ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- ೫೨ -

ಆಬರ್ಡೀನ ಪಟ್ಟಣದ ೧೯೦೬ನೇ ವರ್ಷದ ನವಂಬರ ತಿಂಗಳ ಮೊದ ಆರು ದಿನಗಳ ಉಷ್ಣಮಾನವು:

ತಾರೀಖು. ಉಷ್ಣಮಾನದ ಪರಮಾವಧಿ. ಉಷ್ಣಮಾನದ ಕನಿಷ್ಠಾವಧಿ. ಸರಸರಿ ಉಷ್ಣಮಾನ.
ನವಂಬರ ೧ ೫೨ ಡಿ. ೪೮ ಡಿ. ಎಷ್ಟು?
೫೧ ಡಿ. ೪೮ ಡಿ. ಸದರ
೫೧ ಡಿ. ೪೮ ಡಿ. ಸದರ
೫೧ ಡಿ. ೪೭ ಡಿ. ಸದರ
೫೦ ಡಿ. ೪೦ ಡಿ. ಸದರ
೪೯ ಡಿ. ೩೯ ಡಿ. ಸದರ

ಒಂದೊಂದು ದಿನದ ಸರಾಸರಿ ಉಷ್ಣಮಾನವನ್ನು ತಿಳಿದಮೇಲೆ, ಆಯ ತಿಂಗಳ ಕಡೆಯಲ್ಲಿ ಇವುಗಳನ್ನೆಲ್ಲ ಒಟ್ಟು ಕೂಡಿಸಿರುವ ಸಂಖ್ಯೆಯನ್ನು ೩೦ ಅಥವ ೩೧ ರಿಂದ ಭಾಗಿಸಿದರೆ, ಆ ತಿಂಗಳ ಹವೆಯ ಸರಾಸರಿ ಉಷ್ಣ ಮಾನವು ತಿಳಿಯುವದು. ಹೀಗೆಯೇ ಒಂದು ವರ್ಷದ ೩೬೫ ದಿನಗಳ ಸರಾಸರಿ ಉಷ್ಣಮಾನಗಳನ ಕೂಡಿಸಿ ೩೬೫ ರಿಂದ ಭಾಗಿಸುವದರಿಂದ ಅಥವಾ ೧೨ ತಿಂಗಳ ಸರಾಸರಿ ಉಷ್ಣಮಾನಗಳನ್ನು ಕೂಡಿಸಿ ೧೨ ರಿಂದ ಭಾಗಿಸುವದರಿಂದ ಆ ವರ್ಷದ ಸರಾಸ ಉಷ್ಣಮಾನವನ್ನು ತೆಗೆಯಬಹುದು. ಇದೇ ರೀತಿಯಲ್ಲಿ ಒಂದು ಪ್ರದೇಶದ ೧ರಿಂದ ೧೨ ವರ್ಷಗಳ ಸರಾಸರಿಯನ್ನು ಕೂಡಿಸಿ ಆ ಪ್ರದೇಶದ ಹವೆಯ ಸರಾಸರಿ ಉಷ್ಣಮಾನವನ್ನು ತಿಳಿಯಬಹುದು. ಇಷ್ಟೇ ಅಲ್ಲದೆ ವರ್ಷದ ಆಯಾ ತಿಂಗಳ ಸರಾಸರಿಯನ್ನೂ ಗೊತ್ತು ಮಾಡಬಹುದು. ನಮ್ಮ ದೇಶದಲ್ಲಿ ಸರ್ಕಾರದ ಮುಖ್ಯ ಮುಖ್ಯವಾದ ಸ್ಥಳಗಳ ಹವೆಯ ಉಷ್ಣಮಾನವನ್ನು ಗೊತ್ತು ಮಾಡುರುತ್ತಾರೆ.