- ೪೭ -
ಹಗಲಲ್ಲಿ ಒಂದೊಂದು ವೇಳೆಯಲ್ಲಿ ಉಷ್ಣಮಾಪಕಯಂತ್ರದ ಪಾರಜವು ಯಾವ ಮೆಟ್ಟಿನವರೆಗೆ ಏರುವದೆಂಬುವದನ್ನು ತಿಳಿದು ಅನಂತರ ದಿನದಿನಕ್ಕೂ ಹವೆಯ ಉಷ್ಣಮಾನದಲ್ಲುಂಟಾಗುವ ವ್ಯತ್ಯಾಸವನ್ನು ತಿಳಿಯುವದಕ್ಕೆ ಪ್ರಯತ್ನ ಮಾಡಬೇಕು. ಪ್ರತಿನಿತ್ಯವೂ ನಮಗೆ ಅನುಕೂಲವಾದ ಒಂದು ನಿಯಮಿತ ವೇಳೆ ಯಲ್ಲಿ ಅಂದರೆ ಬೆಳಿಗ್ಗೆ ೯ ಘಂಟೆಗೆ ಅಥವಾ ಮಧ್ಯಾಹ್ನದನಂತರ ೨ ಘಂಟೆಗೆ ಈ ಯಂತ್ರವನ್ನು ಪರೀಕ್ಷಿಸಿ ಆಯಾ ದಿನದ ಉಷ್ಣ ಮಾನವನ್ನು ಒಂದು ಪಟ್ಟಿಯಲ್ಲಿ ಬರೆಯಬೇಕು.
ಉಷ್ಣ ಮಾಪಕ ಯಂತ್ರದ ನಿರೀಕ್ಷಣೆ,
ವೇಳೆ-೯ ಘಂಟೆ.
ತಾರೀಖು | ಉಷ್ಣಮಾನ. | ತಾರೀಖು | ಉಷ್ಣಮಾನ. |
---|---|---|---|
ಆಗಸ್ಟ್ ೧ | ೭೦ | ಆಗಸ್ಟ್ ೫ | ೬೯ |
೨ | ೩೨ | ೬ | ೭೦ |
೩ | ೭೧ | ೭ | ೭೩ |
೪ | ೬೫ | ೮ | ೭೪ |
ಒಂದು ದಿನದ ಉಷ್ಣ ಮಾನಕ್ಕೂ ಮರುದಿನದ ಅಥವಾ ಹಿಂದಿನ ದಿನದ ಉಷ್ಣಮಾನಕ್ಕೂ ಇರುವ ತಾರುತಮ್ಯವನ್ನು ಒಂದು ನಕ್ಷೆಯಲ್ಲಿ ಬರೆದು ತೋರಿ ಸುವ ರೂಢಿಯಿರುತ್ತದೆ. ಒಂದು ಕಾಗದದ ಮೇಲೆ ಸಣ್ಣ ಸಣ್ಣ ಚೌಕಾಕಾರದ ಮನೆಗಳ ರೇಖೆಗಳನ್ನು ತೆಗೆದು ಕಾಗದದ ಒಂದು ಪಾರ್ಶ್ವದಲ್ಲಿ ಉಷ್ಣದ ಡಿಗ್ರಿಗ ಳನ್ನೂ ಇದಕ್ಕೆ ಅಡ್ಡವಾಗಿ ಆಯಾ ತಿಂಗಳ ತಾರೀಖುಗಳನ್ನೂ ಗುರ್ತು ಮಾಡ ಬೇಕು. ಆಯಾ ದಿನದ ಉಷ್ಣಮಾನವನ್ನು ತಿಳಿಸಲು ಸರಿಯಾದ ಅಂಕೆಯ ಸಾ ಲಿನಲ್ಲಿ ಒಂದು ಬಿಂದುವನ್ನು ಗುರ್ತು ಮಾಡಬೇಕು. ಹೀಗೆ ಪ್ರತಿನಿತ್ಯವೂ ಹಾಕಿ< ದ ಗುರ್ತುಗಳನ್ನು ಕೂಡಿಸಿ ಒಂದು ರೇಖೆಯನ್ನು ತೆಗೆದರೆ ಈ ರೇಖೆಯಿಂದ ಒಂದು ದಿನದ ಉಷ್ಣಕ್ಕೂ ಮತ್ತು ಮರುದಿನದ ಉಷ್ಣಕ್ಕೂ ಇರುವ ತಾರತ ಮೃವು ಸ್ಪಷ್ಟವಾಗುವದು.