ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೪೬ - ಇದನ್ನು ನೆಲದ ಮೇಲಿಟ್ಟರೂ ನಮಗೆ ಹವೆಯಲ್ಲಿರುವ ಉಷ್ಣವು ಸರಿಯಾಗಿ ಗೊತ್ತಾಗುವದಿಲ್ಲ. ನೆಲವನ್ನು ಸೋಕಿರುವ ಹವೆಯಲ್ಲಿ ಶೀತೋಷ್ಣಗಳ ವ್ಯತ್ಯಾಸ ಗಳು ನಮ್ಮ ಸುತ್ತಲು ಇರುವ ಹವೆಯಲ್ಲುಂಟಾಗುವದಕಿಂತ ಬಹಳ ತೀವ್ರವಾಗಿ ಉಂಟಾಗುತ್ತವೆಆದ್ದರಿಂದ ಹವೆಯ ಉಷ್ಣವನ್ನು ಸರಿಯಾಗಿ ತಿಳಿಯಬೇಕಾದರೆ ಉಷ್ಣ ಮಾಪಕಯಂತ್ರವನ್ನು ಗಾಳಿಯು ಚನ್ನಾಗಿ ಬೀಸುವ ಮತ್ತು ನೆರಳಿರುವ ಸ್ಥಳದಲ್ಲಿ ನೆಲದಿಂದ ೪ ಅಡಿಗಳ ಎತ್ತರದಲ್ಲಿ ತೂಗಹಾಕಬೇಕು, * ಉಷ್ಣಮಾಪಕ ಯಂತ್ರದೊಳಗಿನ ಪಾರಜವು ಎಷ್ಟು ಎತ್ತರದವರೆಗೆ ಏರಿರುವ ದನ್ನು ಸರಿಯಾಗಿ ಹೇಳಬೇಕಾದರೆ ಪಾ ರಜದ ತುದಿಯು ನಮ್ಮ ಕಣ್ಣಿಗೆ ಸಮವಾ ಗಿಟ್ಟುಕೊಂಡು ಈ ಯಂತ್ರವನ್ನು ನೋಡಬೇಕು. ಪಾರಜದ ತುದಿಯು ನಮ್ಮ ಕಣ್ಣಿ ಗಿಂತ ಎತ್ತರವಾಗಿ ಅಥವಾ ತಗ್ಗಾಗಿದ್ದರೆ, ಅದರ ಎತ್ತರವನ್ನು ನಿರ್ಣಯಿಸುವದ ರಲ್ಲಿ ತಪ್ಪಾಗುತ್ತದೆ.

  • ಉಷ್ಣ ಮಾಸಕಯಂತ್ರದಿಂದ ಯಾವದೊಂದು ವೇಳೆಯಲ್ಲಿ ಹವೆಯ ಉಷ್ಣವನ್ನು ಗೊತ್ತುಮಾಡುವದು ಮೊದಲನೇ ನಿರೀಕ್ಷಣೆಯು, ಇದನ್ನು ತಿಳಿದ ಮೇಲೆ ಕೆಲವು ದಿನಗಳಲ್ಲಿ ಹಗಲಿನ ಬೇರೆ ಬೇರೆ ವೇಳೆಗಳಲ್ಲಿ ಉಷ್ಣ ಮಾಪಕಯಂ ತ್ರವನ್ನು ನೋಡಿ ಹವೆಯ ಉಷ್ಣವು ಯಾವ ವೇಳೆಯಲ್ಲಿ ಹೆಚ್ಚಾಗಿರುತ್ತದೆ, ಯಾವ ವೇಳೆಯಲ್ಲಿ ಕಡಿಮೆಯಾಗಿರುತ್ತದೆ ಎಂಬ ವಿಷಯಗಳನ್ನು ನಿರ್ಣಯಿಸಬೇಕು. ಕೆಲವು ದಿನಗಳವರೆಗೂ ಈ ನಿರೀಕ್ಷಣೆಯನ್ನು ನಡಿಸಿ ಆಯಾ ದಿನದ ಉಷ್ಣಮಾನದ ಅಂಶಗಳನ್ನು ಬರೆಯಬೇಕು. ಸಾಮಾನ್ಯವಾಗಿ ಬೆಳಿಗ್ಗೆ ಹವೆಯಲ್ಲಿ ಉಷ್ಣವು ಕಡಿಮೆ ಯಾಗಿದ್ದು ಬರಬರುತ್ತ ಹೆಚ್ಚಾಗುವದು. ಸುಮಾರು ೨ ಘಂಟೆಯವರೆಗೂ ಹೆಚ್ಚಾಗಿದ್ದು ಅನಂತರ ಕಡಿಮೆಯಾಗುತ್ತಾ ಬರುವುದು. ಇದಕ್ಕೆ ಕಾರಣ ವೇನು?
  • ಸರ್ಕಾರದವರು ಹವೆಯ ನಿರೀಕ್ಷಣೆಗಾಗಿ ಏರ್ಪಡಿಸಿದ ಸ್ಥಳವು ಸಮೀಪದಲ್ಲಿದ್ದರೆ ಅದನ್ನು ಹುಡುಗರಿಗೆ ತೋರಿಸಬೇಕು ಎಲ್ಲಾ ಕಡೆಗಳಿಂದ ಗಾಳಿಯ ಪ್ರವಾಹವಿರುವ ಹಾಗೆ ಬೈಲಿನಲ್ಲಿ ಒಂದು ಗುಡಿಸಲನ್ನು (

ರೋಪಡಿಯನ್ನು ಕಟ್ಟಿ ಅದರಲ್ಲಿ ನೆಲದಿಂದ ೪ ಅಡಿಗಳ ಎತ್ತರದಲ್ಲಿ ಈ ಯಂತ್ರವನ್ನು ತೂಗಹಾಕಿರುತ್ತಾರೆ.

  • ಉಷ್ಣಮಾಸಕ ಯ೦ತ್ರದ ಪಾರಜದ ಎತ್ತರವನ್ನು ಗೊತ್ತು ಮಾಡುವದರಲ್ಲಿ ಹುಡು ಗರಿಗೆ ತಕ್ಕಷ್ಟು ಅಭ್ಯಾಸವಿರಬೇಕು,

ಅ೦ತರಿಕ್ಷದ ನಿರೀಕ್ಷಣೆಯಲ್ಲಿ ಋತುಭೇದಗಳಿಗೆ ಕಾರಣಗಳನ್ನು ವಿಚಾರ ಮಾಡಿರುತ್ತೇ ನನೇ. ಅವುಗಳ ಪುನರಾವೃ ಕ್ರಿಯ:ದ ಈ ವಿಷಯವು ಸ್ಪಷ್ಟವಾಗುವದು.