ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೫೧ - ಒಂದು ದಿನದ ಉಷ್ಣಮಾನದ ಪರಮಾವಧಿಯನ್ನೂ ಕನಿಷ್ಟಾವಧಿಯನ್ನೂ ಗೊತ್ತುಮಾಡುವದು ಮಾತ್ರವಲ್ಲದೆ ದಿನದ ಯಾವ ಯಾವ ವೇಳೆಗಳಲ್ಲಿ ಉಷ್ಣವೂ ಶೀತವೂ ಹೆಚ್ಚಾಗಿರುವವೆಂಬದನ್ನು ಹುಡುಗರು ಅರಿಯಬೇಕು. ಅಂತರಿಕ್ಷದ ಪರಿಸ್ಥಿ ತಿಯಲ್ಲಿ ಯಾವ ಹೆಚ್ಚು ಕಡಿಮೆ ಇಲ್ಲದಿದ್ದರೆ, ಹಗಲಲ್ಲಿ ಒಂದರಿಂದ ಎರಡು ಘಂಟೆ ಯವರೆಗೆಹೆಚ್ಚಾದ ಸೆಕೆಯೂ ಸೂರ್ಯೋದಯಕ್ಕೆ ಮುಂಚೆ ಸುಮಾರು ನಾಲ್ಕು ಘಂಟೆಗೆ ಹೆಚ್ಚಾದ ಚಳಿಯೂ ಇರುತ್ತದೆ. ಉಷ್ಣಮಾನದ ಸರಾಸರಿ ಅವಧಿ ಒಬ್ಬ ಮನುಷ್ಯನು ಕೂಲಿಕೆಲಸದಿಂದ ಒಂದು ದಿನ ೮ ಆಣೆಗಳನ್ನೂ ಎರಡನೇ ದಿನ ೬ ಆಣೆಗಳನ್ನೂ ಮೂರನೇ ದಿನ ೯ ಆಣೆಗಳನ್ನೂ ನಾಲ್ಕನೇ ದಿನ ೭ ಆಣೆಗಳನ್ನೂ ಸಂಪಾದಿಸಿದರೆ, ಅವನು ದಿನ ಒಂದಕ್ಕೆ ೭!! ಆಣೆಗಳಂತೆ ಸಂಸಾ ದಿಸಿದ ಹಾಗಾಯಿತು. ಇದನ್ನೇ ಅವನ ನಾಲ್ಕು ದಿನಗಳ ಸರಾಸರಿ ಸಂಪಾದನೆ ಯೆಂದು ನಾವು ಹೇಳುತ್ತೇವೆ. ಒಂದು ಉಗಿಬಂಡಿಯ ಮೊದಲನೇ ಘಂಟೆ ಯಲ್ಲಿ ೧೫ ಮೈಲುಗಳ ವೇಗದಿಂದಲೂ ಎರಡನೇ ಘಂಟೆಯಲ್ಲಿ ೨೦ ಮೈಲುಗಳ ವೇಗದಿಂದಲೂ ಮೂರನೇ ಘಂಟೆಯಲ್ಲಿ ೨೫ ಮೈಲುಗಳ ವೇಗದಿಂದಲೂ ಓಡಿ ದರೆ, ಅದರ ಸರಾಸರಿ ವೇಗವು ಘಂಟೆಗೆ ೨೦ ಮೈಲುಗಳೆಂದು ಹೇಳಬಹುದು. ಇದೇ ರೀತಿಯಲ್ಲಿ ಉಷ್ಣಮಾಪಕಯಂತ್ರವನ್ನು ಘಂಟೆಗೊಂದು ಸಾರೆ ನೋಡು ತಾ ೨೪ ಘಂಟೆಗಳ ಉಷ್ಣಮಾನವನ್ನು ಗುರ್ತುಮಾಡಿ ಈ ಅಂಶಗಳನ್ನು ಒಟ್ಟು ಗೂಡಿಸಿ ೨೪ ರಿಂದ ಭಾಗಿಸಿದರೆ, ಆ ದಿನದ ಸರಾಸರಿ ಉಷ್ಣಮಾನವು ನಮಗೆ ತಿಳಿಯುವದು. ಹೀಗೆ ಘಂಟಿಗೊಂದು ಸಾರೆ ಉಷ್ಯಮಾಸಕಯಂತ್ರ ವನ್ನು ನೋಡುವದು ಸುಲಭವಾದ ಕೆಲಸವಲ್ಲ. ಇದಕ್ಕೆ ಬದಲಾಗಿ 'ಆಯಾ ದಿನದ ಉಷ್ಣಮಾನದ ಪರಮಾವಧಿಯನ್ನೂ ಕನಿಷ್ಠಾವಧಿಯನ್ನೂ ಒಟ್ಟು ಕೂಡಿಸಿ ಬಂದ ಸಂಖ್ಯೆಯ ಅರ್ಧವನ್ನು ತೆಗೆದುಕೊಂಡರೆ, ಅದು ಸ್ವಲ್ಪ ಹೆಚ್ಚು 'ಕಡಿಮೆ ಆ ದಿನದ ಸರಾಸರಿ ಉಷ್ಣಮಾನವಾಗುತ್ತದೆ. ಒಂದು ದಿನದ ಬನ್ನ ಮಾನದ ಪರಮಾವಧಿಯು ೮೮ ಡಿಗ್ರಿಗಳಿದ್ದು ಕನಿಷ್ಟಾವಧಿಯು ೭೬ ಡಿಗ್ರಿಗಳಿ ದ್ದರೆ, ಆ ದಿನದ ಸರಾಸರಿ ಉತ್ಥಮಾನವು ೮೨ ಡಿಗ್ರಿಗಳೆಂದು ಹೇಳಬಹುದು.