ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೨೪ - ಬೇರೆ ಬೇರೆ ಪ್ರದೇಶಗಳ ಉಷ ಮಾನವನ್ನು ವ್ಯತ್ಯಾಸವಾಗುವಂತೆ ಮಾಡು ಮುಖ್ಯ ಕಾರಣಗಳು ಮೂರು ಇರುತ್ತವೆ (0) ಅಕ್ಷಾಂಶ:- ವಿಷುವದ್ರೇಖೆಯ ಸಮೀಪದಲ್ಲಿರುವ ಪ್ರದೇಶಗಳಲ್ಲಿ ಹೆಚ್ಚು ಉಷ್ಣವಿದ್ದು, ಅಲ್ಲಿಂದ ಧ್ರುವಗಳ ( ಮೇರುಗಳ ) ಕಡೆಗೆ ಹೋಗುತ್ತಾ ಉಷ್ಣ ವು ಕಡಿಮೆಯಾಗುವದು, [ (೧) ಪೃಥ್ವಿಯ ಮೇಲಿನ ಎಲ್ಲಾ ಪ್ರದೇಶಗಳಲ್ಲಿ ಸೂರ್ಯನ ಕಿರಣಗಳ ಒಂದೇ ವಿಧವಾಗಿ ಬೀಳುವದಿಲ್ಲ. ವಿಷುವದ್ರೇಖೆಯ ಸಮೀಪದಲ್ಲಿರುವ ಉಷ್ಣತೆ ಲಯದಲ್ಲಿ ಮಾತ್ರ ಸೂರ್ಯನ ಕಿರಣಗಳು ಸ್ವಲ್ಪ ಹೆಚ್ಚು ಕಡಿಮೆ ಲಂಬವಾಗಿ ಬೀಳುತ್ತವೆ, ಈ ವಲಯದ ಉತ್ತರಕ್ಕಾಗಲಿ ದಕ್ಷಿಣಕ್ಕಾಗಲಿ ಹೋದರೆ ಅಲ್ಲಿ ಸೂರ್ಯನ ಕಿರಣಗಳು ಲಂಬವಾಗಿ ಬೀಳುವದಿಲ್ಲ. ಆದ್ದರಿಂದ ವಿಷುವದ್ರೇಖೆಯಿಂದ ಹೆಚ್ಚು ದೂರಹೋದಂತೆ ಶೀತವು ಹೆಚ್ಚಾಗುವದು.] (೨) ಸಮುದ್ರಮಟ್ಟಕ್ಕಿಂತ ಎತ್ತರ:- ಒಂದು ಪ್ರದೇಶದ ಎತ್ತರವ ಹೆಚ್ಚಿದ್ದಷ್ಟು ಅಲ್ಲಿಯ ಉಷ್ಣವು ಕಡಿಮೆಯಾಗುವದು, (೨) ಹವೆಯು ಕಾಯುವ ಕ್ರಮದಲ್ಲಿ ಒಂದು ವಿಶೇಷವಿರುತ್ತರ ಹವೆಯು ಸೂರ್ಯನಿಂದ ಬರುವ ಉಷ್ಣದ ಸ್ವಲ್ಪ ಭಾಗವನ್ನು ಮಾತ್ರ ಹಿಡಿದಿಟ್ಟ ಕೊಂಡು ಹೆಚ್ಚಿನ ಭಾಗವನ್ನು ನೆಲಕ್ಕಾಗಲಿ ನೀರಿಗಾಗಲಿ ಮುಟ್ಟುವಂತೆ ಬಿಡ ವರು, ರಾತ್ರಿಯಲ್ಲಿ ನೆಲವೂ ನೀರೂ ಹಗಲಲ್ಲಿ ಧರಿಸಿದ ಉಷ್ಣವನ್ನು ಪುನಃ ಆಕೆ ಶಕ್ಕೆ ಬಿಡುವವು. ಆದ್ದರಿಂದ ಭೂಮಿಗೆ ತಗಲಿರುವ ಗಾಳಿಯು ಅತ್ಯುಷ್ಣನಾಗಿದ ಮೇಲೆ ಹೋಗುತ್ತಾ ಅದರ ಉಷ್ಣವು ಕಡಿಮೆಯಾಗುವದು. ಇಷ್ಟೇ ಅಲ್ಲದೆ ಭೂವಿ ಯ ಸಮೀಪದಲ್ಲಿರುವ ಹವೆಯು ಕಾದು ಉನ್ನತ ಪ್ರದೇಶಗಳಿಗೆ ಹೋದ ಗೆ ಕೆಳಗೆ ಆಕ್ರಮಿಸಿಕೊಂಡಿದ್ದ ಸ್ಥಳಕ್ಕಿಂತ ಹೆಚ್ಚು ಸ್ಥಳದಲ್ಲಿ ವ್ಯಾಪಿಸಿ ವದು. ಆದ್ದರಿಂದ ಅದರ ಉಷ್ಣವು ಹೆಚ್ಚಿನ ಸ್ಥಳದಲ್ಲಿ ಹಂಚಲ್ಪಡುವದ ಈ ಕಾರಣದಿಂದ ಮೇಲೆಮೇಲೆ ಹೋದಂತೆ ಪ್ರದೇಶಗಳು ಕೆಳಗೆ ಇರುವ ಗಳಿಗಿಂತ ಶೀತಲವಾಗಿ ಕಾಣುವವು. (೩) ಸಮುದ್ರ ಸಾಮಾನ್ಯ:- ಒಂದು ಪ್ರದೇಶವು ಸಮುದ್ರಕ್ಕೆ ಸವಿ ದಲ್ಲಿದ್ದರೆ, ಅಲ್ಲಿ ಶೀತೋಷ್ಣಗಳು ಕಡಿಮೆಯಾಗಿರುತ್ತವೆ.