕೇರು ಇದೆ. ಇದರಿಂದ ನಮಗೆ ಹವೆಯ ಉಷ ಮಾನವು ಸರಿಯಾಗಿ ತಿಳಿಯುವದಿಲ್ಲ.