ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೪೯ - ಇವೆ. ಈ ಕೊಳಿವೆಯ ಅಡಿಯ ಭಾಗದಲ್ಲಿ ಪಾರಜವನ್ನೂ ನಮ್ಮ ಎಡ ಪಾರ್ಶ್ವಕ್ಕೆ ಇರುವ ಭುಜದ ಮೇಲ್ಬಾಗದಲ್ಲಿ ಗೋಲವು ಪೂರ್ಣವಾಗಿ ತುಂಬಿರುವಂತೆಯೂ ಬಲ ಪಾರ್ಶ್ವದ ಭುಜದ ಮೇಲ್ಬಾಗದಲ್ಲಿ ಗೋಲವು ಅರ್ಧ ತುಂಬಿರುವಂತೆಯೂ ಆಿ ಹಾಲ ಎಂಬ ಮದದ್ರವವನ್ನೂ ಹಾಕಿರುತ್ತಾರೆ. ಒಂದೊಂದು ಭುಜ ದಲ್ಲ ಒಂದು ಕಬ್ಬಿಣದ ತುಂಡು ಪಾರಜದ ಮೇಲ್ಬಾಗದಲ್ಲಿ ಕೊಳವೆಗೆ ಅಂಟ. ಕೊಂಡಿರುತ್ತದೆ. ಆಲ್ಗೊಹಾಲವು ಬಹಳ ತೀವ್ರವಾಗಿ ಕಾಯುವ ಸ್ವಭಾವವನ್ನು ಹೊಂದಿರುವದರಿಂದ ಹವೆಯಲ್ಲಿ ಸ್ವಲ್ಪ ಸೆಕೆಯಿದ್ದರೂ ಕೊಳಿವೆಯಲ್ಲಿರುವ ದ್ರವವು ವಿಸ್ತಾರವಾಗುವದು ಎಡಪಾರ್ಶ್ವದ ಗೋಲದಲ್ಲಿ ದ್ರವವು ವಿಸ್ತಾರ ವನ್ನು ಹೊಂದಿದರೆ, ಕೊಳಿವೆಯ ಅಡಿಯ ಭಾಗದಲ್ಲಿರುವ ಪಾರಜವನ್ನು ಹೂಡು ವದು. ಈ ಪಾರಜವು ಬಲಪಾರ್ಶ್ವದ ಭುಜದಲ್ಲಿ ಮೇಲಕ್ಕೇರಿ ಅದರಲ್ಲಿರುವ ಕಬ್ಬಿ ಣದ ತುಂಡನ್ನು ನೂಕುತ್ತ ಹೋಗುವದು, ಹವೆಯ ಉಷ್ಣವು ಕಡಿಮೆಯಾದಾಗ ಬಲಪಾರ್ಶ್ವದ `ಭುಜದಲ್ಲಿರುವ ಆಲೊಹಾಲವು ಸಂಕುಚಿತವಾಗಿ ಪಾರಜವನ್ನು ಕೆಳಗೆ ಒತ್ತುವದು, ಪಾರಜವು ಇಳಿಯುವಾಗ ಕಬ್ಬಿಣದ ತುಂಡು ಮೇಲೆ ಉಳಿದು ಉಷ್ಣದ ಪರಮಾವಧಿಯನ್ನು ಸೂಚಿಸುವದು. ಬಲಪಾರ್ಶ್ವದಲ್ಲಿ ಪಾರ ಜವು ಕೆಳಗೆ ಬರುತ್ತಾ ಎಡಪಾರ್ಶ್ವದ ಭುಜದಲ್ಲಿ ಮೇಲಕ್ಕೇರಿ ಅಲ್ಲಿರುವ ಕಬ್ಬಿ ಣದ ತುಂಡನ್ನು ಮೇಲಕ್ಕೆ ನೂಕುವದು, ಎಡಪಾರ್ಶ್ವದ ಭುಜದಲ್ಲಿ ಆ ಹಾಲವು ಸಂಕುಚಿತವಾಗುತ್ತಾ ಪಾರಜವು ಮೇಲ ಮೇಲಕ್ಕೆ ಹೋಗುತ್ತಿರುವದು. ಶೀತವು ಕಡಿಮೆಯಾಗಿ ಆಿ ಹಾಲವು ವಿಸ್ತಾರವಾಗುವದಕ್ಕೆ ಆರಂಭಿಸಿದರೆ, ಪಾರಜವು ಈ ಪಾರ್ಶ್ವದಲ್ಲಿ ಕೆಳಗೆ ಇಳಿಯುತ್ತಾ ಬರುವದು. ಕಬ್ಬಿಣದ ತುಂಡು ಮಾತ್ರ ಮೇಲೆ ಉಳಿದು ಉಷ್ಣದ ಕನಿಷ್ಟಾವಧಿಯನ್ನು ತಿಳಿಸುವದು. ಒಂದು ಸಾರೆ ನಾವು ಈ ಯಂತ್ರವನ್ನು ನಿರೀಕ್ಷಿಸಿದನಂತರ ಈ ಕಬ್ಬಿಣದ ತುಂಡುಗಳನ್ನು ಲೋಕಚುಂಬಕದಿಂದ ( Magnet-ಮ್ಯಾಗ್ನಟ್) ಪಾರಜದವರೆಗೂ ಇಳಿಸ ಬೇಕು. ಹಾಗೆ ಮಾಡದಿದ್ದರೆ ಪಾರಜವು ಈ ತುಂಡುಗಳನ್ನು ಈ ಅವಧಿಗಳಿಗಿಂ ತಲೂ ಮೇಲಕ್ಕೆ ದೂಡುವವರೆಗೆ ಇವು ಅಲ್ಲೇ ಉಳಿಯುವವು. ಇಂಥ ಯಂತ್ರದ ಉಪಯೋಗವನ್ನು ಹುಡುಗರಿಗೆ ತಿಳಿಸಿದನಂತರ, ಅವರು ಅದನ್ನು ಕ್ರಮವಾಗಿ ನೀರಿಕ್ಷಿಸಲುಪಕ್ರಮಿಸಬಹುದು. ಪ್ರತಿನಿತ್ಯವೂ ಬೆಳಿಗ್ಗೆ ೮ ಅಥವಾ ೯ ಘಂಟೆಗೆ ಈ ಉಪ್ಪಮಾಪಕ ಯಂತ್ರವನ್ನು ನೋಡಿ ಹಿಂದಿನ ದಿನದ ಹನೆಯ ಉಷ್ಟಮಾನದ ಪರಮಾವಧಿಯನ್ನೂ ಕನಿಷ್ಟಾವಧಿಯನ್ನೂ ಗುರ್ತು